ಲಾಕ್‌ಡೌನ್ ಎಫೆಕ್ಟ್: ಅಗತ್ಯ ವಸ್ತುಗಳ ಹೋಂ ಡೆಲಿವರಿ ಮಾಡಲಿದೆ ರಾಪಿಡೊ
ಬೈಕ್ ಟ್ಯಾಕ್ಸಿ ಸೇವಾ ಕಂಪನಿಯಾದ ರಾಪಿಡೊ ಕರ್ನಾಟಕ ಹಾಗೂ ದೆಹಲಿ ಸರ್ಕಾರದೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಈ ಸಹಭಾಗಿತ್ವದಂತೆ ಅಗತ್ಯ ವಸ್ತುಗಳನ್ನು ಪೂರೈಸಲಿದೆ. ಲಾಕ್‌ಡೌನ್ ಸಮಯದಲ್ಲಿ ಕಂಪನಿಯು ಅಗತ್ಯ ವಸ್ತುಗಳನ್ನು ಹೋಂ ಡೆಲಿವರಿ ಮಾಡಲಿದೆ.

ಇದಕ್ಕಾಗಿ ರಾಪಿಡೊ ಕಂಪನಿಯು ತನ್ನ ವಿತರಣಾ ಪಾಲುದಾರರೊಂದಿಗೆ ಸಪ್ಲೈ ಚೈನ್ ಅನ್ನು ಆರಂಭಿಸಿದೆ. ರಾಪಿಡೊ ಕಂಪನಿಯು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ದೆಹಲಿ ಸರ್ಕಾರವನ್ನು ಬೆಂಬಲಿಸುತ್ತಿದೆ. ಡಿಸಿಪಿಸಿ ನೋಡ್ ಅಡಿಯಲ್ಲಿ ಬರುವ ಹಿಂದುಳಿದ ಪ್ರದೇಶಗಳಲ್ಲಿ ಹಾಲು ಹಾಗೂ ಪುಡ್ ಪ್ಯಾಕೆಟ್‌ಗಳನ್ನು ವಿತರಿಸುತ್ತಿದೆ.

ರಾಪಿಡೊ 16,000 ಸ್ಥಳೀಯ ದಿನಸಿ ಅಂಗಡಿಗಳು ಹಾಗೂ ಮೆಡಿಕಲ್ ಸ್ಟೋರ್‌ಗಳ ಜೊತೆಗೆ ಸಹಭಾಗಿತ್ವವನ್ನು ಹೊಂದಿದ್ದು, ಅಗತ್ಯ ವಸ್ತುಗಳನ್ನು ಹೋಂ ಡೆಲಿವರಿ ಮಾಡಲಿದೆ. ಹೋಂ ಡೆಲಿವರಿ ಪಡೆಯ ಬಯಸುವ ಗ್ರಾಹಕರು 080-61914960 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಎಸ್‌ಎಂಎಸ್ ಕಳುಹಿಸುವ ಮೂಲಕ ತಮಗೆ ಬೇಕಾಗಿರುವ ಸಾಮಗ್ರಿಗಳನ್ನು ಬುಕ್ ಮಾಡಬಹುದು.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ರಾಪಿಡೊ ಕಂಪನಿಯು ಲಾಕ್‌ಡೌನ್ ವೇಳೆಯಲ್ಲಿ ಅಗತ್ಯ ವಸ್ತುಗಳನ್ನು ಡೆಲಿವರಿ ಮಾಡುವ ಸಲುವಾಗಿ ಬಿಗ್ ಬಾಸ್ಕೆಟ್, ಬಿಗ್ ಬಜಾರ್ ಹಾಗೂ ಸ್ಪೆನ್ಸಾರ್‌ನಂತಹ ಕಂಪನಿಗಳ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.

ತನ್ನ ಚಾಲಕರ ಸಹಾಯದಿಂದ ರಾಪಿಡೊ ಕಂಪನಿಯು ದೊಡ್ಡ ದೊಡ್ಡ ಮಳಿಗೆಗಳಿಂದ ಅಗತ್ಯ ವಸ್ತುಗಳನ್ನು ಹೋಂ ಡೆಲಿವರಿ ಮಾಡಲಿದೆ. ರಾಪಿಡೊ ಈ ಸೇವೆಯನ್ನು ದೇಶದ 90 ನಗರಗಳಲ್ಲಿ ಆರಂಭಿಸುತ್ತಿದೆ. ಈ ಸೇವೆಯನ್ನು ನೀಡಲು ಕಂಪನಿಯ 70%ನಷ್ಟು ಚಾಲಕರು ಲಭ್ಯರಿದ್ದಾರೆ ಎಂದು ರಾಪಿಡೋ ಹೇಳಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ರಾಪಿಡೊ ಕಂಪನಿಯು ತನ್ನ ವಿತರಣಾ ಸೇವೆಗಳನ್ನು ವಿಸ್ತರಿಸಲು ಗ್ರೋಫರ್ಸ್, ಡಂಜೊ, ಫ್ರೆಶ್‌ಹೋಮ್‌ನೊಂದಿಗೆ ಸಹಭಾಗಿತ್ವ ಹೊಂದುವ ಸಾಧ್ಯತೆಗಳಿವೆ. ಅಗತ್ಯ ಸರಕುಗಳನ್ನು ಹೋಂ ಡೆಲಿವರಿ ಮಾಡಲು ರಾಪಿಡೊ ಕಂಪನಿಯು ಈ ಸೇವೆಯನ್ನು ನೀಡಲು ತನ್ನ ಪಾಲುದಾರರಿಗೆ ಹಾಗೂ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲವೆಂದು ಹೇಳಿದೆ.

ಕೆಲವು ದಿನಗಳ ಹಿಂದಷ್ಟೇ ಫ್ಲಿಪ್‌ಕಾರ್ಟ್ ಹಾಗೂ ಉಬರ್ ಕ್ಯಾಬ್ ಕಂಪನಿಗಳು ಸಹ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಹೋಂ ಡೆಲಿವರಿ ಮಾಡಲು ಸಹಭಾಗಿತ್ವವನ್ನು ಮಾಡಿಕೊಂಡಿದ್ದವು.


Click it and Unblock the Notifications