ಇದು ಡ್ರೈವರ್ಲೆಸ್ ಬೈಕ್ ಅಲ್ಲ, ಕೈಬಿಟ್ಟು ಅಜ್ಜನ ಬುಲೆಟ್ ರೈಡ್: ನೆಟ್ಟಿಗರಿಂದ ತರಾಟೆ
ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮೇಲೆ ಜನರಿಗೆ ಇರುವ ಕ್ರೇಜ್ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್ ಆಗಿದೆ. ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ ಎಂದರೆ ತಪ್ಪಾಗಲ್ಲ. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್.
ರಾಯಲ್ ಎನ್‍ಫೀಲ್ಡ್ ಬೈಕ್ ಮೇಲೆ ಕುಳಿತು ರೈಡ್ ಮಾಡುವುದೆಂದರೆ ಅದೊಂದು ಗತ್ತು. ಆರೇಳು ದಶಕಗಳಿಂದಲೂ ಅದೇ ಕ್ರೇಜ್, ಅದೇ ಟ್ರೆಂಡ್ ಉಳಿಸಿಕೊಂಡು ಬಂದಿರುವುದು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಹೆಗ್ಗಳಿಕೆಯಾಗಿದೆ. ಅಲ್ಲದೇ ರಾಯಲ್ ಎನ್‌ಫೀಲ್ಡ್ ವಿಶ್ವದ ಅತ್ಯಂತ ಹಳೆಯ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿದೆ. ಭಾರತದಲ್ಲಿ ಈಗ ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್ ಬ್ರಾಂಡ್‌ಗಳಲ್ಲಿ ಒಂದಾಗಿರುವ ರಾಯಲ್ ಎನ್‌ಫೀಲ್ಡ್ ಈ ಹಿಂದೆ ವಿವಿಧ ಮಾದರಿಗಳನ್ನು ಹೊಂದಿತ್ತು.

ಅದರಲ್ಲಿಯು ರಾಯಲ್ ಎನ್‍ಫೀಲ್ಡ್ ಬುಲೆಟ್ ಹೆಚ್ಚು ಜನಪ್ರಿಯ ಮಾದರಿಯಾಗಿದೆ. ಹಳೆಯ ತಲೆಮಾರಿನ ಜನರಿಗೆ ಬುಲೆಟ್ ಬೈಕ್ ಮೆಚ್ಚಿನ ಮಾದರಿಯಾಗಿದೆ. ಇತ್ತೀಚೆಗೆ ಪಂಚಾಜ್ ಮೂಲದ ಅಜ್ಜ ಬುಲೆಟ್ ಬೈಕ್ (Bullet Bike) ಓಡಿಸುತ್ತಿರುವ ವೀಡಿಯೊ ಭಾರೀ ವೈರಲ್ ಆಗಿದೆ. ಬೈಕ್ ಓಡಿಸುವುದು ಎಂದರೆ ತಪ್ಪಾಗುತ್ತಾ ಎಂದು ಗೊತ್ತಿಲ್ಲ. ಅಜ್ಜ ಬೈಕಿನಲ್ಲಿ ಆರಾಮಾಗಿ ಸೋಫಾದಲ್ಲಿ ಕೂರುವ ರೀತಿ ಕೂತಿದ್ದಾರೆ.
ಈ ಅಜ್ಜ ಬೈಕಿನ ಹ್ಯಾಂಡಲ್‌ಬಾರ್ ಹಿಡಿದುಕೊಂಡಿಲ್ಲ. ಬೈಕ್ ತನ್ನ ಪಾಡಿಗೆ ಚಲಿಸುತ್ತಿದೆ. ಈ ವಿಡಿಯೋ ನೆಟ್ಟಿಗರು ದೆವ್ವ ಬೈಕ್ ಓಡಿಸುತ್ತಿದೆಯೇ? ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ ಯಾವ ಭೂತವೂ ಬೈಕ್ ಓಡಿಸುವುದಿಲ್ಲ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಈ ವಿಡಿಯೋ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಆದರೆ ಹೀಗೆ ಮಾಡುವುದು ಭಾರೀ ಅಪಾಯಕಾರಿ. ಈ ಅಜ್ಜ ಈ ರೀತಿ ಕೈ ಬಿಟ್ಟು ಬೈಕ್ ಓಡಿಸಿರುವುದು ಸಾರ್ವಜನಿಕ ರಸ್ತೆಯಲ್ಲಿ ಆಗಿದೆ. ಈ ರೀತಿ ಸಾರ್ವಜನಿಕ ರಸ್ತೆಯಲ್ಲಿಇಂತಹ ಸ್ಟಂಟ್ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ. ಕಳೆದ ಕೆಲವು ತಿಂಗಳುಗಳವರೆಗೆ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು ಮುಂತಾದ ಚಟುವಟಿಕೆಗಳಲ್ಲಿ ಜನರು ತೊಡಗುವುದನ್ನು ನಾವು ನೋಡಿದ್ದೇವೆ.
ಈ ರೀತಿ ಎಲ್ಲಾ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡು ದಂಡ ವಿಧಿಸಬಹುದಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಪೊಲೀಸರು ಸರಿಯಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರಲ್ಲೂ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಸಂಚಾರಿ ನಿಯಮವನ್ನು ಉಲ್ಲಂಘನೆಗೆ ವಾಹನ ಸವಾರರಿಗೆ ದಾಖಲೆಯ ಪ್ರಮಾಣದಲ್ಲಿ ದಂಡವನ್ನು ವಿಧಿಸುತ್ತಿದ್ದಾರೆ.
ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಲಿವೆ.
ಶೀಘ್ರದಲ್ಲೇ ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಆಧುನಿಕ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು ಬಹಳ ದೂರ ಸಾಗಿವೆ. ರಾಯಲ್ ಎನ್‌ಫೀಲ್ಡ್ ಹಂಟರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಹಿಂದೆ ಸಾಮಾನ್ಯ ಬುಲೆಟ್ ಮೋಟಾರ್‌ಸೈಕಲ್ ಜೊತೆಗೆ, ಅವರು ಡೀಸೆಲ್ ಎಂಜಿನ್‌ನೊಂದಿಗೆ ಬಂದ ಮೋಟಾರ್‌ಸೈಕಲ್ ಅನ್ನು ಸಹ ಹೊಂದಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications