ಪಾಂಗಾಂಗ್ ಸರೋವರದ ಬಳಿ ಕೆಟಿಎಂ ಬೈಕಿನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ: ರೈಡ್ ಹೊರಟಿದ್ದಾರಾ?

ಕಾಂಗ್ರೆಸ್ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ (Rahul Gandhi) ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ -ಕಾರ್ಗಿಲ್ (Ladakh Autonomous Hill Development Council LAHDC-Kargil) ಚುನಾವಣೆ ಅಂಗವಾಗಿ ಲಡಾಖ್ ಗೆ ಭೇಟಿ ನೀಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರು ಪ್ಯಾಂಗೊಂಗ್ ಸರೋವರಕ್ಕೆ ಬೈಕ್​ ರೈಡ್ ಮಾಡಿದರು.

ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಲಡಾಖ್‌ಗೆ ತಮ್ಮ ಬೈಕ್ ರೈಡ್‌ನ 10 ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಪ್ಯಾಂಗಾಂಗ್ ಸರೋವರಕ್ಕೆ ಹೋಗುವ ದಾರಿ ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ನಮ್ಮ ತಂದೆ ಬಣ್ಣಿಸಿದ್ದರು ಎಂದು ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಲಡಾಖ್ ಬೈಕ್ ರೈಡ್‌ ನ ಕೆಲವು ಫೋಟೋಗಳನ್ನು ಕಾಂಗ್ರೆಸ್ ಪಕ್ಷವೂ ತನ್ನ ಅಧಿಕೃತ ಎಕ್ಸ್ ಟ್ವಿಟ್ಟರ್​ ಹ್ಯಾಂಡಲ್‌ನಿಂದಲೂ ಹಂಚಿಕೊಂಡಿದೆ.

Rahul Gandhi KTM Bike Ride

ರಾಹುಲ್ ಗಾಂಧಿ ಅವರು ಪ್ಯಾಂಗೊಂಗ್ ಸರೋವರದ ಬಳಿಯ ಪ್ರವಾಸಿ ಶಿಬಿರದಲ್ಲಿ ಗಾಂಧಿ ರಾತ್ರಿ ತಂಗುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, ಆಗಸ್ಟ್ 20 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನ. ರಾಹುಲ್ ಗಾಂಧಿ ತಮ್ಮ ತಂದೆಯ ಜನ್ಮ ವಾರ್ಷಿಕೋತ್ಸವವನ್ನು ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ಆಚರಿಸಬಹುದು. ಇನ್ನು ಶುಕ್ರವಾರ ಲಡಾಖ್‌ಗೆ ತಮ್ಮ ಮೊದಲ ಭೇಟಿಯ ಸಂದರ್ಭದಲ್ಲಿ ಗಾಂಧಿಯವರು ಲೇಹ್‌ನಲ್ಲಿ 500ಕ್ಕೂ ಹೆಚ್ಚು ಯುವಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಕೂಡ ನಡೆಸಿದರು.

ರಾಹುಲ್ ಗಾಂಧಿ ಅವರು ಲಡಾಖ್ ಪ್ರವಾಸವನ್ನು ಆಗಸ್ಟ್ 25ರವರೆಗೆ ವಿಸ್ತರಿಸಲಾಗಿದೆ. 2019ರ ಆಗಸ್ಟ್ 5ರಂದು ಆರ್ಟಿಕಲ್ 370 ಮತ್ತು 35 (ಎ) ಅನ್ನು ತೆಗೆದುಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಲಡಾಖ್ ಮತ್ತು ಜೆ & ಕೆ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಇದು ರಾಹುಲ್ ಅವರ ಮೊದಲ ಲಡಾಖ್ ಭೇಟಿ ಇದಾಗಿದೆ.

Rahul Gandhi KTM Bike Ride

ರಾಹುಲ್ ಗಾಂಧಿ ಅವರು ಕಾರ್ಗಿಲ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರು ಆಗಸ್ಟ್ 25 ರಂದು 30 ಸದಸ್ಯರ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ (LAHDC)-ಕಾರ್ಗಿಲ್ ಚುನಾವಣೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 10 ರಂದು ನಡೆಯಲಿರುವ ಕಾರ್ಗಿಲ್ ಹಿಲ್ ಕೌನ್ಸಿಲ್ ಚುನಾವಣೆ ನಡೆಯಲಿದೆ.

ರಾಹುಲ್ ಗಾಂಧಿ ಅವರು ಪ್ಯಾಂಗೊಂಗ್ ಸರೋವರಕ್ಕೆ ರೈಡ್ ಮಾಡಿದ ಬೈಕ್ ಬಗ್ಗೆ ಹೇಳುವುದಾದರೆ, ಇದು ಕೆಟಿಎಂ 390 ಅಡ್ವೆಂಚರ್ (KTM 390 ADV) ಬೈಕ್ ಆಗಿದೆ. ಈ ಬೈಕಿನಲ್ಲಿ 373.2 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಸೀಕ್ವೆನ್ಷಿಯಲ್ ಟ್ರಾನ್ಸ್‌ಮಿಷನ್‌ಗೆ ಹೊಂದಿಕೆಯಾಗುತ್ತದೆ.

Rahul Gandhi KTM Bike Ride

ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಜೊತೆಗೆ ಸ್ಲಿಪ್ಪರ್/ಅಸಿಸ್ಟ್ ಕ್ಲಚ್ ಅನ್ನು ಸಹ ಇಲ್ಲಿ ನೀಡಲಾಗಿದೆ. ಆಸ್ಟ್ರಿಯನ್ ವಾಹನ ತಯಾರಕರು ಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಎರಡು ವಿಧಾನಗಳನ್ನು ನೀಡೀದ್ದಾರೆ. ಇದು - ಸ್ಟ್ರೀಟ್ ಮತ್ತು ಆಫ್ರೋಡ್ ಆಗಿದೆ. ಎರಡನೆಯದು ಹಿಂಬದಿಯ ಚಕ್ರಗಳನ್ನು ಒಂದು ಹಂತಕ್ಕೆ ಸ್ಲಿಪ್ ಮಾಡಲು ಅನುಮತಿಸುತ್ತದೆ, ಇದು ಆಫ್-ರೋಡ್ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

ಇದು ಬಹು ಮುಖ್ಯವಾಗಿ, ಸಂಕ್ಷಿಪ್ತ ಎಂಜಿನ್ ಸ್ಥಗಿತಗೊಂಡರೆ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಡೀಫಾಲ್ಟ್ ಸೆಟ್ಟಿಂಗ್‌ಗೆ ಹಿಂತಿರುಗುವುದಿಲ್ಲ. ಏಕೆಂದರೆ ಹೆಚ್ಚಿನ ಸಿಸ್ಟಂಗಳು ಸಾಮಾನ್ಯವಾಗಿ ಎಂಜಿನ್ ಅನ್ನು ಆಫ್ ಮಾಡಿದಾಗಲೆಲ್ಲಾ ಡೀಫಾಲ್ಟ್ ಸೆಟ್ಟಿಂಗ್‌ಗಳಿಗೆ ಹಿಂತಿರುಗುತ್ತವೆ, ಇದು ಹೆಚ್ಚಿನ ಸಂದರ್ಭಗಳಲ್ಲಿ ಕಿರಿಕಿರಿ ಮತ್ತು ಕೆಲವರಲ್ಲಿ ಅಪಾಯಕಾರಿಯಾಗಿದೆ. ಕೆಟಿಎಂ 390 ಅಡ್ವೆಂಚರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ.

ಈ ಕೆಟಿಎಂ 390 ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್, ಮುಂಭಾಗದಲ್ಲಿ 43 ಎಂಎಂ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ WP ಮೊನೊಶಾಕ್ ಅನ್ನು ಒಳಗೊಂಡಿದೆ. ಇನ್ನು 2022ರ ಕೆಟಿಎಂ 390 ಅಡ್ವೆಂಚರ್ ಬೈಕಿನ ಬ್ರ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಮತ್ತು ಹಿಂಭಾಗದಲ್ಲಿ 230 ಎಂಎಂ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಬದಲಾಯಿಸಬಹುದಾದ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

Article Published On: Saturday, August 19, 2023, 17:11 [IST]
English summary
Rahul gandhi rides ktm bike to pangong lake details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+