ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಐ 10, ಹ್ಯುಂಡೈ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಹ್ಯುಂಡೈ ಕಂಪನಿಯು ಹಲವು ಕಾರಣಗಳಿಗಾಗಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಿದೆ. ಆದರೂ ಈಗಲೂ ಸಹ ಈ ಕಾರ್ ಅನ್ನು ಭಾರತದ ರಸ್ತೆಗಳಲ್ಲಿ ಕಾಣಬಹುದು.

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಯುವಕನೊಬ್ಬ ಹ್ಯುಂಡೈ ಐ 10 ಕಾರನ್ನು ಕಳುವು ಮಾಡಿದ್ದ. ಆತ ಕಾರನ್ನು ಕದ್ದ 40 ನಿಮಿಷಗಳಲ್ಲಿಯೇ ಪೊಲೀಸರು ಆತನನ್ನು ಬಂಧಿಸಿ, ಆತನಿಂದ ಕಳುವು ಮಾಡಲಾದ ಕಾರ್ ಅನ್ನು ವಶ ಪಡಿಸಿಕೊಂಡು ಅದರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಚಿತ್ರ ಮೂಲ: ಪುಣೆ ಮಿರರ್

ಕಾರು ಕಳುವಾದ 40 ನಿಮಿಷಗಳಲ್ಲಿಯೇ ಕಾರುಗಳ್ಳನನ್ನು ಬಂಧಿಸಿ ಆತನಿಂದ ಕಾರನ್ನು ವಶಕ್ಕೆ ಪಡೆದಿರುವುದು ದೇಶದ ಜನರಲ್ಲಿ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ. ತಂತ್ರಜ್ಞಾನದ ಅರಿವು ಇರದವರಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಜಿಪಿಎಸ್ ತಂತ್ರಜ್ಞಾನದ ಮೂಲಕ ಪೊಲೀಸರು ಕಳುವಾದ ಕಾರನ್ನು ಇಷ್ಟು ಬೇಗ ಪತ್ತೆ ಹಚ್ಚಿದ್ದಾರೆ. ವಾಹನಗಳಲ್ಲಿ ಅಳವಡಿಸುವ ಜಿಪಿಎಸ್ ತಂತ್ರಜ್ಞಾನವು ಆ ವಾಹನವು ಎಲ್ಲಿದೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಲು ನೆರವಾಗುತ್ತದೆ.

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಈ ಹ್ಯುಂಡೈ ಐ 10 ಕಾರಿನ ಮಾಲೀಕರು ಸಹ ತಮ್ಮ ಕಾರಿನಲ್ಲಿ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಿದ್ದಾರು. ಇದರ ಬಗೆ ಅರಿವಿರದ ಕಳ್ಳ ಕಾರ್ ಅನ್ನು ಕದ್ದಿದ್ದಾನೆ. ಜೊತೆಗೆ ಅಲ್ಪ ಅವಧಿಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಜಿಪಿಎಸ್ ತಂತ್ರಜ್ಞಾನದಲ್ಲಿರುವ ವಿಶೇಷ ಫೀಚರ್ ಕಾರಣಕ್ಕೆ ಎಲ್ಲಾ ವಾಹನಗಳಲ್ಲಿ ಜಿಪಿಎಸ್ ಸಾಧನಗಳನ್ನು ಅಳವಡಿಸಿಕೊಳ್ಳಬೇಕೆಂದು ಆಟೋ ಮೊಬೈಲ್ ಉದ್ಯಮದ ತಜ್ಞರು ಶಿಫಾರಸು ಮಾಡುತ್ತಾರೆ.

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಜಿಪಿಎಸ್ ಸಾಧನಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ. ಈ ಜಿಪಿಎಸ್ ಸಾಧನವನ್ನು ಅಳವಡಿಸುವ ಮೂಲಕ ಕಳೆದುಹೋದ ವಾಹನ ಎಲ್ಲಿದೆ, ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಇದರಿಂದಾಗಿಯೇ ಪೊಲೀಸರು ಕಾಣೆಯಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ಪತ್ತೆ ಹಚ್ಚಿ ಅದರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯಲ್ಲಿ.

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಕಾರುಗಳ್ಳನನ್ನು ಪುಣೆಯ ಅಭಿಷೇಕ್ ಪನ್ವಾರ್ ಎಂದು ಗುರುತಿಸಲಾಗಿದೆ. ಕಾರು ಕಳುವಾದ ಕೆಲ ಹೊತ್ತಿನಲ್ಲಿಯೇ ಕಾರ್ ಅನ್ನು ವಶಕ್ಕೆ ಪಡೆದ ಕಾರಣಕ್ಕೆ ಕಾರಿಗೆ ಯಾವುದೇ ಹಾನಿಯಾಗಿಲ್ಲ. ಜೊತೆಗೆ ಕಾರಿನ ಬಿಡಿಭಾಗಗಳು ಹಾಗೆಯೇ ಉಳಿದುಕೊಂಡಿವೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ಕಾರು ಮಾಲೀಕರಾದ ಮುಷರಫ್ ಶೇಖ್'ರವರಿಗೆ ಅವರ ಸೆಲ್ ಫೋನ್ ಮೂಲಕ ಕಾರು ಕಳುವಾದ ವಿಷಯ ತಿಳಿದು ಬಂದಿದೆ. ಸೆಲ್ ಫೋನ್ ಮೂಲಕವೇ ಅವರು ತಮ್ಮ ಕಾರು ಇರುವ ಜಾಗವನ್ನು ಪತ್ತೆ ಹಚ್ಚಿದ್ದಾರೆ.

ಕಳುವಾದ 40 ನಿಮಿಷಗಳಲ್ಲಿಯೇ ಹ್ಯುಂಡೈ ಐ 10 ಕಾರನ್ನು ವಶಕ್ಕೆ ಪಡೆದ ಪೊಲೀಸರು

ನಂತರ ಚಾರ್ಬವಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ವನಾವಾಡಿ ಹಾಗೂ ಲಷ್ಕರ್ ಸಮೀಪ ಬಂಧಿಸಿದ್ದಾರೆ. ಈ ಬಗ್ಗೆ ಪುಣೆ ಮಿರರ್ ಪತ್ರಿಕೆ ವರದಿ ಮಾಡಿದೆ.

Most Read Articles

Kannada
English summary
Pune cops seizes Hyundai i10 car within 40 minutes of theft. Read in Kannada.
Story first published: Saturday, May 22, 2021, 20:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X