ರೈಲ್ವೇ ಕ್ರಾಸಿಂಗ್‌ನಲ್ಲಿ ಸಿಕ್ಕಾಕೊಂಡ ಟ್ರ್ಯಾಕ್ಟರ್‌: ರಾಜಧಾನಿ ಎಕ್ಸ್‌ಪ್ರೆಸ್‌ಗೆ ಎಮೆರ್ಜೆನ್ಸಿ ಬ್ರೇಕ್‌ ಇಲ್ಲದಿದ್ದಿದ್ದರೆ...

ಇತ್ತೀಚೆಗಷ್ಟೇ ಒಡಿಸ್ಸಾದಲ್ಲಿ ನಡೆದ ದೇಶದ ಅತ್ಯಂತ ದೊಡ್ಡ ರೈಲು ಅಪಘಾತದ ಆಘಾತದಿಂದ ದೇಶದ ಜನರು ಹೊರಬರುವ ಮುನ್ನವೇ ಮತ್ತೊಂದು ಸಂಭವಿಸಬಹುದಾಗಿದ್ದ ರೈಲು ಅವಘಡ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಒಡಿಸ್ಸಾ - ದೆಹಲಿ ರಾಜಧಾನಿ ರೈಲು (Rajdhani Express) ನಡೆಯಬಹುದಾಗಿದ್ದ ಅಪಘಾತದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

ಜಾರ್ಖಂಡ್‌ನ ಬೊಕಾರೋ ಎಂಬಲ್ಲಿ ರೈಲ್ವೇ ಗೇಟ್‌ ಬಳಿ ದೆಹಲಿಯಿಂದ ಭುವನೇಶ್ವರ್‌ಗೆ ರೈಲು ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಚಾಲಕ ತನ್ನಡೆಗೆ ಬರುತ್ತಿದ್ದ ರೈಲನ್ನು ಲೆಕ್ಕಿಸದೇ ಇದ್ದಕ್ಕಿದ್ದಂತೇ ಟ್ರ್ಯಾಕ್ಟರನ್ನು ರೈಲ್ವೇ ಹಳಿಯನ್ನು ದಾಟಿಸಲು ಪ್ರಯತ್ನಿಸಿದ್ದೇ ಘಟನೆ ಸಂಭವಿಸಲು ಕಾರಣ ಎಂದು ತಿಳಿದು ಬಂದಿದೆ.

Tractor Gets Stuck At Railway Crossing

ಘಟನೆಗೆ ಕುರಿತಂತೆ ದೊರಕಿರುವ ವರದಿಗಳ ಪ್ರಕಾರ ರೈಲು ಬರುತ್ತಿದ್ದ ಕಾರಣದಿಂದ ರೈಲ್ವೇ ಸಿಬ್ಬಂದಿ ರೈಲ್ವೇ ಗೇಟನ್ನು ಮುಚ್ಚಲು ಪ್ರಯತ್ನಿಸಿದ್ದಾನೆ. ಇದೇ ಸಂಧರ್ಭದಲ್ಲಿ ಹಳಿ ದಾಟಲು ಪ್ರಯತ್ನಿಸುತ್ತಿದ್ದ ಟ್ರ್ಯಾಕ್ಟರ್‌ ಗೇಟ್‌ ಮುಚ್ಚುವುದಕ್ಕೂ ಮುನ್ನ ಅದನ್ನು ದಾಟಲು ಪ್ರಯತ್ನಿಸಿದ್ದಾನೆ. ಇದೇ ಅಪಘಾತ ನಡೆಯಲು ಕಾರಣ ಎಂದು ತಿಳಿದು ಬಂದಿದೆ.

ಇನ್ನು ಘಟನೆ ಸಾಯಂಕಾಲ 5 ಗಂಟೆಯ ವೇಳೆ ಸಂಭವಿಸಿದ್ದು, ಘಟನೆಯಿಂದಾಗಿ ರೈಲು ಸುಮಾರು 45 ನಿಮಿಷ ತಡವಾಗಿ ರೈಲು ಸ್ಥಳದಿಂದ ಹೊರಟಿದೆ. ಘಟನೆ ನಡೆಯುವ ವೇಳೆ ರೈಲೇನಾದರೂ ಎಮರ್ಜೆನ್ಸಿ ಬ್ರೇಕ್‌ ಹಾಕದೇ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಿದ್ದರೆ ದೊಡ್ಡ ಅಪಘಾತವೇ ಸಂಭವಿಸುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

Tractor Gets Stuck At Railway Crossing

ಇನ್ನು ಅಪಘಾತ ನಡೆಯಬಹುದು ಎಂದು ಅರಿತ ಕೂಡಲೇ ಟ್ರ್ಯಾಕ್ಟರ್‌ ಡ್ರೈವರ್‌ ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾನೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ರೈಲ್ವೇ ಗೇಟ್‌ನ ಸಿಬ್ಬಂದಿಯನ್ನು ಘಟನೆಗೆ ಸಂಭಂಧಿಸಿದಂತೆ ಕೆಲಸದಿಂದ ಅಮಾನತುಗೊಳಿಸಿ ಹೆಚ್ಚಿನ ತನಿಖೆಗೆ‌ ಆದೇಶ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇನ್ನು ಘಟನೆಗೆ ಕಾರಣವಾದ ಟ್ರ್ಯಾಕ್ಟರ್‌ ಅನ್ನು ಪೊಲೀಸರು ಸೀಜ್‌ ಮಾಡಿದ್ದು, ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳದಿಂದ ಪರಾರಿಯಾದ ಟ್ರ್ಯಾಕ್ಟರ್‌ ಚಾಲಕನನ್ನು ಸಹ ಬಂಧಿಸುವತ್ತ ಪೊಲೀಸರು ಗಮನ ಹರಿಸಿದ್ದಾರೆ. ಇತ್ತೀಚೆಗೆ ನಮ್ಮಲ್ಲಿ ರೈಲು ಅಪಘಾತಗಳು ಹೆಚ್ಚಾಗಿ ನಡೆಯುತ್ತಿದ್ದು ಹಲವು ಪ್ರಕರಣಗಳಲ್ಲಿ ನಾಗರೀಕರೇ ನೇರ ಹೊಣೆಯಾಗಿದ್ದಾರೆ.

ಮೇಲೆ ತಿಳಿಸಿದಂತಹ ಹವಾರು ಘಟನೆಗಳು ಇತ್ತೀಚೆಗೆ ನಮ್ಮ ನಡುವೆ ಹೆಚ್ಚಾಗಿದೆ. ಕಳೆದ ಕೆಲವು ಪ್ರಕರಣಗಳಲ್ಲಿ ರೈಲಿನ ಮಧ್ಯೆ ಒಂದು ಬೈಕ್‌ ಸಿಕ್ಕಿ ಹಾಕಿಕೊಂಡಿತ್ತು. ಅದೇ ರೀತಿ ಇನ್ನೊಂದು ಪ್ರಕರಣದಲ್ಲಿ ಹ್ಯುಂಡೈ ಕ್ರೇಟಾ ಕಾರು ಸಹ ಸಿಕ್ಕಿ ಹಾಕಿಕೊಂಡು ಫಚೀತಿ ಅನುಭವಿಸಿದ್ದನ್ನು ನಾವೆಲ್ಲಾ ನೋಡಿದ್ದೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 9, 2023, 12:47 [IST]
English summary
Rajdhani express applies emergency brakes after tractor gets stuck at railway crossing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+