ವಂದೇ ಭಾರತ್ ಆಯ್ತು ಈಗ RapidX: 80 ಕಿ.ಮೀಗೆ ಕೇವಲ 50 ನಿಮಿಷ ಸಾಕು: ಮುಂದಿನ ವಾರ ಚಾಲನೆ!
ದೇಶದಲ್ಲಿ ರೈಲ್ವೆಯನ್ನು ಅಂತರಾಷ್ಟ್ರಿಯ ಮಟ್ಟದಲ್ಲಿ ಪರಿವರ್ತಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆರಂಭವಾದ ವಂದೇ ಭಾರತ್ ನಂತರ ಇದೀಗ ರ್ಯಾಪಿಡ್ ಎಕ್ಸ್ (RapidX) ಪ್ರಾರಂಭಕ್ಕೆ ಸಜ್ಜಾಗುತ್ತಿದೆ. ಸುದೀರ್ಘ ವರ್ಷಗಳ ನಿರೀಕ್ಷೆಯ ನಂತರ, ಭಾರತದ ಮೊದಲ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ, RapidX ಮುಂದಿನ ವಾರ ಪ್ರಾರಂಭಿಸಲು ಸಿದ್ಧವಾಗಿದೆ.
RAPIDX ರೈಲುಗಳು ಪ್ರಧಾನಿ ಮೋದಿಯವರ "ಮೇಕ್ ಇನ್ ಇಂಡಿಯಾ" ಮತ್ತು "ಆತ್ಮ ನಿರ್ಭರ್ ಭಾರತ್" ಉಪಕ್ರಮಗಳ ಉಜ್ವಲ ಉದಾಹರಣೆಯಾಗಿದೆ. ಹೆಚ್ಚಿನ ವೇಗದಲ್ಲಿ ಗಾಳಿಯ ಎಳೆತ (air drag) ವನ್ನು ಕಡಿಮೆ ಮಾಡಲು ಉದ್ದವಾದ ಮುಂಭಾಗ ಮತ್ತು ಪ್ಲಗ್-ಇನ್ ಬಾಗಿಲುಗಳೊಂದಿಗೆ ಏರೋಡೈನಾಮಿಕ್ ಪ್ರೊಫೈಲ್ ಮತ್ತು ಪ್ರಯಾಣಿಕರಿಗೆ ವಿಹಂಗಮ ನೋಟ (ಪನಾರಮಿಕ್) ಗಳನ್ನು ನೀಡುವ ದೊಡ್ಡ ಕಿಟಕಿ ಗ್ಲಾಸ್‌ಗಳನ್ನು ಈ ರೈಲುಗಳು ಹೊಂದಿವೆ.

ಈ ಮೊದಲ RAPIDX ರೈಲು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನು (ಎನ್‌ಸಿಆರ್) ಮೀರತ್ ನಗರದೊಂದಿಗೆ ಸಂಪರ್ಕಿಸುವ ಮಾರ್ಗದಲ್ಲಿ ಪ್ರಯಾಣಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ಉದ್ಘಾಟಿಸುವ ನಿರೀಕ್ಷೆಯಿದೆ. RapidX ಸೆಮಿ-ಹೈ-ಸ್ಪೀಡ್ ನಗರ ರೈಲು ವ್ಯವಸ್ಥೆಯಾಗಿದ್ದು, ಗಂಟೆಗೆ 160 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ವರದಿಯ ಪ್ರಕಾರ, ಎನ್‌ಸಿಆರ್ ಮತ್ತು ಮೀರತ್ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.
ಯುಪಿ ಸಿಎಂ ಯೋಗಿ ಭೇಟಿ: ಇಂದು (ಗುರುವಾರ) ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸಾಹಿಬಾಬಾದ್‌ನ ರಾಪಿಡೆಕ್ಸ್ ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣವನ್ನು ಪರಿಶೀಲಿಸಿದ್ದಾರೆ. ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಶನ್ (ಎನ್‌ಸಿಆರ್‌ಟಿಸಿ) ನ ಹಿರಿಯ ಅಧಿಕಾರಿಗಳು ಅವರಿಗೆ ಸಿಸ್ಟಮ್‌ನ ಎಲ್ಲಾ ಸಂಬಂಧಿತ ಅಂಶಗಳ ವಿವರವಾದ ಮಾಹಿತಿಯೊಂದಿಗೆ ವೀಡಿಯೊ ಪ್ರಸ್ತುತಿಯನ್ನು ನೀಡಿದ್ದಾರೆ.

ದೆಹಲಿ-ಗಾಜಿಯಾಬಾದ್-ಮೀರತ್ RRTS (ರಾಪಿಡ್ ಟ್ರಾನ್ಸಿಟ್ ಸಿಸ್ಟಮ್) ಕಾರಿಡಾರ್ ವರ್ಷಕ್ಕೆ 2,50,000 ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಇದು ಅತ್ಯಂತ ಶಕ್ತಿ ದಕ್ಷ ಸಾರಿಗೆ ವ್ಯವಸ್ಥೆಯಾಗಿದೆ. ಭಾರತದಲ್ಲಿ ಕವಾಚ್ ತಂತ್ರಜ್ಞಾನ ಮತ್ತು ಹೊಸ ವಂದೇ ಭಾರತ್ ರೈಲುಗಳ ಪರಿಚಯದ ನಂತರ ಈ ಹೆಜ್ಜೆ ಹೆಚ್ಚು ಮಹತ್ವದ್ದಾಗಿದೆ.
ದೆಹಲಿ-ಗಾಜಿಯಾಬಾದ್-ಮೀರತ್ ರ್ಯಾಪಿಡ್ ಎಕ್ಸ್- ಮಾರ್ಗದ ವಿವರಗಳು: ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ಮೊದಲ ವಿಭಾಗವು ತೆರೆಯಲು ಸಿದ್ಧವಾಗಿದೆ. ಈ 17-ಕಿ.ಮೀ ವಿಭಾಗವು ಸಾಹಿಬಾಬಾದ್‌ನಿಂದ ದುಹೈವರೆಗೆ ಸಾಗುತ್ತದೆ. ಸದ್ಯ ಭಾರತದ ಮೊದಲ ಸೆಮಿ-ಹೈ ಸ್ಪೀಡ್ ಅರ್ಬನ್ ರೈಲು 17-ಕಿಲೋಮೀಟರ್ ವಿಭಾಗದಲ್ಲಿ ಚಾಲನೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಇನ್ನು ದೆಹಲಿಯಿಂದ ಮೀರತ್‌ವರೆಗಿನ 82.1 ಕಿಲೋಮೀಟರ್ ಕಾರಿಡಾರ್ 2025 ರಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಎನ್‌ಸಿಆರ್‌ಟಿಸಿಯು (ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ) ಮೀರತ್‌ನ ಜನರಿಗೆ ಸ್ಥಳೀಯ ಸಂಪರ್ಕವನ್ನು ಒದಗಿಸಲು ಅದೇ ಮಾರ್ಗದಲ್ಲಿ ಮೆಟ್ರೋ ನಿಲ್ದಾಣಗಳನ್ನು ಕೂಡ ನಿರ್ಮಿಸುತ್ತದೆ. ಮೆಟ್ರೋ ಮತ್ತು ಕ್ಷಿಪ್ರ ರೈಲು ಎರಡೂ ಪ್ರಿಕಾಸ್ಟ್ ಹೈಟೆಕ್ ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್‌ಗಳಲ್ಲಿ ಚಲಿಸುತ್ತವೆ ಎಂದು ತಿಳಿದುಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications