ಭಾರತದ ಜನಪ್ರಿಯ ಗಾಯಕನ ಕಾರು ಪಲ್ಟಿ: ಅಪಘಾತದ ವಿಡಿಯೋ ವೈರಲ್
ಪಂಜಾಬಿ ಪಾಪ್ ಹಾಡುಗಳಿಗೆ ಜನಪ್ರಿಯವಾಗಿರುವ ಪಂಜಾಬಿ ಗಾಯಕ ಸಿಪ್ಪಿ ಗಿಲ್ ಅವರು ಇತ್ತೀಚೆಗೆ ಕೆನಡಾದಲ್ಲಿ ತಮ್ಮ ಜೀಪ್ ರಾಂಗ್ಲರ್ ಅನ್ನು ಚಾಲನೆ ಮಾಡುತ್ತಿದ್ದಾಗ ಅಪಘಾತವಾಗಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ಕಾಡಿನಲ್ಲಿ ತಮ್ಮ ಜೀಪ್ ರಾಂಗ್ಲರ್‌ನಲ್ಲಿ ಆಫ್-ರೋಡಿಂಗ್ ಮಾಡುತ್ತಿದ್ದಾಗ ವಾಹನ ಉರುಳಿ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ದಾರಿಹೋಕರ ಸಹಾಯದಿಂದ ಅಪಘಾತದಿಂದ ಹೆಚ್ಚಿನ ಹಾನಿಯಾಗದೇ ಪಾರಾಗಿರುವುದಾಗಿ ಗಾಯಕ ಸ್ವತಃ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಿಪ್ಪಿ ಗಿಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅವರು ತಮ್ಮ ಮೂರು-ಬಾಗಿಲಿನ ಜೀಪ್ ರಾಂಗ್ಲರ್ ರೂಬಿಕಾನ್‌ನಲ್ಲಿ ಆಫ್-ರೋಡಿಂಗ್ ಮಾಡುವಾಗ ಅವರ ಅಪಘಾತವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಅವರು ನೀಡಿರುವ ಮಾಹಿತಿಯ ಪ್ರಕಾರ, ಬ್ರಿಟಿಷ್ ಕೊಲಂಬಿಯಾದಲ್ಲಿ ತನ್ನ ಸ್ನೇಹಿತರೊಂದಿಗೆ ಆಫ್-ರೋಡಿಂಗ್ ಸೆಷನ್‌ನಲ್ಲಿ ತಮ್ಮ ಜೀಪ್ ರಾಂಗ್ಲರ್ ಪಲ್ಟಿಯಾದ ಅಪಘಾತದ ನಂತರ ತಾನು ಸುರಕ್ಷಿತವಾಗಿರುವುದಾಗಿ ದೃಢಪಡಿಸಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ವಿಹಾರವನ್ನು ಆನಂದಿಸುತ್ತಿರುವಾಗ, ಗಿಲ್ ಬ್ರಿಟಿಷ್ ಕೊಲಂಬಿಯಾದ ಕಾಡಿನ ನಡುವೆ ಆಫ್-ರೋಡಿಂಗ್ ಸೆಷನ್‌ಗಾಗಿ ಬಳಸುದಾರಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದರು.
ಆದರೆ ಆಫ್-ರೋಡಿಂಗ್ ಅವಧಿಯಲ್ಲಿ, SUV ಮೇಲೆ ಗಿಲ್ ತಮ್ಮ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಕಾರು ರಸ್ತೆಯ ಬದಿಯಲ್ಲಿ ಉರುಳಿದೆ. ಆ ನಿರ್ದಿಷ್ಟ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ದಾರಿಹೋಕರೊಬ್ಬರು ಸಿಪ್ಪಿ ಗಿಲ್ ಅವರನ್ನು ರಕ್ಷಿಸಲು ಮತ್ತು ಅವರಿಗೆ ಅಗತ್ಯವಾದ ವೈದ್ಯಕೀಯ ಸಹಾಯವನ್ನು ಪಡೆಯಲು ಸಹಾಯ ಮಾಡಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.

ಸಿಪ್ಪಿ ಗಿಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊವು ಜೀಪ್ ರಾಂಗ್ಲರ್ ರೂಬಿಕಾನ್ ಅನ್ನು ಉರುಳಿಸಿದ ದೃಶ್ಯಗಳನ್ನು ತೋರಿಸುತ್ತದೆ. ಇದರಲ್ಲಿ ಅವರು ಆಫ್-ರೋಡಿಂಗ್ ಮತ್ತು ಜೀವಕ್ಕೆ ಅಪಾಯಕಾರಿ ಅಪಘಾತವನ್ನು ಎದುರಿಸಿರುವುದನ್ನು ನೋಡಬಹುದು. ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪರಿಸ್ಥಿತಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದು, ರಾಂಗ್ಲರ್ ಮಾತ್ರ ಹಾನಿಗೊಳಗಾಗಿದೆ.
ಸಿಪ್ಪಿ ಗಿಲ್ ತಮ್ಮ ಸಂಪೂರ್ಣ ಅನುಭವವನ್ನು ಹಂಚಿಕೊಂಡ Instagram ಪೋಸ್ಟ್ ವೈರಲ್ ಆಗುತ್ತಿದೆ, ಅವರು ಮಾರಣಾಂತಿಕ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ನಂತರ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳು ಕಾಳಜಿ ವಹಿಸಿದ್ದಾರೆ. ಅದೇ ಸಮಯದಲ್ಲಿ, ಅನೇಕ ನೆಟ್ಟಿಗರು ಗಾಯಕನನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಅವರ ಅಸಡ್ಡೆ ಡ್ರೈವಿಂಗ್ ಮ್ಯಾನರಿಸಂ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಆಫ್‌ರೋಡ್ ಸುಲಭವಲ್ಲ: ಒಬ್ಬರೇ ಆಫ್‌ರೋಡಿಂಗ್ ಮಾಡುವುದು ಅಪಾಯಕಾರಿ. ಏಕೆಂದರೆ ಅಂತಹ ಸ್ಥಳಗಳಲ್ಲಿ ಸಹಾಯವನ್ನು ಪಡೆಯುವುದು ಕಷ್ಟಕರವಾಗಿರುತ್ತದೆ. ಹೊರಡುವ ಮೊದಲು, ಆ ಪ್ರದೇಶವನ್ನು ಪರಿಶೀಲಿಸುವುದು ಮತ್ತು ಪರಿಸ್ಥಿತಿಯನ್ನು ನಿರ್ಣಯಿಸುವುದು ಮುಖ್ಯವಾಗಿರುತ್ತದೆ. ವಿಶೇಷವಾಗಿ ವಾಹನವು 4WD ಅಥವಾ 4×4 ವೈಶಿಷ್ಟ್ಯವನ್ನು ಹೊಂದಿಲ್ಲದಿದ್ದರೆ ಪರಿಸ್ಥಿತಿ ಕೈ ಮೀರುತ್ತದೆ. ಈ ಸಾಮರ್ಥ್ಯ ಇಲ್ಲದವರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications