ಗ್ರಾಹಕರಿಗೆ ಹೊಸ ರೀತಿಯಲ್ಲಿ ಉಣ ಬಡಿಸುತ್ತಿದೆ ಈ ರೆಸ್ಟೋರೆಂಟ್
ಪ್ರಪಂಚದ ಎಲ್ಲಾ ರಾಷ್ಟ್ರಗಳು ಮಹಾಮಾರಿ ಕರೋನಾ ವೈರಸ್'ನಿಂದ ತತ್ತರಿಸಿ ಹೋಗಿವೆ. ಬಹುತೇಕ ಎಲ್ಲಾ ದೇಶಗಳು ಕರೋನಾ ವೈರಸ್ ಹರಡುವುದನ್ನು ತಡೆಯಲು ಹಲವು ನಿರ್ಬಂಧಗಳನ್ನು ಜಾರಿಗೊಳಿಸಿವೆ.

ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿರುವ ದೇಶಗಳಲ್ಲಿ ಮಧ್ಯ ಪ್ರಾಚ್ಯದಲ್ಲಿರುವ ಕತಾರ್ ಸಹ ಸೇರಿದೆ. ಕತಾರ್'ನಲ್ಲಿ ರೆಸ್ಟೋರೆಂಟ್‌ಗಳಂತಹ ಸಾರ್ವಜನಿಕ ಸ್ಥಳಗಳಿಗೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ನಿರ್ಬಂಧಗಳಿಂದಾಗಿ ಖಾಸಗಿ ರೆಸ್ಟೋರೆಂಟ್ ಒಂದು ತನ್ನ ಗ್ರಾಹಕರಿಗೆ ವಿಶಿಷ್ಟ ರೀತಿಯಲ್ಲಿ ಸೇವೆ ನೀಡುತ್ತಿದೆ.

ಭಾರತದ ಖ್ಯಾತ ಉದ್ಯಮಿಯೊಬ್ಬರು ಈ ರೆಸ್ಟೋರೆಂಟ್‌ನ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಕಾರಿನಲ್ಲಿ ಕುಳಿತಿರುವ ಗ್ರಾಹಕರಿಗೆ ಆಹಾರವನ್ನು ತಲುಪಿಸಲಾಗುತ್ತಿದೆ.
MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಈ ವೀಡಿಯೊವನ್ನು ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾದ ಹರ್ಷ್ ಗೋಯೆಂಕಾ ಶೇರ್ ಮಾಡಿದ್ದಾರೆ. ಕತಾರ್‌ನಲ್ಲಿ ಕೆಲಸ ಮಾಡುವ ಮಲಯಾಳಿಯೊಬ್ಬರು ಈ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ವೈರಲ್ ಆದ ಈ ವೀಡಿಯೊ ಹರ್ಷ್ ಗೋಯೆಂಕಾ ಅವರ ಗಮನ ಸೆಳೆದಿದೆ. ಅವರು ಶೇರ್ ಮಾಡಿರುವ ವೀಡಿಯೊದಲ್ಲಿ ರೆಸ್ಟೋರೆಂಟ್ ಉದ್ಯೋಗಿಗಳು ಡೈನಿಂಗ್ ಟೇಬಲ್ ನಂತಹ ಮರದ ಹಲಗೆಯನ್ನು ಕಾರಿನಲ್ಲಿ ಇಡುತ್ತಿರುವುದನ್ನು ಕಾಣಬಹುದು.
MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಉದ್ದನೆಯ ಮರದ ಹಲಗೆಯನ್ನು ಕಾರಿನ ಎರಡೂ ಬದಿಯ ವಿಂಡೋಗಳ ಮೇಲೆ ಕುಳಿತು ಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮರದ ಹಲಗೆಯನ್ನು ರೆಸ್ಟೋರೆಂಟ್ ತಯಾರಿಸಿದೆ.

ಈ ರೆಸ್ಟೋರೆಂಟ್ ಗ್ರಾಹಕರಿಗೆ ರುಚಿಕರವಾದ ಆಹಾರವನ್ನು ನೀಡುವುದಕ್ಕೆ ಹೆಸರುವಾಸಿಯಾಗಿದೆ. ಗ್ರಾಹಕರು ರೆಸ್ಟೋರೆಂಟ್‌ಗಳ ಒಳಗೆ ಕುಳಿತು ಊಟ ಮಾಡುವುದನ್ನು ನಿಷೇಧಿಸಿದ ಕಾರಣಕ್ಕೆ ಈ ರೆಸ್ಟೋರೆಂಟ್ ಈ ರೀತಿಯಲ್ಲಿ ಗ್ರಾಹಕರಿಗೆ ಉಣ ಬಡಿಸುತ್ತಿದೆ.
MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್
ಭಾರತದಲ್ಲಿ ಕಾರಿನಲ್ಲಿಯೇ ಪರೀಕ್ಷಾ ಲ್ಯಾಬ್ ಸ್ಥಾಪಿಸಲಾಗಿದೆ. ಇತ್ತೀಚೆಗೆಷ್ಟೇ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಕಾರ್ ಲ್ಯಾಬ್ ಅನ್ನು ತೆರೆಯಲಾಗಿದೆ. ಕರೋನಾ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಪ್ರಪಂಚದಾದ್ಯಂತ ಈ ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿವೆ.

ಕರೋನಾ ವೈರಸ್ ಸೋಂಕಿತರಿಗೆ ನೆರವಾಗಲು ಕಾರುಗಳನ್ನು ಆಂಬ್ಯುಲೆನ್ಸ್‌ಗಳಾಗಿ ಪರಿವರ್ತಿಸುವುದು, ವಾಹನಗಳನ್ನು ತರಕಾರಿ ಮಳಿಗೆಗಳಾಗಿ ಪರಿವರ್ತಿಸುವುದುಸೇರಿದಂತೆ ಹಲವಾರು ವಿಲಕ್ಷಣ ಘಟನೆಗಳು ವರದಿಯಾಗುತ್ತಿವೆ.


Click it and Unblock the Notifications