1008 ಅನಾಥ ಶವಗಳ ಸಂಸ್ಕಾರ ಮಾಡಿ ವಿಶ್ವದಾಖಲೆ: ಸಮಾಜ ಸೇವಕನಿಗೆ ರಜನಿಕಾಂತ್ ಆ್ಯಂಬುಲೆನ್ಸ್ ಗಿಫ್ಟ್
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Rajanikant) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮಿಳು, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ರಜನಿಕಾಂತ್ ತೆರೆಯ ಮೇಲೆ ಮಾತ್ರವಲ್ಲ, ತೆರಯ ಹೊರಗೂ ಸೂಪರ್ ಸ್ಟಾರ್ ಎಂದರೆ ತಪ್ಪಾಗಲಾರದು. ಯಾಕೆಂದರೆ ಇದಕ್ಕಾಗಿ ಅವರು ಮಾಡಿರುವ ಕೆಲಸಗಳೇ ಸಾಕ್ಷಿ.
ಸಮಾಜದಲ್ಲಿ ಒಳ್ಳೆಯ ಕಲಸವನ್ನು ಮಾಡಿದವರನ್ನು ಗುರುತಿಸುವುದು ರಜನಿ (Rajanikant) ಅವರ ಹವ್ಯಾಸಗಳಲ್ಲಿ ಒಂದು. ಇದೇ ರೀತಿ ಇತ್ತೀಚೆಗೆ ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆಯು ಸಮಾಜ ಸೇವಕರೊಬ್ಬರ ಕೆಲಸವನ್ನು ಗುರುತಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಆ್ಯಂಬುಲೆನ್ಸ್ ಒಂದನ್ನು ಉಡುಗೊರೆಯಾಗಿ ನೀಡಿದ ಘಟನೆ ನಡೆದಿದೆ.

ರಜನಿಕಾಂತ್ ಕೈಯಿಂದ ಉಡುಗೊರೆಯನ್ನು ಪಡೆದ ಸಮಾಜ ಸೇವಕನನ್ನು ಮಣಿಮಾರನ್ ಎಂದು ಗುರುತಿಸಲಾಗಿದ್ದು, ಇವರು ಇತ್ತೀಚೆಗಷ್ಟೇ ವಿಶಿಷ್ಟವಾದ ವಿಶ್ವ ದಾಖಲೆಯೊಂದನ್ನು ಮಾಡಿ ಸುದ್ದಿಯಾಗಿದ್ದರು. ಹೌದು, ಇವರು ಸಮಾಜ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಸುಮಾರು 1008 ಕ್ಕೂ ಅಧಿಕ ಅನಾಥ ಶವಗಳ ಶವ ಸಂಸ್ಕಾರವನ್ನು ತಮ್ಮ ಕೈಯಲ್ಲಿ ನೆರವೇರಿಸಿದ್ದಾರೆ.
ಹೌದು, ನಂಬಲು ಕೊಂಚ ಕಷ್ಟವಾದರೂ ಇವರು ಮಾಡಿರುವ ಕೆಲಸ ನಿಜಕ್ಕೂ ಶ್ಲಾಘನೀಯ. ಸುಮಾರು ಸಾವಿರಕ್ಕೂ ಅಧಿಕ ಅನಾಥ ಶವಗಳನ್ನು ಯಾವುದೇ ಭಂಗ ಬಾರದಂತೆ ಶಾಸ್ತ್ರೋಕ್ತವಾಗಿ ಶವ ಸಂಸ್ಕಾರವನ್ನು ಇವರು ಮಾಡಿದ್ದಾರೆ. ಇದರ ಜೊತೆಗೆ ಲೆಪ್ರೆಸಿ ಅಥವಾ ಫಿಡ್ಸ್ ಖಾಯಿಲೆಗಳುಳ್ಳ ವ್ಯಕ್ತಿಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಣಿಮಾರನ್ ಒದಗಿಸುತ್ತಿದ್ದಾರೆ.
ಮಣಿಮಾರನ್ ಅವರ ಪ್ರಕಾರ ತಾನು ಮಾಡಿರುವ ಸೇವೆಯನ್ನು ಗುರುತಿಸಿದ ರಜನಿ ಕಾಂತ್ ಅವರು ನನ್ನನ್ನು ಸಂಪರ್ಕಿಸಿ ಅವರ ಚೆನ್ನೈ ನಿವಾಸಕ್ಕೆ ಭೇಟಿ ನೀಡುವಂತೆ ಕೇಳಿಕೊಂಡರು. ಭೇಟಿಯಾದ ಬಳಿಕ ಸುಮಾರು ಇಪ್ಪತ್ತೈದು ನಿಮಿಷಗಳ ಕಾಲ ನಮ್ಮ ನಡುವೆ ಸಂಭಾಷಣೆ ನಡೆದಿದೆ. ನಾನು ಮಾಡಿರುವ ಕೆಲಸಗಳ ಬಗ್ಗೆ ರಜನಿಕಾಂತ್ ಅವರು ತುಂಬಾ ಸಂತೋಷ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ.
ಇನ್ನು ಭೇಟಿಯ ವೇಳೆ ಮಣಿಮಾರನ್ ಅವರು ಸೂಪರ್ ಸ್ಟಾರ್ ರಜನಿ ಕಾಂತ್ ಅವರಿಗೆ ತಮ್ಮ ಸಮಾಜ ಸೇವೆಗಳ ಕುರಿತಾಗಿನ ಫೋಟೋಗಳನ್ನು ಸಹ ತೋರಿಸಿದ್ದಾರೆ. ಇದರ ಜೊತೆಗೆ ವಿಶ್ವ ದಾಖಲೆ ಸಿಕ್ಕಂತ ಸರ್ಟಿಫಿಕೇಟ್‌ಗಳನ್ನು ಸಹ ರಜನಿ ಅವರಿಗೆ ತೋರಿಸಿದ್ದಾರೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್ ಇನ್ನಷ್ಟು ವರ್ಷಗಳ ಕಾಲ ಇಂತಹ ಪುಣ್ಯ ಕೆಲಸವನ್ನು ಮುಂದುವರೆಸುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಹದಿನೇಳು ವರ್ಷಗಳಿಂದ ಮಣಿಮಾರನ್ ಅನಾಥ ಶವಗಳ ಶವಸಂಸ್ಕಾರಗಳನ್ನು ಮಾಡುತ್ತ ಬಂದಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಅನಾಥ ಶವಗಳ ಸಂಸ್ಕಾರವನ್ನು ಮಾಡಿದ್ದಾರೆ. ಇವರ ಈ ಸೇವೆಯನ್ನು ಗುರುತಿಸಿ ವಿಶಿಷ್ಟ ಸೇವೆಗಾಗಿ ವಿಶ್ವದಾಖಲೆಯೂ ಇವರ ಹೆಸರಿಗಿದೆ. ಇದನ್ನರಿತ ರಜನಿಕಾಂತ್ ಮಣಿಮಾರನ್ ಅವರ ಕೆಲಸಗಳನ್ನು ಕೊಂಡಾಡಿ ಆ್ಯಂಬುಲೆನ್ಸ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications