ರಾಪಿಡೋ ಬೈಕ್ ಚಾಲಕನಿಗೆ ಆಟೋ ಚಾಲಕನಿಂದ ಕಿರುಕುಳ

ಬೈಕ್ ಟ್ಯಾಕ್ಸಿ ಚಾಲಕ ಮಹಿಳೆಯೊಬ್ಬರನ್ನು ಡ್ರಾಪ್ ಪಾಯಿಂಟ್‌ನಲ್ಲಿ ಇಳಿಸುವಾಗ ಆಟೋ ಡ್ರೈವರ್‌ನಿಂದ ಕಿರುಕುಳಕ್ಕೆ ಒಳಗಾಗಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ವಿಚಾರಣೆ ನಡೆಸಿ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ದ್ವಿಚಕ್ರ ವಾಹನದ ಮುಂದೆ ನಿಂತ ಆಟೋ ಚಾಲಕ ಬೈಕ್ ಟ್ಯಾಕ್ಸಿ ಚಾಲಕನ ಫೋನ್ ಕಸಿದುಕೊಂಡು ನೆಲಕ್ಕೆ ಒಡೆಯುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಆದರೆ ಅದಕ್ಕಿಂತ ಮುಂಚೆ ಏನಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದಾದ ಬಳಿಕ ಆಟೋ ಚಾಲಕ, ಬೈಕ್ ಟ್ಯಾಕ್ಸಿ ಚಾಲಕನಿಗೆ ಕಪಾಳಮೋಕ್ಷ ಮಾಡುವ ರೀತಿ ಸನ್ನೆ ಮಾಡುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಡ್ರಾಪ್ ಮಾಡಿಸಿಕೊಂಡ ಮಹಿಳೆ ವಿಡಿಯೋದಲ್ಲಿ ಎಲ್ಲೂ ಕಾಣುವುದಿಲ್ಲ.

ರಾಪಿಡೋ ಬೈಕ್ ಚಾಲಕನಿಗೆ ಆಟೋ ಚಾಲಕನಿಂದ ಕಿರುಕುಳ

ಮೊಬೈಲ್ ಒಡೆದ ನಂತರ ಆಟೋ ಚಾಲಕ ತನ್ನ ಉದ್ದೇಶವನ್ನು ವಿವರಿಸುತ್ತಾ.. ರಾಪಿಡೊ ಬೈಕ್ ಟ್ಯಾಕ್ಸಿ ಸೇವೆಗಳು ಅಕ್ರಮವಾಗಿ ನಡೆಯುತ್ತಿವೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. "ಆತ್ಮೀಯ ಸ್ನೇಹಿತರೇ, ರಸ್ತೆಗಳಲ್ಲಿ ಎಷ್ಟು ಅಕ್ರಮ ರಾಪಿಡೋ ಬೈಕ್‌ಗಳು ಸಂಚರಿಸುತ್ತಿವೆ ಎಂಬುದನ್ನು ಇದು ತೋರಿಸುತ್ತದೆ." ಈ ಯುವಕ ಬೇರೆ ದೇಶದವನಾಗಿದ್ದು ಇಲ್ಲಿ ಅಕ್ರಮವಾಗಿ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಆತನ ಕಡೆ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನೀವೆಲ್ಲರೂ ನೋಡುವಂತೆ, ಈ ವ್ಯಕ್ತಿ ಬೇರೆ ದೇಶದವನು. ಇವರೆಲ್ಲರೂ ಇಲ್ಲಿ ಬೈಕ್ ಟ್ಯಾಕ್ಸಿಗಳನ್ನು ಸಂತೋಷದಿಂದ ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಓಡಿಸುತ್ತಿದ್ದಾರೆ. ಇದರಿಂದ ಆಟೊ ಡಿಪಾರ್ಟ್‌ಮೆಂಟ್‌ ಎಷ್ಟು ಕೆಟ್ಟೋಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಆಟೋ ಚಾಲಕ ಹೇಳಿದ್ದಾರೆ. ಬೈಕ್ ಟ್ಯಾಕ್ಸಿ ಚಾಲಕ ವೈಟ್‌ ಬೋರ್ಡ್ ದ್ವಿಚಕ್ರ ವಾಹನವನ್ನು ತನ್ನ ಟ್ಯಾಕ್ಸಿ ಆಗಿ ಬಳಸುತ್ತಿರುವುದನ್ನು ಅವರು ತೋರಿಸಿದ್ದು ಆತನ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

ರಾಪಿಡೋ ಬೈಕ್ ಚಾಲಕನಿಗೆ ಆಟೋ ಚಾಲಕನಿಂದ ಕಿರುಕುಳ

"ಈ ಹುಡುಗ ಅಕ್ರಮವಾಗಿ ನಡೆಸುತ್ತಿದ್ದ ಬೈಕ್ ಟ್ಯಾಕ್ಸಿಯಲ್ಲಿ ಒಬ್ಬ ಮಹಿಳೆ ಪ್ರಯಾಣಿಕರನ್ನು ಈಗಷ್ಟೇ ಇಳಿಸಿದನು. ಆತ ನಮ್ಮ ದೇಶದವನಲ್ಲ ಅವನು ಹೊರಗಿನವನು, ಇದಕ್ಕೆ ಪ್ರೋತ್ಸಾಹಿಸಬೇಡಿ ಎಂದು ಆಟೋ ಚಾಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದ ಅಧಿಕೃತ ಟ್ವಿಟ್ಟರ್ ಖಾತೆಯು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಘಟನೆಯ ಕುರಿತು ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಟ್ಟುನಿಟ್ಟಿನ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ತಿಳಿಸಿದ್ದಾರೆ.

ಬೈಕ್ ಸವಾರ, ಆಟೋ ಚಾಲಕನ ವಿರುದ್ಧ ಇನ್ನೂ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ, ಪೊಲೀಸರು ಆಟೋ ಚಾಲಕನ ಹುಡುಕಾಟದಲ್ಲಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಕ್ರಮವಾಗಿ ರಾಪಿಡೋ ಓಡಿಸುವುದು ತಪ್ಪು, ಹಾಗೆಂದು ಆಟೋ ಚಾಲಕ, ಬೈಕ್ ಚಾಲಕನಿಗೆ ಕಿರುಕುಳ ನೀಡಿದ್ದು ಕೂಡ ತಪ್ಪು. ಇಂತಹ ಸನ್ನಿವೇಶಗಳು ಎದುರಾದಾಗ ಕಾನೂನಿನ ಮೂಲಕ ನ್ಯಾಯಕ್ಕೆ ಮುಂದಾಗಬೇಕು. ಇಲ್ಲದಿದ್ದರೇ ನಮ್ಮ ವಿರುದ್ಧವೇ ಪ್ರಕರಣ ದಾಖಲಾಗುತ್ತದೆ ಎಂಬುದಕ್ಕೆ ಇದೇ ಉತ್ತಮ ಉದಾಹರಣೆಯಾಗಿದೆ.

ಕೇವಲ ನಮ್ಮ ಬೆಂಗಳೂರು ಮಾತ್ರವಲ್ಲದೇ ದೇಶದ ಹಲವು ನಗರಗಳಲ್ಲಿ ಅಕ್ರಮವಾಗಿ ರಾಪಿಡೋ ದ್ವಿಚಕ್ರವಾಹನಗಳನ್ನು ಓಡಿಸಲಾಗುತ್ತಿದೆ. ಆಟೋ ಚಾಲಕ ವಿಡಿಯೋದಲ್ಲಿ ತೋರಿಸಿದಂತೆ ರಾಪಿಡೋ ಅವರು ವೈಟ್‌ ಬೋರ್ಡ್‌ ಹಾಕಿಕೊಂಡು ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಇದು ಸಾರಿಗೆ ನಿಯಮಗಳ ಉಲ್ಲಂಘನೆ ಆಗಿದೆ. ಈ ಹಿಂದೆಯೇ ಈ ಅಕ್ರಮ ಧಂದೆಯನ್ನು ನಿಲ್ಲಿಸುವಂತೆ ಬೈಕ್ ಟ್ಯಾಕ್ಸಿ ಸಂಸ್ಥೆಗಳಿಗೆ ಆದೇಶಿಸಲಾಗಿದೆ. ಆದರೂ ರಸ್ತೆಗಳಲ್ಲಿ ನಾವು ಇಂತಹ ಹಲವು ಬೈಕ್ ಟ್ಯಾಕ್ಸಿಗಳನ್ನು ಇಂದಿಗೂ ನೋಡುತ್ತಿದ್ದೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, March 9, 2023, 9:41 [IST]
English summary
Rapido bike driver harassed by auto driver
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+