ಲಾಕ್‌ಡೌನ್ ಉಲ್ಲಂಘನೆ: ಫೇಸ್‌ಬುಕ್‌ನಲ್ಲಿ ಲೈವ್ ಬಂದು ಜೈಲು ಸೇರಿದ ಯುವಕ..!

ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಈ ಲಾಕ್‌ಡೌನ್ ಮೇ 3ರವರೆಗೆ ಇರಲಿದೆ. ಕೆಲವು ಪ್ರದೇಶಗಳಲ್ಲಿ ಷರತ್ತುಬದ್ದ ವಿನಾಯಿತಿ ನೀಡಲಾಗಿದೆ. ಇದರ ಹೊರತಾಗಿ ವಿನಾಕಾರಣ ಜನರು ಹೊರಬರದಂತೆ ನಿರ್ಬಂಧ ಹೇರಲಾಗಿದೆ. ಕೆಲವರು ಲಾಕ್‌ಡೌನ್ ಉಲ್ಲಂಘಿಸಿ ತಿರುಗಾಡುತ್ತಲೇ ಇದ್ದಾರೆ.

ಲಾಕ್‌ಡೌನ್ ಉಲ್ಲಂಘನೆ: ಫೇಸ್‌ಬುಕ್‌ನಲ್ಲಿ ಲೈವ್ ಬಂದು ಜೈಲು ಸೇರಿದ ಯುವಕ..!

ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಲಾಕ್‌ಡೌನ್ ಇನ್ನೂ ಜಾರಿಯಲ್ಲಿದೆ. ಆದರೂ ಯುವಕನೊಬ್ಬ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಇದರ ಜೊತೆಗೆ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ಬಂದಿದ್ದಾನೆ. ಬಿಎಂಡಬ್ಲ್ಯು ಕಾರಿನಲ್ಲಿ ಕುಳಿತು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿದ್ದಾನೆ.

ಲಾಕ್‌ಡೌನ್ ಉಲ್ಲಂಘನೆ: ಫೇಸ್‌ಬುಕ್‌ನಲ್ಲಿ ಲೈವ್ ಬಂದು ಜೈಲು ಸೇರಿದ ಯುವಕ..!

ರಾಯ್‌ಪುರದಲ್ಲಿ ಲಾಕ್‌ಡೌನ್‌ಗೆ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಕಾರು, ಬೈಕುಗಳ ಸಂಚಾರವನ್ನು ನಿಷೇಧಿಸಲಾಗಿದೆ ಈ ಕಾರಣಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಕಾರಿನೊಂದಿಗೆ ವಶಕ್ಕೆ ಪಡೆಯಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಉಲ್ಲಂಘನೆ: ಫೇಸ್‌ಬುಕ್‌ನಲ್ಲಿ ಲೈವ್ ಬಂದು ಜೈಲು ಸೇರಿದ ಯುವಕ..!

ಬಂಧಿಸಿದ್ದು ಮಾತ್ರವಲ್ಲದೇ ತನ್ನ ತಪ್ಪನ್ನು ಒಪ್ಪಿಕೊಂಡು ವಾಹನದೊಂದಿಗೆ ಫೇಸ್‌ಬುಕ್‌ನಲ್ಲಿ ಫೋಟೋ ಹಾಕುವಂತೆ ಪೊಲೀಸರು ಹೇಳಿದ್ದಾರೆ. ಮತ್ತೊಮ್ಮೆ ಈ ರೀತಿಯ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಯುವಕನನ್ನು ಅಭಿನಯ್ ಸೋನಿ ಎಂದು ಗುರುತಿಸಲಾಗಿದೆ. ಯುವಕ ಕ್ಷಮೆಯಾಚಿಸಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾನೆ.

ಲಾಕ್‌ಡೌನ್ ಉಲ್ಲಂಘನೆ: ಫೇಸ್‌ಬುಕ್‌ನಲ್ಲಿ ಲೈವ್ ಬಂದು ಜೈಲು ಸೇರಿದ ಯುವಕ..!

ಇದರ ಬಗ್ಗೆ ರಾಯ್‌ಪುರ ಎಸ್‌ಪಿ ಆರಿಫ್ ಶೇಖ್‌ರವರು ಟ್ವೀಟ್ ಮಾಡಿದ್ದು, ಲಾಕ್ ಡೌನ್, ಸೋಷಿಯಲ್ ಮೀಡಿಯಾ ಅಥವಾ ಟ್ರಾಫಿಕ್ ನಿಯಮಗಳೆಲ್ಲವನ್ನೂ ಜವಾಬ್ದಾರಿಯುತವಾಗಿ ಪಾಲಿಸಬೇಕು. ಇಲ್ಲದಿದ್ದರೆ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಉಲ್ಲಂಘನೆ: ಫೇಸ್‌ಬುಕ್‌ನಲ್ಲಿ ಲೈವ್ ಬಂದು ಜೈಲು ಸೇರಿದ ಯುವಕ..!

ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇರಬೇಕೆಂದು ಪೊಲೀಸರು ಸೂಚನೆ ನೀಡುತ್ತಿದ್ದರೂ ಸಹ ಕೆಲವರು ಇದನ್ನು ಪಾಲಿಸದೇ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಪೊಲೀಸರು ಇಂತಹ ಜನರನ್ನು ಬಂಧಿಸುವಂತಹ ಹಾಗೂ ವಾಹನಗಳನ್ನು ವಶಕ್ಕೆ ಪಡೆಯುವಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ: ಫೇಸ್‌ಬುಕ್‌ನಲ್ಲಿ ಲೈವ್ ಬಂದು ಜೈಲು ಸೇರಿದ ಯುವಕ..!

ಇತ್ತೀಚೆಗೆ, ಇಂದೋರ್‌ನಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಮಾಸ್ಕ್ ಧರಿಸದೇ ಸುತ್ತಾಡುತ್ತಿದ್ದ ಯುವಕನಿಗೆ ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ನೀಡಿದ್ದರು. ಮತ್ತೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಉಲ್ಲಂಘನೆ: ಫೇಸ್‌ಬುಕ್‌ನಲ್ಲಿ ಲೈವ್ ಬಂದು ಜೈಲು ಸೇರಿದ ಯುವಕ..!

ಯುವಕನಿಗೆ ಬಸ್ಕಿ ಹೊಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೂ ಸಹ ಲಾಕ್‌ಡೌನ್ ನಿಯಮಗಳನ್ನುಉಲ್ಲಂಘಿಸುವ ಪ್ರಕರಣಗಳು ಕಡಿಮೆಯಾಗಿಲ್ಲ.

Most Read Articles

Kannada
English summary
Raipur youth breaks lockdown with his BMW car arrested. Read in Kannada.
Story first published: Tuesday, April 28, 2020, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X