ದೆಹಲಿಯಿಂದ ಲಂಡನ್‌ವರೆಗೆ ಸಂಚರಿಸಲಿದೆ ಈ ಟ್ರಾವೆಲ್ಸ್ ಬಸ್

ಪ್ರತಿಯೊಬ್ಬರಿಗೂ ಎಲ್ಲಿಗಾದರೂ ಪ್ರವಾಸ ಮಾಡಬೇಕೆಂಬ ಬಯಕೆ ಇರುತ್ತದೆ. ಇನ್ನೂ ಕೆಲವರಿಗೆ ಇಡೀ ಪ್ರಪಂಚವನ್ನು ಸುತ್ತ ಬೇಕೆಂಬ ಕನಸಿರುತ್ತದೆ. ಆದರೆ ಅನೇಕ ಜನರಿಗೆ ಈ ಕನಸು ಕನಸಾಗಿಯೇ ಉಳಿಯುತ್ತದೆ. ಅದನ್ನು ನೆರವೇರಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವೇ ಆಗುವುದಿಲ್ಲ.

ದೆಹಲಿಯಿಂದ ಲಂಡನ್‌ವರೆಗೆ ಸಂಚರಿಸಲಿದೆ ಈ ಟ್ರಾವೆಲ್ಸ್ ಬಸ್

ಪ್ರಪಂಚದಾದ್ಯಂತ ಪ್ರಯಾಣಿಸಲು ಬಯಸುವವರಿಗಾಗಿ ಖಾಸಗಿ ಟ್ರಾವೆಲ್ಸ್ ಕಂಪನಿಯೊಂದು ವಿಶಿಷ್ಟ ಯೋಜನೆಯೊಂದನ್ನು ಆರಂಭಿಸಿದೆ. ಗುರುಗ್ರಾಮ ಮೂಲದ ಖಾಸಗಿ ಟ್ರಾವೆಲ್ಸ್ ಕಂಪನಿಯ ಬಸ್ ದೆಹಲಿಯಿಂದ ಲಂಡನ್‌ಗೆ ಸಂಚರಿಸಲಿದೆ. ಈ ಬಸ್ 70 ದಿನಗಳ ಪ್ರವಾಸದ ಅವಧಿಯಲ್ಲಿ 18 ದೇಶಗಳ ಮೂಲಕ 20,000 ಕಿ.ಮೀ ಸಂಚರಿಸಲಿದೆ.

ದೆಹಲಿಯಿಂದ ಲಂಡನ್‌ವರೆಗೆ ಸಂಚರಿಸಲಿದೆ ಈ ಟ್ರಾವೆಲ್ಸ್ ಬಸ್

ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಹೆಸರಿನ ಟ್ರಾವೆಲ್ ಕಂಪನಿಯ ಈ ಬಸ್ ಆಗಸ್ಟ್ 15ರಂದು ದೆಹಲಿ ಹಾಗೂ ಲಂಡನ್ ನಡುವೆ ತನ್ನ ಮೊದಲ ಪ್ರಯಾಣವನ್ನು ಆರಂಭಿಸಿದೆ. ಟ್ರಾವೆಲ್ಸ್ ಕಂಪನಿಯು ಈ ಬಸ್ ಸೇವೆಗೆ ಬಸ್ ಟು ಲಂಡನ್ ಎಂಬ ಹೆಸರನ್ನಿಟ್ಟಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ದೆಹಲಿಯಿಂದ ಲಂಡನ್‌ವರೆಗೆ ಸಂಚರಿಸಲಿದೆ ಈ ಟ್ರಾವೆಲ್ಸ್ ಬಸ್

ಈ ಬಸ್‌ನಲ್ಲಿ ಪ್ರಯಾಣಿಸುವವರು ಮ್ಯಾನ್ಮಾರ್, ಥೈಲ್ಯಾಂಡ್, ಲಾವೋಸ್, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಕಜಕಿಸ್ತಾನ್, ರಷ್ಯಾ, ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್, ಜೆಕ್ ರಿಪಬ್ಲಿಕ್, ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ ಹಾಗೂ ಫ್ರಾನ್ಸ್ ಮೂಲಕ ಲಂಡನ್ ತಲುಪಲಿದ್ದಾರೆ.

ದೆಹಲಿಯಿಂದ ಲಂಡನ್‌ವರೆಗೆ ಸಂಚರಿಸಲಿದೆ ಈ ಟ್ರಾವೆಲ್ಸ್ ಬಸ್

ಈ ಪ್ರವಾಸಕ್ಕಾಗಿ, ಟ್ರಾವೆಲ್ಸ್ ಕಂಪನಿಯು 20 ವಿಶೇಷ ಸೀಟುಗಳ ಬಸ್ ಅನ್ನು ಬಳಸಿದೆ. ಈ ಎಲ್ಲಾ ಸೀಟುಗಳು ಬಿಜಿನೆಸ್ ಕ್ಲಾಸ್ ಗೆ ಸೇರಿವೆ. ಬಸ್‌ನಲ್ಲಿ 20 ಪ್ರಯಾಣಿಕರ ಜೊತೆಗೆ ಚಾಲಕ, ಸಹಾಯಕ ಚಾಲಕ, ಗೈಡ್ ಹಾಗೂ ಹೆಲ್ಪರ್ ಇರಲಿದ್ದಾರೆ. ಪ್ರತಿ ಇಂಟರ್ ವಲ್ ನಂತರ ಗೈಡ್ ಬದಲಾಗುತ್ತಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ದೆಹಲಿಯಿಂದ ಲಂಡನ್‌ವರೆಗೆ ಸಂಚರಿಸಲಿದೆ ಈ ಟ್ರಾವೆಲ್ಸ್ ಬಸ್

ಟ್ರಾವೆಲ್ಸ್ ಕಂಪನಿಯು ಪ್ರಯಾಣಿಕರಿಗಾಗಿ ವೀಸಾ ವ್ಯವಸ್ಥೆಯನ್ನು ಸಹ ಮಾಡಲಿದೆ. ಈ ಪ್ರವಾಸವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರಯಾಣಿಕರು ತಮ್ಮಿಷ್ಟದ ಪ್ರವಾಸದ ಸ್ಥಳಗಳಿಗೆ ಅನುಗುಣವಾಗಿ ಒಂದು ಪ್ಯಾಕೇಜ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರಯಾಣಿಕರು ಒಂದು ಪ್ಯಾಕೇಜ್‌ಗೆ ಪಾವತಿಸಬೇಕಾಗುತ್ತದೆ.

ದೆಹಲಿಯಿಂದ ಲಂಡನ್‌ವರೆಗೆ ಸಂಚರಿಸಲಿದೆ ಈ ಟ್ರಾವೆಲ್ಸ್ ಬಸ್

ಈ ಬಸ್ ಮೂಲಕ ದೆಹಲಿಯಿಂದ ಲಂಡನ್‌ಗೆ ತೆರಳಲು ಬಯಸುವ ಪ್ರತಿ ಪ್ರಯಾಣಿಕರು ರೂ.15 ಲಕ್ಷ ಪಾವತಿಸಬೇಕಾಗುತ್ತದೆ. 70 ದಿನಗಳ ಈ ಪ್ರವಾಸದಲ್ಲಿ ಪ್ರಯಾಣಿಕರಿಗೆ 4 ಸ್ಟಾರ್ ಅಥವಾ 5 ಸ್ಟಾರ್ ಹೋಟೆಲ್‌ಗಳಲ್ಲಿ ತಂಗಲು ಅವಕಾಶ ನೀಡಲಾಗುವುದು. ಎಲ್ಲಾ ದೇಶಗಳಲ್ಲಿ ಪ್ರಯಾಣಿಕರಿಗೆ ಭಾರತೀಯ ಆಹಾರವನ್ನು ನೀಡಲಾಗುವುದು.

Most Read Articles

Kannada
English summary
Private travels company introduces Delhi to London bus. Read in Kannada.
Story first published: Tuesday, August 25, 2020, 14:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X