ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಭಾರತದಲ್ಲಿ ಕರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಲಾಕ್ ಡೌನ್ ನಿಂದ ಹಲವಾರು ವಿನಾಯಿತಿಗಳನ್ನು ನೀಡಲಾಗಿದೆ. ಕರೋನಾ ವೈರಸ್ ನೊಂದಿಗೆ ಜೀವದ ಜೊತೆಗೆ ಜೀವನವು ಸಾಗಲಿ ಎಂಬ ಕಾರಣಕ್ಕೆ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಇವುಗಳಲ್ಲಿ ಮನೆಯಿಂದ ಹೊರಬಂದಾಗ ಫೇಸ್ ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವಾರು ಸುರಕ್ಷತಾ ಕ್ರಮಗಳು ಸೇರಿವೆ. ದೇಶದೆಲ್ಲೆಡೆ ಈ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರುಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಫೇಸ್ ಮಾಸ್ಕ್ ಧರಿಸದವರಿಗೆ ಪುಣೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಆದರೆ ಖಾಸಗಿ ಕಾರುಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಇತ್ತೀಚಿಗೆ ಕೇಂದ್ರ ಆರೋಗ್ಯ ಇಲಾಖೆಯು ಸ್ಪಷ್ಟನೆಯನ್ನು ನೀಡಿತ್ತು. ಆದರೂ ದಂಡ ವಿಧಿಸುತ್ತಿರುವ ಪುಣೆ ಪೊಲೀಸರ ಕ್ರಮವು ಕಾರು ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಕಾರುಗಳಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರು ಫೇಸ್ ಮಾಸ್ಕ್ ಧರಿಸಬೇಕೆ, ಬೇಡವೇ ಎಂಬ ಗೊಂದಲ ಹಲವಾರು ದಿನಗಳಿಂದ ಕಾರು ಪ್ರಯಾಣಿಕರಲ್ಲಿ ಮನೆ ಮಾಡಿದೆ. ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಕೇಂದ್ರ ಗೃಹ ಇಲಾಖೆಯು ಹೊರಡಿಸಿದ ಮಾರ್ಗಸೂಚಿಗಳು ಈ ಗೊಂದಲಕ್ಕೆ ಕಾರಣವಾಗಿವೆ.

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಲ್ಲಿ, ಸಾರ್ವಜನಿಕ ಸ್ಥಳಗಳು, ಕೆಲಸದ ಸ್ಥಳಗಳು ಹಾಗೂ ಪ್ರಯಾಣದ ವೇಳೆ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವೆಂದು ಹೇಳಲಾಗಿದೆ. ಈ ಮಾರ್ಗಸೂಚಿಯ ಪ್ರಕಾರ, ಕಾರನ್ನು ಸಾರ್ವಜನಿಕ ಸ್ಥಳವೆಂದು ಪರಿಗಣಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಕಾರಿನ ವಿಂಡೋಗಳನ್ನು ತೆರೆದು ಏಕಾಂಗಿಯಾಗಿ ಪ್ರಯಾಣಿಸುತ್ತಿರುವಾಗ ಫೇಸ್ ಮಾಸ್ಕ್ ಧರಿಸದಿದ್ದರೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಆದರೆ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಕರೋನಾ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಆರೋಗ್ಯ ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಯು ಕಾರಿನಲ್ಲಿ ಪ್ರಯಾಣಿಸುವವರು ಫೇಸ್ ಮಾಸ್ಕ್ ಧರಿಸಬೇಕು ಎಂಬ ಯಾವುದೇ ಆದೇಶವನ್ನು ಒಳಗೊಂಡಿಲ್ಲ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಆರೋಗ್ಯ ಇಲಾಖೆಯು ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ. ಆದರೂ ಸಹ ಪುಣೆ ಪೊಲೀಸರು ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರು ಫೇಸ್ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುತ್ತಿದ್ದಾರೆ.

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಸ್ಪಷ್ಟ ಮಾರ್ಗಸೂಚಿಗಳು ಬರುವವರೆಗೂ, ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವವರು ಫೇಸ್ ಮಾಸ್ಕ್ ಧರಿಸದಿದ್ದರೆ ಪೊಲೀಸರು ದಂಡ ವಿಧಿಸುವ ಸಾಧ್ಯತೆಗಳಿವೆ. ಈ ಗೊಂದಲವು ಪುಣೆಗೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಈ ಗೊಂದಲ ಮುಂದುವರೆದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಈ ಗೊಂದಲದ ಮಧ್ಯೆಯೇ ಪುಣೆ ಪೊಲೀಸರು ಕಳೆದ ಮೂರು ದಿನಗಳಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಈ ಬಗ್ಗೆ ಪುಣೆಕ್ಕರ್ ನ್ಯೂಸ್ ವರದಿ ಮಾಡಿದೆ. ಈ ಬಗ್ಗೆ ಕಾರು ಚಾಲಕರು ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಗೊಂದಲದ ನಡುವೆಯೇ ಮೂರೇ ದಿನದಲ್ಲಿ ರೂ.25 ಲಕ್ಷ ದಂಡ ಸಂಗ್ರಹಿಸಿದ ಪೊಲೀಸರು

ಪೊಲೀಸರು ನಗದು ರೂಪದಲ್ಲಿ ಮಾತ್ರ ದಂಡವನ್ನು ಸಂಗ್ರಹಿಸುತ್ತಿದ್ದಾರೆ. ಯಾವುದೇ ಆನ್‌ಲೈನ್ ವಿಧಾನದ ಮೂಲಕ ಸ್ವೀಕರಿಸುತ್ತಿಲ್ಲವೆಂದು ಕಾರು ಚಾಲಕರು ದೂರಿದ್ದಾರೆ. ಆನ್‌ಲೈನ್ ಮೂಲಕವೂ ದಂಡ ಸ್ವೀಕರಿಸಲಿ ಎಂದು ಕೆಲ ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.

Most Read Articles

Kannada
English summary
Pune cops collects Rs 25 lakhs fine amidst confusion. Read in Kannada.
Story first published: Wednesday, September 9, 2020, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X