Just In
Don't Miss!
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Sports
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರದ್ದಾಗಲಿವೆ 1988ಕ್ಕೂ ಮೊದಲು ರಿಜಿಸ್ಟರ್ ಆದ ವಾಹನಗಳ ನಂಬರ್'ಗಳು
ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸಲು ಹಾಗೂ ಭದ್ರತಾ ಕಾರಣದಿಂದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರವರು 1988ಕ್ಕೂ ಮೊದಲು ನೀಡಲಾದ ರಿಜಿಸ್ಟ್ರೇಷನ್ ನಂಬರ್ ಗಳನ್ನು ನಿಷೇಧಿಸುವಂತೆ ಆದೇಶಿಸಿದ್ದಾರೆ.

ಈ ಸಂಖ್ಯೆಗಳನ್ನು ಹೊಂದಿರುವ ವಾಹನಗಳಿಗೆ ಪರ್ಯಾಯ ಸಂಖ್ಯೆಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. 1988ಕ್ಕೂ ಮೊದಲು ನೀಡಲಾದ ರಿಜಿಸ್ಟ್ರೇಷನ್ ನಂಬರ್ ಗಳನ್ನು ಹರಿಯಾಣ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ನಿಷೇಧಿಸಲಾಗಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಸಾರಿಗೆ ಇಲಾಖೆಯ ಪ್ರಕಾರ ಜನರು ತಮ್ಮ ವಾಹನಗಳ ನಂಬರ್ ಗಳನ್ನು ಪ್ರತಿಷ್ಟೆಯ ಸಲುವಾಗಿ ಬಳಸುತ್ತಾರೆ. ಅಂತಹ ಸಂಖ್ಯೆಗಳು ವಿಐಪಿ ಸಂಸ್ಕೃತಿಯನ್ನು ಉತ್ತೇಜಿಸುತ್ತವೆ. ಈ ಸಂಖ್ಯೆಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಜೊತೆಗೆ ಈ ಸಂಖ್ಯೆಯ ವಾಹನಗಳನ್ನು ಅಪರಾಧ ಕೃತ್ಯಗಳಿಗಾಗಿಯೂ ಬಳಸಲಾಗುತ್ತಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಐಪಿ ಸಂಖ್ಯೆಗಳನ್ನು ಹೊಂದಿರುವ ಕಾರಣಕ್ಕೆ ಪೊಲೀಸರು ಈ ವಾಹನಗಳನ್ನು ನಿಲ್ಲಿಸುವುದಿಲ್ಲ. ಇದರಿಂದಾಗಿ ಈ ವಾಹನಗಳನ್ನು ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಹಾಗೂ ಮಾರಾಟ ಮಾಡಲು ಸಹ ಬಳಸಲಾಗುತ್ತದೆ.

ಈ ಸಂಖ್ಯೆಗಳು ರಾಜ್ಯದ ಭದ್ರತೆಗೆ ಅಪಾಯಕಾರಿಯಾಗಿರುವ ಕಾರಣ ಇವುಗಳನ್ನು ನಿಷೇಧಿಸಲಾಗುವುದು ಎಂದು ಸಾರಿಗೆ ಇಲಾಖೆ ಹೇಳಿದೆ. ಹಳೆಯ ನಂಬರ್ ಗಳನ್ನು ಹಲವಾರು ವಾಹನಗಳಲ್ಲಿ ಬಳಸಲಾಗುತ್ತಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹಳೆಯ ಸಂಖ್ಯೆಗಳ ದಾಖಲೆಗಳು ಸಾರಿಗೆ ಇಲಾಖೆಯ ರಿಜಿಸ್ಟರ್ ನಲ್ಲಿಯೂ ಲಭ್ಯವಿಲ್ಲ. ಇದರಿಂದಾಗಿ ಅವುಗಳನ್ನು ಪತ್ತೆಹಚ್ಚುವುದು ಸಹ ಪೊಲೀಸರಿಗೆ ಸಮಸ್ಯೆಯಾಗುತ್ತಿದೆ. ಇದರ ನಡುವೆ ಪಂಜಾಬ್ ಸರ್ಕಾರವು ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಅನ್ನು ನವೀಕರಿಸುವ ದಿನಾಂಕವನ್ನು ಜನವರಿ 15ರವರೆಗೆ ವಿಸ್ತರಿಸಿದೆ.

ಪಂಜಾಬ್ ಸರ್ಕಾರವು ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆಯುವಂತೆ ಜನರಿಗೆ ಸೂಚಿಸಿದೆ. ಪಂಜಾಬ್‌ನಲ್ಲಿ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು, www.punjabtransport.org ಅಥವಾ www.sarathi.parivahan.gov.in ವೆಬ್‌ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅರ್ಜಿ ಸಲ್ಲಿಸಿದ ನಂತರ ಡಿಜಿಟಲ್ ರೂಪದಲ್ಲಿರುವ ಡ್ರೈವಿಂಗ್ ಲೈಸೆನ್ಸ್ ಅನ್ನು ಸಾರಿಗೆ ಅಪ್ಲಿಕೇಶನ್ ಅಥವಾ ಡಿಜಿಲಾಕರ್ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ದೆಹಲಿಯಲ್ಲಿರುವ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅನ್ನು ಡಿಸೆಂಬರ್ 15ರಿಂದ ಕಡ್ಡಾಯಗೊಳಿಸಲಾಗಿದೆ. ಈ ರಿಜಿಸ್ಟ್ರೇಷನ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ರೂ.5,500 ದಂಡ ವಿಧಿಸಲಾಗುತ್ತಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮೊದಲ ದಿನವೇ ದೆಹಲಿ ಪೊಲೀಸರು 239 ವಾಹನಗಳಿಗೆ ದಂಡ ವಿಧಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, 2019ರ ಏಪ್ರಿಲ್ 1 ಕ್ಕೂ ಮುನ್ನ ಖರೀದಿಸಿದ ವಾಹನಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ.

ಇದರ ನಂತರ ಮಾರಾಟವಾದ ವಾಹನಗಳು ಹೊಸ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ. ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಸಾಮಾನ್ಯ ನಂಬರ್ ಪ್ಲೇಟ್ ನಂತಿದ್ದರೂ ಅದರಲ್ಲಿರುವ ತಾಂತ್ರಿಕ ಲಕ್ಷಣಗಳು ವಿಭಿನ್ನವಾಗಿವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕ್ರೋಮಿಯಂ ಹೊಲೊಗ್ರಾಮ್ ಸ್ಟಿಕ್ಕರ್ ಹೊಂದಿರುತ್ತದೆ. ಇದರಲ್ಲಿ ವಾಹನದ ರಿಜಿಸ್ಟ್ರೇಷನ್ ನಂಬರ್, ಎಂಜಿನ್ ನಂಬರ್, ಚಾಸಿಸ್ ನಂಬರ್ ಗಳನ್ನು ನಮೂದಿಸಲಾಗಿರುತ್ತದೆ.