ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

2019ರಲ್ಲಿ ಪಂಜಾಬ್‌ನಲ್ಲಿ ನಡೆದ ವಾಹನಗಳ್ಳತನದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಲಾಗಿದೆ. 2019ರಲ್ಲಿ ಪಂಜಾಬ್ ರಾಜ್ಯದಲ್ಲಿ, ಲುಧಿಯಾನ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಾಹನ ಕಳ್ಳತನ ಪ್ರಕರಣಗಳು ವರದಿಯಾಗಿವೆ.

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

2019ರಲ್ಲಿ ಲುಧಿಯಾನ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಒಟ್ಟು 850 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದು ಪಂಜಾಬ್ ರಾಜ್ಯದಲ್ಲಿ ದಾಖಲಾದ ವಾಹನಗಳ್ಳತನ ಪ್ರಕರಣಗಳ 25.9%ನಷ್ಟಿದೆ.

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

ಲುಧಿಯಾನ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 2017ರಲ್ಲಿ 490 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. 2018ರಲ್ಲಿ ಈ ಪ್ರಮಾಣವು 711ಕ್ಕೆ ಏರಿಕೆಯಾಗಿತ್ತು. 2018ರಲ್ಲಿ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ 45%ನಷ್ಟು ಹೆಚ್ಚಾಗಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

2019ರಲ್ಲಿ ಪಂಜಾಬ್‌ನಲ್ಲಿ ಒಟ್ಟು 3,282 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಲುಧಿಯಾನ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿಯೇ 850 ಪ್ರಕರಣಗಳು ದಾಖಲಾಗಿರುವುದು ವಿಶೇಷ.

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

ಬಹುತೇಕ ಸಂದರ್ಭಗಳಲ್ಲಿ ವಾಹನಗಳ್ಳರು ಕದ್ದ ವಾಹನಗಳ ಬಿಡಿಭಾಗಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತಾರೆ. ಈ ಉಪಾಯವು ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳದೆ ಸುಲಭವಾಗಿ ಹಣ ಸಂಪಾದಿಸಲು ದಾರಿ ಮಾಡಿಕೊಡುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

ಕೆಲವು ವಾಹನಗಳ್ಳರು ಮಾದಕ ವ್ಯಸನಿಗಳಾಗಿದ್ದು, ಮಾದಕ ಪದಾರ್ಥಗಳನ್ನು ಖರೀದಿಸಲು ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಾರೆ ಎಂದು ವರದಿಯಾಗಿದೆ. ಕೆಲವೊಮ್ಮೆ ಕದ್ದ ವಾಹನಗಳನ್ನು ಅಪರಾಧಿ ಕೃತ್ಯಗಳಿಗೂ ಬಳಸಲಾಗುತ್ತದೆ.

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

ಸರಗಳ್ಳತನ, ದರೋಡೆ, ಸುಲಿಗೆಯಂತಹ ಅಪರಾಧ ಪ್ರಕರಣಗಳಲ್ಲಿ ಹೆಚ್ಚಾಗಿ ಕದ್ದ ವಾಹನಗಳನ್ನು ಬಳಸಲಾಗುತ್ತಿದೆ. ಪೊಲೀಸರ ತನಿಖೆಯ ಸಂದರ್ಭದಲ್ಲಿ ಕದ್ದ ವಾಹನಗಳನ್ನು ಡಿಸೆಂಬಲ್ ಮಾಡಿ ಮಾರಾಟ ಮಾಡಿರುವುದು ಕಂಡು ಬಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

ಕಳುವು ಮಾಡಲಾದ ದ್ವಿಚಕ್ರ ವಾಹನಗಳನ್ನು ಹಾಗೂ ಕಾರುಗಳನ್ನು ಯಾವುದೇ ದಾಖಲೆಗಳಿಲ್ಲದೆ ಬಡವರಿಗೆ ಮಾರಾಟ ಮಾಡಲಾಗುತ್ತಿದೆ ಎಂಬುದು ಕೆಲವು ಪ್ರಕರಣಗಳಿಂದ ಬೆಳಕಿಗೆ ಬಂದಿದೆ.

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

ವಾಹನಗಳ್ಳತನದಲ್ಲಿ ಭಾಗಿಯಾಗುವ ಗ್ಯಾಂಗ್‌ಗಳು ಕದ್ದ ವಾಹನಗಳನ್ನು ಹಾಗೂ ಅವುಗಳ ಬಿಡಿಭಾಗಗಳನ್ನು ವಿತರಕರ ಮೂಲಕ ಮಾರಾಟ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಕದ್ದ ವಾಹನಗಳನ್ನು ಮಾರಾಟ ಮಾಡುವ ವಿತರಕರನ್ನು ಬಂಧಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದಿನೇ ದಿನೇ ಹೆಚ್ಚುತ್ತಿದೆ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ

ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ವಾಹನಗಳನ್ನು ಖರೀದಿಸುವ ಮುನ್ನ ಜಾಗರೂಕರಾಗುವುದು ಅವಶ್ಯಕ. ಖರೀದಿಸಿದ ನಂತರ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Punjab police releases vehicle theft statistics. Read in Kannada.
Story first published: Wednesday, October 14, 2020, 13:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X