ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

ವಿಂಟೇಜ್ ಸಂಖ್ಯೆಗಳೆಂದು ಕರೆಯಲ್ಪಡುವ ಹಳೆ ಫ್ಯಾನ್ಸಿ ನಂಬರ್'ಗಳ ನೋಂದಣಿಯನ್ನು ನಿಲ್ಲಿಸಲು ಆದೇಶ ಹೊರಡಿಸಿದ ನಂತರ ಸುಮಾರು 100 ವಾಹನ ಮಾಲೀಕರು ಕಳೆದ ವರ್ಷ ಡಿಸೆಂಬರ್‌ನಿಂದ ಪಂಜಾಬ್ ರಾಜ್ಯ ಸಾರಿಗೆ ಇಲಾಖೆಯನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

ರಾಜ್ಯದಲ್ಲಿ ಹಳೆ ಫ್ಯಾನ್ಸಿ ನಂಬರ್'ಗಳನ್ನು ಹೊಂದಿರುವ ಸಾವಿರಾರು ವಾಹನಗಳಿವೆ ಎಂದು ಪಂಜಾಬ್ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಪೈಕಿ ಹೆಚ್ಚಿನ ವಾಹನಗಳು ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ಸೇರಿವೆ. ವಿಂಟೇಜ್ ಸಂಖ್ಯೆಗಳ ಮಾರಾಟದ ವೇಳೆ ದೊಡ್ಡ ಪ್ರಮಾಣದ ಹಣಕಾಸು ಹಗರಣ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.

ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

2020ರ ಡಿಸೆಂಬರ್‌ ತಿಂಗಳಿನಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಳೆಯ ವಾಹನ ಸಂಖ್ಯೆಗಳ ಮರು ನೋಂದಣಿಯನ್ನು ನಿಲ್ಲಿಸಿ ಆದೇಶ ಹೊರಡಿಸಿದ್ದರು. ಇವುಗಳಲ್ಲಿ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ 1988ರ ನಂತರ ನೋಂದಾಯಿಸಲಾದ ವಾಹನ ಸಂಖ್ಯೆಗಳೂ ಸಹ ಸೇರಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸಲು ಹಾಗೂ ಅಕ್ರಮ ಚಟುವಟಿಕೆಗಳನ್ನು ತಪ್ಪಿಸಲು ಪಂಜಾಬ್ ಮುಖ್ಯಮಂತ್ರಿಗಳು ಈ ಆದೇಶವನ್ನು ಹೊರಡಿಸಿದ್ದಾರೆ.ಈ ರೀತಿಯ ಆದೇಶವನ್ನು ಪಂಜಾಬ್‌ ಮಾತ್ರವಲ್ಲದೆ ಇತರ ಕೆಲವು ರಾಜ್ಯಗಳಲ್ಲಿಯೂ ಹೊರಡಿಸಲಾಗಿದೆ.

ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

ಇದೇ ವೇಳೆ ಹರಿಯಾಣ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 217ರ ಅಡಿಯಲ್ಲಿ ಈ ರೀತಿಯ ಆದೇಶಗಳನ್ನು ಹೊರಡಿಸಲಾಗಿದೆ. ವಿಂಟೇಜ್ ವಾಹನ ನೋಂದಣಿ ಸಂಖ್ಯೆಗಳನ್ನು ಹೊಂದಿರುವವರು ಅವುಗಳನ್ನು ಮುಂದುವರಿಸಲು ಬಯಸುತ್ತಾರೆ ಎಂಬುದು ಇದರ ಹಿಂದಿರುವ ಉದ್ದೇಶ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

ವಿಂಟೇಜ್ ವಾಹನ ಸಂಖ್ಯೆಗಳನ್ನು ಕೆಲವರು ಪ್ರತಿಷ್ಟೆಯಾಗಿ ಬಳಸುತ್ತಾರೆ. ಈ ಸಂಖ್ಯೆಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಜನರ ಗಮನವನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಾರೆ.

ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

ಪಂಜಾಬ್ ಸರ್ಕಾರವು ಹೊರಡಿಸಿರುವ ಆದೇಶವನ್ನು ಪಾಲಿಸಲು ಸರ್ಕಾರದ ಮುಂದೆ ಹಲವಾರು ಸವಾಲುಗಳಿವೆ. ಈ ರೀತಿಯ ಸಂಖ್ಯೆಗಳನ್ನು ಹೊಂದಿರುವವರು ಪ್ರಭಾವಿಗಳು ಹಾಗೂ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ ಎಂಬುದು ಇದರ ಹಿಂದಿರುವ ಕಾರಣ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

ಆದರೂ ಸಹ ಪಂಜಾಬ್ ಸರ್ಕಾರವು ಫ್ಯಾನ್ಸಿ ನಂಬರ್'ಗಳ ಬಳಕೆಯನ್ನು ತಪ್ಪಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪಂಜಾಬ್‌ನಂತಹ ಗಡಿ ರಾಜ್ಯಗಳು ಇವುಗಳಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಫ್ಯಾನ್ಸಿ ನಂಬರ್ ಸಂಸ್ಕೃತಿಗೆ ಕೊನೆ ಹಾಡಲು ನಿರ್ಧರಿಸಿದ ಸರ್ಕಾರ

ಪಂಜಾಬ್‌ನಲ್ಲಿ ಫ್ಯಾನ್ಸಿ ನಂಬರ್'ಗಳನ್ನು ಹಲವಾರು ಸಾಮಾಜಿಕ ವಿರೋಧಿಗಳು ತಮ್ಮ ವಾಹನಗಳಲ್ಲಿ ಬಳಸುತ್ತಿದ್ದಾರೆ ಎಂದು ವರದಿಗಳಾಗುತ್ತಿವೆ. ಫ್ಯಾನ್ಸಿ ನಂಬರ್ ಹೊಂದಿರುವ ಕಾರುಗಳನ್ನು ಪರಿಶೀಲಿಸಲು ಪೊಲೀಸರು ಸಹ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.

Most Read Articles

Kannada
English summary
Punjab government to stop issuing fancy numbers. Read in Kannada.
Story first published: Wednesday, April 21, 2021, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X