ವಿಶೇಷ ಚೇತನರಿಗಾಗಿಯೇ ತಯಾರಾಯ್ತು ವಿಶೇಷ ಲಿಲ್ಲಿ ಪುಟ್ ಜೀಪ್

ಪಂಜಾಬ್ ಬಗ್ಗೆ ಹಲವಾರು ಆಸಕ್ತಿಕರ ವಿಷಯಗಳಿವೆ. ಅಲ್ಲಿನ ಜನರ ಹವ್ಯಾಸವೂ ಸಹ ವಿಚಿತ್ರವಾಗಿರುತ್ತದೆ. ಪಂಜಾಬ್ ಹಸಿರು ಹೊದ್ದ ಜಮೀನು ಹಾಗೂ ಟ್ರಾಕ್ಟರ್ ಸವಾರಿಗಳಿಗೆ ಹೆಸರುವಾಸಿಯಾಗಿದೆ.

ವಿಶೇಷ ಚೇತನರಿಗಾಗಿಯೇ ತಯಾರಾಯ್ತು ವಿಶೇಷ ಲಿಲ್ಲಿ ಪುಟ್ ಜೀಪ್

ಪಂಜಾಬ್'ನಲ್ಲಿ ಬಳಸುವ ಟ್ರಾಕ್ಟರ್'ಗಳ ಬಗ್ಗೆ ಈ ಹಿಂದೆ ಹಲವು ಸುದ್ದಿಗಳು ವರದಿಯಾಗಿದ್ದವು. ಈಗ ವಿಭಿನ್ನ ಬಗೆಯ ಜೀಪ್ ಆವಿಷ್ಕಾರದ ಬಗ್ಗೆ ವರದಿಯಾಗಿದೆ. ಈ ವಿಭಿನ್ನ ಜೀಪ್ ಪಂಜಾಬ್‌ನ ವಿಶೇಷ ಚೇತನರಿಗೆ ಸಹಕಾರಿಯಾಗಿದೆ ಎಂಬುದು ಗಮನಾರ್ಹ.

ವಿಶೇಷ ಚೇತನರಿಗಾಗಿಯೇ ತಯಾರಾಯ್ತು ವಿಶೇಷ ಲಿಲ್ಲಿ ಪುಟ್ ಜೀಪ್

ಪಂಜಾಬ್ ಮೂಲದ ಬಬ್ಬರ್ ಸಿಂಗ್ ಎಂಬುವವರು ಅವರು ಲಿಲ್ಲಿಪುಟ್ ಜೀಪ್ ಅನ್ನು ತಯಾರಿಸಿದ್ದಾರೆ. ಈ ಜೀಪ್ ಕೈಗೆಟುಕುವ ಬೆಲೆಯನ್ನು ಹೊಂದಿದ್ದು, ವಿಶೇಷ ಚೇತನರು ಸುಲಭವಾಗಿ ಚಲಾಯಿಸಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಶೇಷ ಚೇತನರಿಗಾಗಿಯೇ ತಯಾರಾಯ್ತು ವಿಶೇಷ ಲಿಲ್ಲಿ ಪುಟ್ ಜೀಪ್

ಬಬ್ಬರ್ ಸಿಂಗ್ ಅವರು ಬಾಲ್ಯದಿಂದಲೂ ಜೀಪ್'ಗಳ ಬಗ್ಗೆ ಒಲವು ಹೊಂದಿದ್ದರು. ಅವರ ಕುಟುಂಬದಲ್ಲಿ ಸಣ್ಣ ಜೀಪ್ ಕೂಡ ಇತ್ತು. ಈ ಜೀಪ್ ಅನ್ನು ತುಂಬಾಇಷ್ಟಪಟ್ಟಿದ್ದ ಅವರು ಅದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದರು.

ವಿಶೇಷ ಚೇತನರಿಗಾಗಿಯೇ ತಯಾರಾಯ್ತು ವಿಶೇಷ ಲಿಲ್ಲಿ ಪುಟ್ ಜೀಪ್

ಒಂದು ದಿನ ಅವರ ವಿಶೇಷ ಚೇತನ ಸ್ನೇಹಿತರೊಬ್ಬರು ಜೀಪ್ ತಯಾರಿಸಿ ಕೊಡುವಂತೆ ಕೇಳಿಕೊಂಡರು. ಈ ಜೀಪ್'ನಲ್ಲಿ ನಾಲ್ಕು ಜನರ ಕುಟುಂಬ ಸುಲಭವಾಗಿ ಕುಳಿತು ನಗರಕ್ಕೆ ಹೋಗಲು ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸುವಂತೆ ಕೇಳಿ ಕೊಂಡರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಶೇಷ ಚೇತನರಿಗಾಗಿಯೇ ತಯಾರಾಯ್ತು ವಿಶೇಷ ಲಿಲ್ಲಿ ಪುಟ್ ಜೀಪ್

ನಂತರ ಬಬ್ಬರ್ ಸಿಂಗ್ ಅವರು ಸಣ್ಣ ಜೀಪ್ ತಯಾರಿಸುವ ಕೆಲಸವನ್ನು ಕೈಗೆತ್ತಿಕೊಂಡರು. ಕೆಲವೇ ದಿನಗಳಲ್ಲಿ ಅವರು ಭವ್ಯವಾದ ಸಣ್ಣ ಜೀಪನ್ನು ತಯಾರಿಸಿದರು. ಈಗ ಈ ಜೀಪ್ ವಿಶೇಷ ಚೇತನರಿಗೆ ವರದಾನವಾಗಿದೆ.

ವಿಶೇಷ ಚೇತನರಿಗಾಗಿಯೇ ತಯಾರಾಯ್ತು ವಿಶೇಷ ಲಿಲ್ಲಿ ಪುಟ್ ಜೀಪ್

ವಿಶೇಷ ಚೇತನರಿಗೆ ವರದಾನವಾದ ಜೀಪ್

ಬಬ್ಬರ್ ಸಿಂಗ್ ಅವರ ಜೀಪ್ ವಿಶೇಷ ಚೇತನರಿಗೆ ಸಾಕಷ್ಟು ನೆರವಾಗುತ್ತಿದೆ. ಅವರ ಗ್ರಾಮದಲ್ಲಿರುವ ಹಲವು ಅನೇಕ ವಿಶೇಷ ಚೇತನ ಮಹಿಳೆಯರು ಹಾಗೂ ವಯಸ್ಸಾದವರು ಈ ಕಾರಿನಲ್ಲಿ ಸಂಚರಿಸುತ್ತಾರೆ ಎಂದು ತಿಳಿದುಬಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಜೀಪಿನಲ್ಲಿ ಹಲವಾರು ವಿಶೇಷ ಸಂಗತಿಗಳಿವೆ. ಈ ಜೀಪ್ ಚಾಲನೆ ಮಾಡಲು ಸುಲಭವಾಗಿದೆ. ಈ ಜೀಪ್ ಅನ್ನು ವಿಶೇಷ ಚೇತನರಿಗಾಗಿಯೇ ತಯಾರಿಸಲಾಗಿದೆ. ಈ ಕಾರಣಕ್ಕೆ ಈ ಜೀಪ್'ನಲ್ಲಿರುವ ಕ್ಲಚ್, ಗೇರ್ ಹಾಗೂ ಆಕ್ಸಿಲರೇಟರ್'ಗಳನ್ನು ಸ್ಟೀಯರಿಂಗ್ ವ್ಹೀಲ್‌ನಲ್ಲಿ ನೀಡಲಾಗಿದೆ.

ವಿಶೇಷ ಚೇತನರಿಗಾಗಿಯೇ ತಯಾರಾಯ್ತು ವಿಶೇಷ ಲಿಲ್ಲಿ ಪುಟ್ ಜೀಪ್

ಬೆಲೆ

ಈ ಜೀಪ್ ನಿರ್ಮಿಸಲು ಕೇವಲ ರೂ.70,000 ರೂಪಾಯಿ ಖರ್ಚಾಗುತ್ತದೆ ಎಂದು ಬಬ್ಬರ್ ಸಿಂಗ್ ಹೇಳುತ್ತಾರೆ. ಈ ಜೀಪ್ ಅನ್ನು ಅವರು ಒಂದರಿಂದ ಎರಡು ತಿಂಗಳಲ್ಲಿ ತಯಾರಿಸುತ್ತಾರೆ. ಅವರು ಇದುವರೆಗೂ ಈ ರೀತಿಯ 12 ಜೀಪ್‌ಗಳನ್ನು ತಯಾರಿಸಿದ್ದಾರೆ.

Most Read Articles

Kannada
English summary
Punjab man designs lilli put jeep for specially abled. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X