ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

By Nagaraja

ಎರಡು ವರ್ಷಗಳ ಹಿಂದೆ (2012) ಬಿಡುಗಡೆಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಅಣ್ಣಾ ಬಾಂಡ್' ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ನಾಯಕ ಪುನೀತ್ ಓಡಿಸಿರುವ ಅಸ್ತಿಪಂಜರದ ಆಕಾರದ 'ಸ್ಕೆಲಿಟನ್' ಬೈಕ್ ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿತ್ತು.

ಇದಕ್ಕಾಗಿ ದೇಶದ ಐಕಾನಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್‌‌ನ ಬೈಕನ್ನು ಕಸ್ಟಮೈಸ್ಡ್ ಮಾಡಲಾಗಿತ್ತು. ಇದರಲ್ಲಿ ಹೆಡ್‌ಲೈಟ್ ಜಾಗದಲ್ಲಿ ತಲೆಬುರುಡೆ, ಸಸ್ಫೆಷನ್‌ಗೆ ಹೊಂದಿಕೊಂಡು ಮುಂದಿನ ಚಕ್ರದ ಎರಡು ಬದಿಗಳಿಂದ ಕೈಗಳು ಹಾಗೂ ಟ್ಯಾಂಕ್ ಜಾಗದಲ್ಲಿ ಎಲುಬುಗಳು ಬೈಕ್‌ಗೆ ಭಯಾನಕ ರೂಪ ಕಲ್ಪಿಸುವಲ್ಲಿ ಯಶಸ್ವಿಯಾಗಿತ್ತು.

ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

ಸದ್ಯ ಪುನೀತ್ ಅವರ ಸ್ಕೆಲಿಟನ್ ಬೈಕ್ ತಮ್ಮದಾಗಿಸುವ ಅವಕಾಶ ನಿಮ್ಮದು. ಹೌದು, ಟೈಮ್ಸ್ ಮೊಬೈಲ್ಸ್ ಇಂತಹದೊಂದು ಅವಕಾಶ ಒದಗಿಸುತ್ತದೆ.

ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

ಟೈಮ್ಸ್ ಮೊಬೈಲ್ ಲಿಮಿಟೆಡ್‌ನ ಅಂತರ್ಜಾಲ ಸೇವೆಯಾದ ಫಾಲೊ ಸ್ಟಾರ್ ಆಕ್ಷನ್ಸ್‌ನಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತರು ಬಿಡ್ ಸಲ್ಲಿಸಬಹುದಾಗಿದೆ.

ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

ಪುನೀತ್ ಅವರ ಸ್ಕೆಲಿಟನ್ ಬೈಕ್‌ಗೆ ಒಂದು ಲಕ್ಷ ರು.ಗಳ ಮೂಲಧನದಿಂದ ಹರಾಜು ಆರಂಭಗೊಂಡಿದೆ. ಸದ್ಯ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ 20 ಬಿಡ್‌ಗಳು ಈಗಾಗಲೇ ಸಲ್ಲಿಸಲಾಗಿದ್ದು, ಹರಾಜು ದರ ಮೂರು ವರೆ ಲಕ್ಷ ರು.ಗಳನ್ನು ದಾಟಿದೆ.

ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

ಹಾಗಿದ್ದರೂ ಬೆಳ್ಳಿ ಹಾಗೂ ಕಪ್ಪು ವರ್ಣ ಮಿಶ್ರಿತ ಈ ಪೆಟ್ರೋಲ್ ಚಾಲಿತ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ರಸ್ತೆಯಲ್ಲಿ ಓಡಿಸುವಂತಿಲ್ಲ. ಯಾಕೆಂದರೆ ಇದಕ್ಕೆ ಆರ್‌ಟಿಒ ನಿಯಮದ ತೊಡಕು ಎದುರಾಗಲಿದೆ.

ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

ನಿಮ್ಮ ಮಾಹಿತಿಗಾಗಿ, ಸೆಲೆಬ್ರಿಟಿಗಳು ಬಳಕೆ ಮಾಡಿದ ವಸ್ತುಗಳನ್ನು ಫಾಲೊ ಸ್ಟಾರ್ ಮುಖಾಂತರ ಹರಾಜಿಗಿಡಲಾಗುತ್ತದೆ. ಇದರಂತೆ ಪುನೀತ್ ರಾಜ್‌ಕುಮಾರ್ ಸಹ ತಮ್ಮ ಸ್ಕೆಲಿಟನ್ ಬೈಕ್ ಹರಾಜಿಗಿಟ್ಟಿದ್ದಾರೆ.

ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

ಇಲ್ಲಿ ಸಂಗ್ರಹವಾಗುವ ಮೊತ್ತದ ಸ್ವಲ್ಪ ದುಡ್ಡು ಸಹಾಯಾರ್ಥ ಸಂಸ್ಥೆಗಳಿಗೆ ನೀಡಲಾಗುತ್ತದೆ. ಈ ಮೂಲಕ ಅಭಿಮಾನಿಗಳು ಹಾಗೂ ನಟರಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ.

ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

ಇತ್ತೀಚೆಗಷ್ಟೇ ಓಬೇರಾಯ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪುನೀತ್ ನೂತನ ಫಾಲೋ ಸ್ಟಾರ್ ಆಕ್ಷನ್ಸ್‌ಗೆ ಚಾಲನೆ ನೀಡಿದ್ದರು. ಇದೇ ಸಂದರ್ಭದಲ್ಲಿ ಆಂಡ್ರಾಯ್ಡ್, ಐಫೋನ್‌ಗಳಿಗೆ ಡೌನ್‌ಲೋಡ್ ಮಾಡಬಲ್ಲ ಫಾಲೋ ಆಪ್ ಅನ್ನು ಸಹ ಅನಾವರಣಗೊಳಿಸಲಾಗಿತ್ತು.

ಪುನೀತ್ ಅಣ್ಣಾ ಬಾಂಡ್ 'ಸ್ಕೆಲಿಟನ್' ಬೈಕ್ ನಿಮ್ಮದಾಗಿಸಿ!

ಅಷ್ಟಕ್ಕೂ ನೀವು ಪುನೀತ್ ಅವರ ಸ್ಕೆಲಿಟನ್ ಬೈಕ್ ಪಡೆಯಲು ಬಯುಸುತ್ತೀರಾ? ಹಾಗಿದ್ದರೆ ಇನ್ಯಾಕೆ ತಡ ಈಗಲೇ ಕೆಳಕಂಡ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ನಿಮ್ಮ ಬಿಡ್ ಸಲ್ಲಿಸಿ...ಇನ್ನು ಏಳು ದಿನಗಳಲ್ಲಿ ಹರಾಜು ಕೊನೆಗೊಳ್ಳಲಿದೆ.

More from DriveSpark

Article Published On: Thursday, March 13, 2014, 6:03 [IST]
English summary
Puneeth Rajkumar's skeleton bike goes for Auction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+