ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಹಲವಾರು ಅಲರ್ಟ್ ಲೈಟ್ ಗಳಿರುತ್ತವೆ. ಈ ಲೈಟ್ ಗಳು ಏರ್ ಬ್ಯಾಗ್, ಎಬಿಎಸ್ ಇತ್ಯಾದಿಗಳಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಆನ್ ಆಗುವ ಮೂಲಕ ಕಾರು ಚಾಲಕರಿಗೆ ಎಚ್ಚರಿಕೆ ನೀಡುತ್ತವೆ. ಕಾರು ಚಾಲಕರು ಈ ಅಲರ್ಟ್ ಲೈಟ್ ಗಳನ್ನು ನಿರ್ಲಕ್ಷಿಸದೆ ತಕ್ಷಣವೇ ಸಮಸ್ಯೆಯನ್ನು ಸರಿ ಪಡಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಕಾರಿನಲ್ಲಿ ಕೆಲವು ಅಲರ್ಟ್ ಲೈಟ್ ಗಳು ಸಾಮಾನ್ಯ. ಈ ಅಲರ್ಟ್ ಲೈಟ್ ಗಳು ಕಾರು ಚಾಲಕರಿಗೆ ಕೆಲವು ಮಾಹಿತಿಯನ್ನು ನೀಡುತ್ತವೆ. ಇವುಗಳಲ್ಲಿ ಫ್ಯೂಯಲ್ ಟ್ಯಾಂಕ್ ಲಿಡ್ ಬಗ್ಗೆ ಎಚ್ಚರಿಕೆ ನೀಡುವ ಲೈಟ್ ಸಹ ಸೇರಿದೆ. ಈ ಅಲರ್ಟ್ ಲೈಟ್ ಆನ್ ಆಗಿದ್ದರೆ ಫ್ಯೂಯಲ್ ಟ್ಯಾಂಕ್ ಅನ್ನು ಮುಚ್ಚಿಲ್ಲವೆಂದು ಅಥವಾ ಸರಿಯಾಗಿ ಮುಚ್ಚಿಲ್ಲವೆಂದು ಅರ್ಥ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಕೆಲವು ಬಾರಿ ಕಾರುಗಳಿಗೆ ಇಂಧನ ತುಂಬಿಸಿದ ನಂತರ ಹಲವು ಕಾರು ಚಾಲಕರು ಫ್ಯೂಯಲ್ ಟ್ಯಾಂಕ್ ಮುಚ್ಚಳವನ್ನು ಬಿಗಿಯಾಗಿ ಮುಚ್ಚಲು ಮರೆಯುತ್ತಾರೆ. ಈಗ ಮಾರಾಟವಾಗುತ್ತಿರುವ ಕಾರುಗಳಲ್ಲಿ ಫ್ಯೂಯಲ್ ಟ್ಯಾಂಕ್ ಮುಚ್ಚಳವನ್ನು ಕಾರಿನ ರಬ್ಬರ್'ಗೆ ಅಂಟಿಸಲಾಗಿರುತ್ತದೆ. ಇದರಿಂದ ಫ್ಯೂಯಲ್ ಟ್ಯಾಂಕ್ ಮುಚ್ಚಳ ಕಳೆದುಹೋಗುವ ಸಾಧ್ಯತೆಗಳು ಕಡಿಮೆ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಈ ಹಿಂದೆ ಫ್ಯೂಯಲ್ ಟ್ಯಾಂಕ್ ಮುಚ್ಚಳಗಳು ಕಳೆದು ಹೋಗುವ ಸಾಧ್ಯತೆಗಳಿದ್ದವು. ಅಥವಾ ಚಾಲಕರು ಪೆಟ್ರೋಲ್ ಬಂಕ್ ಗಳಲ್ಲಿಯೇ ಅವುಗಳನ್ನು ಮರೆತು ಬಿಡುತ್ತಿದ್ದರು. ಒಂದು ವೇಳೆ ಫ್ಯೂಯಲ್ ಟ್ಯಾಂಕ್ ಮುಚ್ಚಳಕ್ಕೆ ಸಂಬಂಧಿಸಿದ ಅಲರ್ಟ್ ಲೈಟ್ ಆನ್ ಆಗಿದ್ದರೆ ತಕ್ಷಣವೇ ಕಾರು ನಿಲ್ಲಿಸಿ, ಫ್ಯೂಯಲ್ ಟ್ಯಾಂಕ್ ಮುಚ್ಚಳವನ್ನು ಸರಿ ಪಡಿಸಿ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಆದರೆ ಎಲ್ಲಾ ಕಾರುಗಳು ಫ್ಯೂಯಲ್ ಟ್ಯಾಂಕ್ ಗಳಿಗೆ ಸಂಬಂಧಿಸಿದ ಅಲರ್ಟ್ ಲೈಟ್ ತಂತ್ರಜ್ಞಾನವನ್ನು ಹೊಂದಿಲ್ಲ. ಈ ತಂತ್ರಜ್ಞಾನವನ್ನು ಕೆಲವೇ ಕೆಲವು ಕಾರುಗಳಲ್ಲಿ ಮಾತ್ರ ನೀಡಲಾಗುತ್ತದೆ. ಹಳೆಯ ಕಾರುಗಳು ಈ ತಂತ್ರಜ್ಞಾನವನ್ನು ಹೊಂದಿರಲಿಲ್ಲ. ಹಾಗೆಯೇ ಹಳೆಯ ಕಾರುಗಳಲ್ಲಿ ಪೆಟ್ರೋಲ್ / ಡೀಸೆಲ್ ತುಂಬುವಾಗ, ಫ್ಯೂಯಲ್ ಟ್ಯಾಂಕ್ ಮುಚ್ಚಳವನ್ನು ಕಾರಿನಿಂದ ಪ್ರತ್ಯೇಕವಾಗಿ ತೆಗೆಯಬೇಕಾಗುತ್ತದೆ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಕೆಲವರು ಫ್ಯೂಯಲ್ ಟ್ಯಾಂಕ್ ಮುಚ್ಚಳವನ್ನು ಕಾರಿನ ಟಾಪ್ ಮೇಲೆ ಇಟ್ಟು ಇಂಧನ ತುಂಬಿಸಿದ ನಂತರ ಮುಚ್ಚಳವನ್ನು ಹಾಕಲು ಮರೆಯುತ್ತಾರೆ. ಇದರಿಂದ ಫ್ಯೂಯಲ್ ಟ್ಯಾಂಕ್ ಮುಚ್ಚಳಗಳು ಕಳೆದು ಹೋಗುವ ಸಾಧ್ಯತೆಗಳಿರುತ್ತವೆ. ಇಂಧನ ಟ್ಯಾಂಕ್ ಮುಚ್ಚಳ ಕಳೆದುಹೋಗಲು ಇದೇ ರೀತಿಯ ಹಲವು ಕಾರಣಗಳಿವೆ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಫ್ಯೂಯಲ್ ಟ್ಯಾಂಕ್ ಮುಚ್ಚಳವಿಲ್ಲದೆ ಕಾರ್ ಅನ್ನು ಚಲಾಯಿಸಿದರೆ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಫ್ಯೂಯಲ್ ಟ್ಯಾಂಕ್ ಅನ್ನು ಮುಚ್ಚಳದಿಂದ ಮುಚ್ಚುವುದರಿಂದ ಕಾರಿನ ಇಂಧನ ವ್ಯವಸ್ಥೆಯು ಸರಿಯಾದ ಒತ್ತಡವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಕಾರು ಸರಾಗವಾಗಿ ಚಲಿಸುತ್ತದೆ. ಯಾವುದೇ ಕಾರಣಕ್ಕೂ ಫ್ಯೂಯಲ್ ಟ್ಯಾಂಕ್ ಅನ್ನು ಸರಿಯಾಗಿ ಮುಚ್ಚದೆ ಕಾರ್ ಅನ್ನು ಚಾಲನೆ ಮಾಡಬೇಡಿ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಫ್ಯೂಯಲ್ ಟ್ಯಾಂಕ್ ಅನ್ನು ಮುಚ್ಚದಿದ್ದರೆ ಆವಿಯಾಗುವಿಕೆಯಿಂದ ಕಾರಿನಲ್ಲಿರುವ ಇಂಧನ ಖಾಲಿಯಾಗುತ್ತದೆ. ಇಂಧನದ ತ್ಯಾಜ್ಯವು ಪರಿಸರಕ್ಕೆ ತುಂಬಾ ಅಪಾಯಕಾರಿ. ಇದರಿಂದ ಕಾರು ಚಾಲಕರಿಗೂ ಹೆಚ್ಚುವರಿ ವೆಚ್ಚವಾಗುತ್ತದೆ. ಈಗಿನ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನೆನಪಿಸಿಕೊಂಡರೆ, ಯಾರೂ ಇಂಧನವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಇಂಧನ ವ್ಯರ್ಥವಾಗುವುದರಿಂದ ಕಾರಿನ ಮೈಲೇಜ್ ಸಹ ಕಡಿಮೆಯಾಗುತ್ತದೆ. ಇದರಿಂದ ಹೆಚ್ಚು ಇಂಧನ ತುಂಬಿಸಬೇಕಾಗುತ್ತದೆ. ಇಂಧನ ಟ್ಯಾಂಕ್ ಮುಚ್ಚಳದ ಬಗ್ಗೆ ಎಚ್ಚರಿಸುವ ಲೈಟ್ ಹೊಂದಿರುವ ಫ್ಯೂಯಲ್ ಟ್ಯಾಂಕ್ ಮುಚ್ಚಳವನ್ನು ಸರಿಯಾಗಿ ಮುಚ್ಚಲಾಗಿದೆಯೇ ಇಲ್ಲವೇ ಎಂಬುದನ್ನು ತಕ್ಷಣವೇ ತಿಳಿದುಕೊಳ್ಳಬಹುದು.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಅಲ್ಲದೆ ಕಾರುಗಳು ಸಾಕಷ್ಟು ಮೈಲೇಜ್ ನೀಡದ ಕಾರಣ, ಕಾರು ಮಾಲೀಕರು ಮುಂಜಾಗರೂಕತೆ ವಹಿಸುವುದು ಒಳ್ಳೆಯದು. ಸಣ್ಣ ನಿರ್ಲಕ್ಷ್ಯದಿಂದ ಅನಗತ್ಯವಾಗಿ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ ಎಂಬುದನ್ನು ಮರೆಯದಿರಿ. ಕೆಲವು ಕಾರುಗಳು ಹೆಚ್ಚು ಇಂಧನ ಬಳಸುತ್ತವೆ. ಕಾರುಗಳು ಈ ರೀತಿ ಹೆಚ್ಚು ಇಂಧನ ಬಳಸುವುದಕ್ಕೆ ಕಾರಣಗಳೇನು ಎಂಬುದನ್ನು ನೋಡುವುದಾದರೆ ದೋಷಯುಕ್ತ ಎಂಜಿನ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಈ ರೀತಿಯ ಎಂಜಿನ್'ಗಳು ಹೆಚ್ಚು ಇಂಧನವನ್ನು ಬಳಸುತ್ತವೆ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ಕೆಲವೊಮ್ಮೆ ಎಂಜಿನ್‌ನಲ್ಲಿ ಯಾವುದೇ ತೊಂದರೆ ಇಲ್ಲದಿದ್ದಲ್ಲಿ ಇತರ ಪ್ರಮುಖ ಭಾಗಗಳಲ್ಲಿ ಸಮಸ್ಯೆಗಳಿರುವ ಸಾಧ್ಯತೆಗಳಿರುತ್ತವೆ. ಪೆಟ್ರೋಲ್ ಎಂಜಿನ್‌ಗಳಲ್ಲಿ ಸ್ಪಾರ್ಕ್ ಪ್ಲಗ್‌ಗಳು ಅಥವಾ ಒ 2 ಸೆನ್ಸಾರ್'ಗಳ ದುರಸ್ತಿ ಅಥವಾ ಡೀಸೆಲ್ ಎಂಜಿನ್‌ಗಳಲ್ಲಿ ಫ್ಯೂಯಲ್ ಇಂಜೆಕ್ಟರ್‌ ಮೇಲೆ ಕೊಳೆಯಿದ್ದರೆ ಹೆಚ್ಚು ಇಂಧನ ಬಳಕೆಗೆ ಕಾರಣವಾಗಬಹುದು. ಇದರಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ. ಕಾರು ಹೆಚ್ಚು ಇಂಧನ ಬಳಸುತ್ತಿದ್ದರೆ ಈ ಸಮಸ್ಯೆಗಳನ್ನು ಪರಿಶೀಲಿಸಿ.

ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸರಿಯಾಗಿ ಮುಚ್ಚದಿದ್ದರೆ ಆಗ ಬಹುದಾದ ತೊಂದರೆಗಳಿವು

ತಪ್ಪಾದ ಎಂಜಿನ್ ಆಯಿಲ್ ಸಹ ಕಾರುಗಳು ಹೆಚ್ಚು ಇಂಧನ ಬಳಸಲು ಕಾರಣವಾಗುತ್ತದೆ. ಎಂಜಿನ್‌ನ ಸರಿಯಾದ ಕಾರ್ಯನಿರ್ವಹಣೆಗೆ ಎಂಜಿನ್ ಆಯಿಲ್ ಅತ್ಯಗತ್ಯ. ಎಂಜಿನ್ ಆಯಿಲ್'ನಲ್ಲಿ ವಿಭಿನ್ನ ಸರಣಿಗಳಿವೆ. ಕಾರಿಗೆ ಎಂಜಿನ್ ಆಯಿಲ್ ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕತೆ ವಹಿಸುವುದು ಬಹಳ ಮುಖ್ಯ. ನಿಗದಿಪಡಿಸಿರುವುದಕ್ಕಿಂತ ಹೆಚ್ಚು ದಪ್ಪವಿರುವ ಎಂಜಿನ್ ಆಯಿಲ್ ಬಳಸುತ್ತಿದ್ದರೆ ಚಾಲನೆಯಲ್ಲಿರುವ ಪಿಸ್ಟನ್‌ಗಳಿಗೆ ತೊಂದರೆಯಾಗುತ್ತದೆ. ಇದರಿಂದ ಕಾರಿನ ಎಂಜಿನ್ ಹೆಚ್ಚು ಬಿಸಿಯಾಗಿ ಹೆಚ್ಚು ಇಂಧನವನ್ನು ಬಳಸುತ್ತದೆ. ಆದ್ದರಿಂದ ಸರಿಯಾದ ಎಂಜಿನ್ ಆಯಿಲ್ ಬಳಸುವುದು ಒಳ್ಳೆಯದು.

Most Read Articles

Kannada
English summary
Problems of not closing fuel tank cap properly details
Story first published: Friday, September 10, 2021, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X