ಟಿಂಟೆಡ್ ಗ್ಲಾಸ್ ಕಾರಿನಲ್ಲಿ ಬಂದು ಸಿಕ್ಕಿಬಿದ್ದ ಜನಪ್ರಿಯ ಗಾಯಕ

ಪಂಜಾಬ್‌ನ ಜನಪ್ರಿಯ ಗಾಯಕ ಸಿಧು ಮುಸೆವಾಲಾ ಭಾರತದಲ್ಲಿದ್ದು, ಲಾಕ್‌ಡೌನ್ ದಿನಗಳನ್ನು ಚಂಡೀಗಢದಲ್ಲಿ ಕಳೆಯುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಈ ಲಾಕ್‌ಡೌನ್ ಅವರಿಗೆ ಸಂತಸವನ್ನುಂಟು ಮಾಡಿಲ್ಲ. ಅವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ಇದಕ್ಕೆ ಕಾರಣ.

ಟಿಂಟೆಡ್ ಗ್ಲಾಸ್ ಕಾರಿನಲ್ಲಿ ಬಂದು ಸಿಕ್ಕಿಬಿದ್ದ ಜನಪ್ರಿಯ ಗಾಯಕ

ವರದಿಗಳ ಪ್ರಕಾರ, ಸಿಧು ಮುಸೇವಾಲಾ ಅವರನ್ನು ಚಂಡೀಗಢದ ನಭಾ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ಕಾರಿನ ವಿಂಡೊಗಳ ಮೇಲೆ ಟಿಂಟೆಡ್ ಗ್ಲಾಸ್ ಹೊಂದಿದ್ದೆ ಇದಕ್ಕೆ ಕಾರಣ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅವರ ಕಾರ್ ಅನ್ನು ತಡೆದು ನಿಲ್ಲಿಸಲಾಯಿತು.

ಟಿಂಟೆಡ್ ಗ್ಲಾಸ್ ಕಾರಿನಲ್ಲಿ ಬಂದು ಸಿಕ್ಕಿಬಿದ್ದ ಜನಪ್ರಿಯ ಗಾಯಕ

ಜನಪ್ರಿಯ ಗಾಯಕನಾದ ಕಾರಣಕ್ಕೆ ಜನರ ಗುಂಪು ಸ್ಥಳದಲ್ಲಿ ನೆರೆದಿದೆ. ಪಂಜಾಬ್ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಸಿಧು ಮುಸೆವಾಲಾ ಅವರನ್ನು ಹುಡುಕುತ್ತಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಅವರು ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಕಾಣಿಸಿಕೊಂಡಿದ್ದರು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಟಿಂಟೆಡ್ ಗ್ಲಾಸ್ ಕಾರಿನಲ್ಲಿ ಬಂದು ಸಿಕ್ಕಿಬಿದ್ದ ಜನಪ್ರಿಯ ಗಾಯಕ

ಕೆಲವು ವಾರಗಳ ಹಿಂದಷ್ಟೇ ಸಿಧು ಮುಸೇವಾಲಾರವರು ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೊದಲ್ಲಿ ಅವರು ಶಸ್ತ್ರಾಸ್ತ್ರಗಳೊಂದಿಗೆ ಕಾಣಿಸಿಕೊಂಡಿದ್ದರು. ಈ ಕಾರಣಕ್ಕೆ ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಟಿಂಟೆಡ್ ಗ್ಲಾಸ್ ಕಾರಿನಲ್ಲಿ ಬಂದು ಸಿಕ್ಕಿಬಿದ್ದ ಜನಪ್ರಿಯ ಗಾಯಕ

ಸಿಧು ಮುಸೇವಾಲಾ ಅವರನ್ನು ಪೊಲೀಸರು ಸೆರೆ ಹಿಡಿದಾಗ ಅವರು ತಮ್ಮ ಕಪ್ಪು ಬಣ್ಣದ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರಿದ್ದ ಕಾರಿನ ಹಿಂದೆ ಕಪ್ಪು ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಚಲಿಸುತ್ತಿತ್ತು. ಈ ಎರಡೂ ಕಾರುಗಳು ಗಾಢ ಬಣ್ಣದ ಟಿಂಟೆಡ್ ಗ್ಲಾಸ್ ಹೊಂದಿದ್ದವು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಟಿಂಟೆಡ್ ಗ್ಲಾಸ್ ಕಾರಿನಲ್ಲಿ ಬಂದು ಸಿಕ್ಕಿಬಿದ್ದ ಜನಪ್ರಿಯ ಗಾಯಕ

ಪೊಲೀಸರು ಸಿಧು ಮುಸೇವಾಲಾ ಅವರಿಗೆ ದಂಡ ವಿಧಿಸಿ ಅಲ್ಲಿಂದ ಹೋಗಲು ಬಿಟ್ಟಿದ್ದಾರೆ. ನಿಯಮಗಳಂತೆ ಯಾವುದೇ ಕಾರು ಟಿಂಟೆಡ್ ಗ್ಲಾಸ್ ಹೊಂದಿದ್ದರೆ ಅವುಗಳನ್ನು ತಡೆಯುವ ಪೊಲೀಸರು ಅವುಗಳನ್ನು ತೆಗೆದು ಹಾಕಬೇಕು. ಆದರೆ ಪೊಲೀಸರು ಸಿಧು ಮುಸೇವಾಲಾ ಅವರಿದ್ದ ಕಾರಿನಲ್ಲಿ ಅಳವಡಿಸಲಾಗಿದ್ದ ಟಿಂಟೆಡ್ ಗ್ಲಾಸ್‌ಗಳನ್ನು ತೆಗೆದು ಹಾಕಿಲ್ಲ.

ಟಿಂಟೆಡ್ ಗ್ಲಾಸ್ ಕಾರಿನಲ್ಲಿ ಬಂದು ಸಿಕ್ಕಿಬಿದ್ದ ಜನಪ್ರಿಯ ಗಾಯಕ

ಭಾರತದಲ್ಲಿ ಈ ನಿಯಮವನ್ನು ಹಲವು ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿದೆ. ಟಿಂಟೆಡ್ ಗ್ಲಾಸ್‌ಗಳನ್ನು ಕಾರಿನಲ್ಲಿ ಅಳವಡಿಸುವಂತಿಲ್ಲ. ಟಿಂಟೆಡ್ ಗ್ಲಾಸ್ ಹೊಂದಿರುವ ಕಾರುಗಳ ಒಳಗೆ ಅಪರಾಧಗಳು ನಡೆಯುವ ಸಾಧ್ಯತೆಗಳಿರುತ್ತವೆ ಎಂಬ ಹಿನ್ನೆಲೆಯಲ್ಲಿ, ಕಾರುಗಳಲ್ಲಿ ಟಿಂಟೆಡ್ ಗ್ಲಾಸ್‌ಗಳನ್ನು ಅಳವಡಿಸದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

Most Read Articles

Kannada
English summary
Punjabi Singer Sidhu Moosewalla caught for having tinted windows on his Range Rover. Read in Kannada.
Story first published: Tuesday, June 9, 2020, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X