ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಭಾರತದಲ್ಲಿ ಅನೇಕ ಜನರು ವೈನ್ ಕುಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಕೆಲವರು ತಮ್ಮ ಕಾರುಗಳ ಒಳಗೆ ವೈನ್ ಬಾಟಲಿಗಳನ್ನು ಇಡುತ್ತಾರೆ. ಮನೆಯವರಿಗೆ ಗೊತ್ತಿಲ್ಲದಂತೆ ಕುಡಿಯಲು ಈ ರೀತಿ ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ವೈನ್ ಬಾಟಲಿಗಳನ್ನು ಕಾರಿನೊಳಗೆ ಇಡಬಾರದು ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಕಾರಿನಲ್ಲಿ ವೈನ್ ಬಾಟಲಿಗಳನ್ನು ಇಡುವುದರಿಂದ ವಿವಿಧ ಸಮಸ್ಯೆಗಳು ಉಂಟಾಗಬಹುದು. ಯಾವ ಯಾವ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸಾಮಾನ್ಯವಾಗಿ ಕಾರಿನೊಳಗಿನ ತಾಪಮಾನವು ಕಾರಿನ ಹೊರಗಿನ ತಾಪಮಾನಕ್ಕಿಂತ ಹೆಚ್ಚಾಗಿರುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸಂಗತಿ.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಅದರಲ್ಲೂ ಭಾರತದಂತಹ ಉಷ್ಣ ವಾತಾವರಣ ಇರುವ ದೇಶಗಳಲ್ಲಿ ಕಾರನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲಿಸಿದರೂ ಕಾರಿನ ಕ್ಯಾಬಿನ್ ಮಿಶ್ರ ಲೋಹದಂತೆ ಕುದಿಯಲು ಆರಂಭವಾಗುತ್ತದೆ. ಈ ಅತಿಯಾದ ಶಾಖವು ಕಾರಿನೊಳಗೆ ಇಟ್ಟಿರುವ ವೈನ್ ಬಾಟಲಿಯಲ್ಲಿ ವಿವಿಧ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ತುಂಬಾ ಬಿಸಿಯಾಗಿರುವ ಕಾರಿನ ಕ್ಯಾಬಿನ್ ಒಳಗೆ ವೈನ್ ಅನ್ನು ಇರಿಸಿದರೆ ರಾಸಾಯನಿಕ ಬದಲಾವಣೆಗಳು ಸಂಭವಿಸುತ್ತವೆ. ಈ ಕಾರಣಕ್ಕೆ ವೈನ್‌ನ ನಿಜವಾದ ರುಚಿ ಬದಲಾಗುತ್ತದೆ. ವೈನ್ ಅನ್ನು ಹೆಚ್ಚಾಗಿ ಗಾಜಿನ ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂಬುದನ್ನು ಗಮನಿಸಬೇಕು.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಗಾಜಿನ ಬಾಟಲಿಯೊಳಗಿರುವ ವೈನ್ ಹೆಚ್ಚಿನ ಶಾಖದಿಂದಾಗಿ ವಿಸ್ತರಿಸುತ್ತದೆ. ವೈನ್ ಮಾತ್ರವಲ್ಲದೆ ಬಾಟಲ್ ಕ್ಯಾಪ್ ಕೂಡ ವಿಸ್ತರಿಸುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಮುಚ್ಚಳವು ಸಡಿಲವಾಗುತ್ತದೆ. ಮುಚ್ಚಳವು ಸಡಿಲವಾದರೆ ವೈನ್ ಸೋರಿಕೆಯಾಗುತ್ತದೆ.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ವೈನ್ ಕಾರಿನ ಒಳಗೆ ದುರ್ವಾಸನೆ ಬೀರದಿದ್ದರೂ, ಕಾರಿನ ಒಳಗೆ ವೈನ್ ಬಾಟಲಿಯನ್ನು ಇಟ್ಟು ಕೊಳ್ಳದಿರುವುದು ಸೂಕ್ತ. ಹಾಗೆಯೇ ವೈನ್ ಬಾಟಲಿಯ ಮುಚ್ಚಳವು ಸಡಿಲವಾದರೆ ಗಾಳಿಯು ಬಾಟಲಿನ ಒಳಗೆ ನುಸುಳುತ್ತದೆ. ವೈನ್ ತನ್ನ ನಿಜವಾದ ರುಚಿಯನ್ನು ಕಳೆದುಕೊಳ್ಳಲು ಇದು ಸಹ ಒಂದು ಕಾರಣವಾಗುತ್ತದೆ.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಈ ಕಾರಣಕ್ಕೆ ನೀವು ವೈನ್ ಖರೀದಿಸಿದಾಗ ಇರುವ ರುಚಿ ಬದಲಾಗುತ್ತದೆ. ಹಾಗೆಯೇ ಅತಿಯಾದ ಶಾಖದಿಂದಾಗಿ ಗಾಜಿನ ಬಾಟಲ್ ಸ್ಫೋಟಗೊಳ್ಳುವ ಸಾಧ್ಯತೆಗಳು ಸಹ ಇರುತ್ತವೆ. ಈ ರೀತಿಯ ಸಮಸ್ಯೆಗಳನ್ನು ತಪ್ಪಿಸಲು, ನೀವು ವೈನ್ ಕುಡಿಯಲು ಬಯಸಿದರೆ, ಕೆಲವು ಸಂಗತಿಗಳನ್ನು ಅನುಸರಿಸಬೇಕು.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಕೆಲವು ಜನರು ಸಾಕಷ್ಟು ಸಮಯಕ್ಕೆ ಮುಂಚಿತವಾಗಿ ವೈನ್ ಖರೀದಿಸುತ್ತಾರೆ. ನಂತರ ಅದನ್ನು ಕಾರಿನೊಳಗೆ ಬಿಟ್ಟು ಬೇರೆ ಕೆಲಸಗಳನ್ನು ನೋಡುತ್ತಾರೆ. ವೈನ್ ಅನ್ನು ಮನೆಗೆ ತೆಗೆದುಕೊಂಡು ಹೋಗಿ ಕುಡಿಯುವುದು ಅವರ ಉದ್ದೇಶವಾಗಿರುತ್ತದೆ.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ನೀವು ಸಹ ಅವರಲ್ಲಿ ಒಬ್ಬರಾಗಿದ್ದರೆ, ಈ ಲೇಖನ ಓದಿದ ನಂತರ ನಿಮ್ಮ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಿ. ಅಂದರೆ ಎಲ್ಲಾ ಕೆಲಸ ಮುಗಿಸಿ ಮನೆಗೆ ಹೋಗುವ ಮುನ್ನ ವೈನ್ ಖರೀದಿಸಿ. ಇದರಿಂದ ವೈನ್ ಕಾರಿನೊಳಗೆ ದೀರ್ಘಕಾಲ ಉಳಿಯದಂತೆ ತಡೆಯ ಬಹುದು.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಒಂದು ವೇಳೆ ಕಾರಿನಲ್ಲಿ ವೈನ್ ಇದ್ದರೆ, ಕಾರನ್ನು ನೆರಳಿನಲ್ಲಿ ನಿಲ್ಲಿಸುವುದು ಉತ್ತಮ. ಆದರೆ ಕಾರನ್ನು ನೆರಳಿನಲ್ಲಿ ನಿಲ್ಲಿಸುವುದು ವೈನ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲು ಸಾಧ್ಯವಾಗದಿದ್ದರೂ ಕಾರನ್ನು ಸ್ವಲ್ಪ ತಂಪಾಗಿಡ ಬಹುದು.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಕಾರನ್ನು ನೆರಳಿನಲ್ಲಿ ನಿಲ್ಲಿಸುವುದರಿಂದ ಕಾರಿನ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳುವುದನ್ನು ತಪ್ಪಿಸಬಹುದು. ಇದರಿಂದ ಅಧಿಕ ಬಿಸಿಲಿನಿಂದ ವೈನ್ ಹಾಳಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಸಾಧ್ಯವಾದಷ್ಟು ಕಾರಿನ ಡಿಕ್ಕಿಯಲ್ಲಿ ವೈನ್ ಇಡುವುದನ್ನು ತಪ್ಪಿಸಿ.

ಕಾರಿನಲ್ಲಿ ವೈನ್ ಇಡುವುದರಿಂದ ಉಂಟಾಗುವ ಸಮಸ್ಯೆಗಳಿವು

ಕಾರಿನಲ್ಲಿ ಅತ್ಯಂತ ವೇಗವಾಗಿ ಬಿಸಿಯಾಗುವ ಭಾಗವೆಂದರೆ ಡಿಕ್ಕಿ. ಕಾರಿನ ಡಿಕ್ಕಿಯಲ್ಲಿ ವೈನ್ ಇಟ್ಟರೆ ವೇಗವಾಗಿ ಬಿಸಿಯಾಗುತ್ತದೆ. ಒಂದು ವೇಳೆ ಕಾರಿನಲ್ಲಿ ವೈನ್ ಇಟ್ಟು ಕಾರ್ ಅನ್ನು ನಿಲ್ಲಿಸಿ ಹೊರ ಹೋಗುವ ಸಂದರ್ಭ ಬಂದರೆ ವೈನ್ ಅನ್ನು ಕಾರಿನ ಮುಂಭಾಗ ಅಥವಾ ಹಿಂಭಾಗದ ಸೀಟಿನಲ್ಲಿ ಇಡಿ.

ಇದರಿಂದ ವೈನ್ ಬಾಟಲ್ ಹೆಚ್ಚು ಬಿಸಿಯಾಗುವುದನ್ನು ತಪ್ಪಿಸಬಹುದು. ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರಿ. ಕುಡಿದು ವಾಹನ ಚಾಲನೆ ಮಾಡುವುದರಿಂದ ನಿಮ್ಮ ಜೀವಕ್ಕೆ ಮಾತ್ರವಲ್ಲದೇ ಇತರರ ಜೀವಕ್ಕೂ ಅಪಾಯ ಸಂಭವಿಸುತ್ತದೆ.

ಒಂದು ವೇಳೆ ಕುಡಿದು ಮನೆಗೆ ತೆರಳಬೇಕು ಎನಿಸಿದರೆ ವಾಹನವನ್ನು ಒಂದೆಡೆ ಪಾರ್ಕ್ ಮಾಡಿ ಕ್ಯಾಬ್ ನಲ್ಲಿ ಮನೆ ತಲುಪಿ. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಕುಡಿದು ವಾಹನ ಚಾಲನೆ ಮಾಡುವುದು ಸಹ ಪ್ರಮುಖ ಕಾರಣ ಎಂಬುದು ಗಮನಾರ್ಹ.

ಈ ಕಾರಣಕ್ಕೆ ಹೊಸ ಮೋಟಾರು ವಾಹನ ಕಾಯ್ದೆಯ ಅನ್ವಯ ಕುಡಿದು ವಾಹನ ಚಾಲನೆ ಮಾಡುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. 2019 ರಲ್ಲಿ ಜಾರಿಗೆ ಬಂದ ಹೊಸ ಮೋಟಾರು ವಾಹನ ಕಾಯ್ದೆಯ ಅನ್ವಯ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈ ಕಾಯ್ದೆ ಜಾರಿಗೆ ಬರುವುದಕ್ಕೆ ಮುನ್ನ ಕುಡಿದು ವಾಹನ ಚಾಲನೆ ಮಾಡುವವರಿಗೆ ರೂ. 5,000 ಗಳವರೆಗೆ ದಂಡ ವಿಧಿಸಲಾಗುತ್ತಿತ್ತು.

ಈ ಕಾಯ್ದೆ ಜಾರಿಗೆ ಬಂದ ನಂತರ ಕುಡಿದು ವಾಹನ ಚಾಲನೆ ಮಾಡುವವರಿಗೆ ರೂ. 10,000 ಗಳ ದಂಡ ವಿಧಿಸಲಾಗುತ್ತದೆ. ಕೆಲವೊಮ್ಮೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ.

ಕೆಲವೊಮ್ಮೆ ವಾಹನ ಸವಾರರು ಚಾಲನೆ ಮಾಡುತ್ತಿದ್ದ ವಾಹನದ ಮೌಲ್ಯಕ್ಕಿಂತ ಅವರ ವಾಹನದ ಮೇಲೆ ವಿಧಿಸಲಾಗಿದ್ದ ದಂಡದ ಮೊತ್ತವೇ ಅಧಿಕವಾಗಿತ್ತು ಎಂಬುದು ಗಮನಾರ್ಹ.

Most Read Articles

Kannada
English summary
Problems from keeping wine in a hot car details
Story first published: Friday, August 13, 2021, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X