ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

ಭಾರತದಲ್ಲಿ ರಸ್ತೆ ಅಪಘಾತಗಳಿಂದಾಗಿಯೇ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸುತ್ತಿವೆ. ವಾಹನ ಸವಾರರು ನಿಯಮ ಉಲ್ಲಂಘಿಸುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಈ ಕಾರಣಕ್ಕೆ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ನಡೆಸಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

ಆದರೆ ಇತ್ತೀಚಿಗೆ ನಡೆದಿರುವ ಕೆಲವು ಘಟನೆಗಳು ಸಂಚಾರಿ ಪೊಲೀಸರ ಜೀವಕ್ಕೆ ಬೆದರಿಕೆಯನ್ನೊಡ್ಡುತ್ತಿವೆ. ನವದೆಹಲಿಯಲ್ಲಿ ಕಳೆದ ಸೋಮವಾರ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಿಯಮ ಉಲ್ಲಂಘಿಸಿದ ಕಾರೊಂದನ್ನು ತಡೆದು ನಿಲ್ಲಿಸಿದ್ದರು. ಕಾರು ಚಾಲಕನು ಅಲ್ಲಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾರಿನ ಮುಂದೆ ನಿಂತಿದ್ದ ಸಂಚಾರಿ ಪೊಲೀಸ್ ಗೆ ಗುದ್ದಿದ್ದಾನೆ.

ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

ಇದರಿಂದಾಗಿ ಸಂಚಾರಿ ಪೊಲೀಸ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದರು. ಆ ಪೊಲೀಸ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದರೂ ಚಾಲಕ ಕಾರು ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಕೆಲ ದೂರ ಸಾಗಿದ ನಂತರ ಬಾನೆಟ್ ಮೇಲಿದ್ದ ಪೊಲೀಸ್ ಕೆಳಗೆ ಬಿದ್ದಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

ಇದೇ ರೀತಿಯ ಮತ್ತೊಂದು ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ದೆಹಲಿಯ ಘಟನೆ ಸೋಮವಾರ ನಡೆದಿದ್ದರೆ, ರಾಜಸ್ಥಾನದ ಘಟನೆ ಮಂಗಳವಾರ ನಡೆದಿದೆ. ವೇಗವಾಗಿ ಬರುತ್ತಿದ್ದ ಕಾರನ್ನು ನಿಲ್ಲಿಸಲು ಯತ್ನಿಸಿದ ಜೈಪುರದ ಟ್ರಾಫಿಕ್ ಪೊಲೀಸ್ ಕೃಷ್ಣ ಕುಮಾರ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ.

ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

ಆದರೆ ಕಾರು ಚಾಲಕ ಕಾರನ್ನು ನಿಲ್ಲಿಸದೆ ಮುಂದೆ ಸಾಗಿದ್ದಾನೆ. ಟ್ರಾಫಿಕ್ ಪೊಲೀಸ್ ಕೃಷ್ಣ ಕುಮಾರ್ ಕಾರಿನ ಬಾನೆಟ್ ಹಿಡಿದು ಸುಮಾರು 2 ಕಿ.ಮೀ ಸಾಗಿದ್ದಾರೆ ಎಂದು ಹೇಳಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

2 ಕಿ.ಮೀ ದೂರ ಸಾಗಿದ ನಂತರ ಅವರು ಕಾರಿನಿಂದ ಜಿಗಿದಿದ್ದಾರೆ. ಕಾರಿನಿಂದ ಜಿಗಿದಾಗ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಫಿಕ್ ಪೊಲೀಸ್ ಕೃಷ್ಣ ಕುಮಾರ್ ಕಾರಿನ ಬಾನೆಟ್ ಮೇಲೆ ಸಾಗುತ್ತಿರುವ ವೀಡಿಯೊ ವೈರಲ್ ಆಗಿದೆ.

ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

ಈ ಘಟನೆಗೆ ಸಾಕ್ಷಿಯಾದ ಕೆಲವರು ಕಾರನ್ನು ನಿಲ್ಲಿಸಲು ರಸ್ತೆಯ ಮಧ್ಯಭಾಗಕ್ಕೆ ಧಾವಿಸುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಆದರೆ ಚಾಲಕನು ಕಾರನ್ನು ನಿಲ್ಲಿಸಿಲ್ಲ. ಕಾರು ಚಾಲಕ 82 ಕಿ.ಮೀ ವೇಗದಲ್ಲಿ ಸಾಗುತ್ತಿದ್ದ ಎಂದು ವರದಿಯಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

ಆ ಪ್ರದೇಶದಲ್ಲಿ ವಾಹನಗಳ ವೇಗವು ಪ್ರತಿ ಗಂಟೆಗೆ 50 ಕಿ.ಮೀಗಳಿರಬೇಕು ಎಂಬ ನಿಯಮವಿದೆ. ಕಾರಿನ ಚಾಲಕ ವೇಗದ ಮಿತಿಯನ್ನು ಮೀರಿದ್ದರ ಜೊತೆಗೆ ಸಂಚಾರ ಪೊಲೀಸರ ಪ್ರಾಣಕ್ಕೆ ಕುತ್ತು ತಂದಿದ್ದಾನೆ.

ಘಟನೆಯ ನಂತರ ಕಾರು ಚಾಲಕ ನಾಪತ್ತೆಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಾರಿನ ನೋಂದಣಿ ಸಂಖ್ಯೆಯಿಂದ ವಿಳಾಸವನ್ನು ಪತ್ತೆ ಹಚ್ಚಿದರೂ ಸಹ ಆತ ನೀಡಿದ್ದ ವಿಳಾಸವು ನಕಲಿ ಎಂದು ತಿಳಿದುಬಂದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮರುಕಳಿಸಿದ ಸಂಚಾರಿ ಪೊಲೀಸ್ - ಕಾರು ಚಾಲಕರ ಬಾನೆಟ್ ಪ್ರಹಸನ

ಜೈಪುರ ಪೊಲೀಸರು ಆತನ ಬಂಧನಕ್ಕೆ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಪದೇ ಪದೇ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದು ಸಂಚಾರ ಪೊಲೀಸರಿಗೆ ಆಘಾತವನ್ನುಂಟು ಮಾಡಿದೆ.

Most Read Articles
 

Kannada
English summary
Rajasthan traffic police moves on bonnet for 2 kms. Read in Kannada.
Story first published: Saturday, October 17, 2020, 12:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X