ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಮೆಚ್ಚುಗೆ

ರತನ್‌ ಟಾಟಾ ಅವರು ಭಾರತದ ಖ್ಯಾತ ಉದ್ಯಮಿ ಜೊತೆಗೆ ದೇಶ ಕಂಡ ಉದಾರಿ ಉದ್ಯಮಿ ಎಂದು ಜನಪ್ರಿಯರಾಗಿದ್ದಾರೆ. ಭಾರತ ನಿರ್ಮಾಣದಲ್ಲಿ ಹಾಗೂ ದೇಶದ ಸಂಕಷ್ಟದಲ್ಲಿ ಕೈಜೋಡಿಸಿದ ಸಹೃದಯಿ ರತನ್ ಟಾಟಾ ಅವರು ಇಂದೀಗೂ ಅದೇ ಸರಳತೆ, ಅದೇ ಮಾನವೀಯತೆ. ಇದು ಮತ್ತೊಮ್ಮೆ ಸಾಬೀತಾಗಿದೆ.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ರತನ್‌ ಟಾಟಾ ಅವರ ಸರಳತೆಗೆ ಮತ್ತೊಂದು ಘಟನೆ, ಮುಂಬೈನಲ್ಲಿರುವ ತಮ್ಮದೆ ಮಾಲೀಕತ್ವದ ತಾಜ್ ಹೊಟೆಲ್‌ಗೆ ಕಸ್ಟಮೈಸ್ ಮಾಡಿದ ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ ಆಗಮಿಸಿದ್ದಾರೆ. ಇಷ್ಟೇ ಅಲ್ಲ ಯಾವುದೇ ಭದ್ರತೆ ಇಲ್ಲದೆ ಆಗಮಿಸಿದ್ದಾರೆ. ಟಾಟಾ ಮಾಲೀಕತ್ವದ ತಾಜ್ ಹೊಟೆಲ್‌ಗೆ ರತನ್ ಟಾಟಾ ತಮ್ಮಲ್ಲಿರುವ ನ್ಯಾನೋ ಕಾರಿನಲ್ಲಿ ಆಗಮಿಸಿದ್ದಾರೆ. ರತನ್ ಟಾಟಾ ಅವರನ್ನು ಹೊಟೆಲ್ ಸಿಬ್ಬಂದಿಗಳು ಸ್ವಾಗತಿಸಿ ಕರೆದೊಯ್ದಿದ್ದಾರೆ. ಯಾವುದೇ ಭದ್ರತಾ ಅಧಿಕಾರಿಗಳು ಇಲ್ಲದೆ ರತನ್ ಟಾಟಾ ಸಿಬ್ಬಂದಿಗಳ ಜೊತೆ ಮುನ್ನಡೆದಿದ್ದಾರೆ.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ಖ್ಯಾತ ಉದ್ಯಮಿಯಾದರೂ ಪುಟ್ಟ ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದಿರುವುದು ಅವರ ಸರಳೆತೆಗೆ ಹಿಡಿದ ಕನ್ನಡಿಯಾಗಿದೆ. ಇನ್ನು ಕೊರೊನಾ ವಿರುದ್ಧ ಹೋರಾಡಲು ಸಾವಿರಾರು ಕೋಟಿ ರೂಪಾಯಿ ದೇಣಿಗೆ ನೀಡಿದ್ದ ರತನ್‌ ಟಾಟಾ ದೇಶದ ವಿಷಯದಲ್ಲಿ, ಸಾಮಾಜಿಕ ಸಮಸ್ಯೆಗಳ ವಿಚಾರದಲ್ಲಿ ಯಾವಾಗಲೂ ಉದಾರಿಯ ಆಗಿರುತ್ತಾರೆ ಹೀಗಾಗಿ ಇವರು ಕೇವಲ ಉದ್ಯಮಿ ಎಂದಷ್ಟೇ ಗುರುತಿಸದೆ.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ಒಬ್ಬ ಉದಾರಿ ಸಮಾಜ ಸೇವಕರಾಗಿ ದೇಶದ ಜನಮಾನಸದಲ್ಲಿ ಉಳಿದಿದ್ದಾರೆ. ಇಷ್ಟೇ ಅಲ್ಲದ ಯುವಕರ ಸ್ಟಾರ್ಟ್‌ಅಪ್‌ಗೆ ಬೆಂಬಲವಾಗಿ ನಿಂತು ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನೆರವಾಗಿರುವ ಅಪರೂಪದ ಉದ್ಯಮಿಯಾಗಿದ್ದಾರೆ.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ತಾಜ್ ಹೊಟೆಲ್‌ಗೆ ರತನ್‌ ಟಾಟಾ ಆಗಮಿಸಿದ ಕಸ್ಟಮೈಸ್ ಮಾಡಿದ ನ್ಯಾನೋ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೇಳುವುದಾದರೆ, ರತನ್‌ ಟಾಟಾ ಹೂಡಿಕೆ ಮಾಡಿರುವ ಎಲೆಕ್ಟ್ರಾ ಇವಿ ಅಭಿವೃದ್ಧಿಪಡಿಸಿದ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ರತನ್ ಟಾಟಾ ಅವರಿಗೆ ನೀಡಿದೆ. ಇದೇ ಎಲೆಕ್ಟ್ರಾ ಇವಿ ಸ್ಟಾರ್ಟ್ಅಪ್ ಟಾಟಾ ಮೋಟಾರ್ಸ್ ಸಂಸ್ಥೆಯ ಜನಪ್ರಿಯ ನ್ಯಾನೋ ಆಧಾರಿತ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸಿದೆ.

ಎಲೆಕ್ಟ್ರಾ ಇವಿ ಹಳೆ ಇಂಧನ ವಾಹನಗಳನ್ನು ಎಲಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಲು ಬೇಕಾದ ಟೆಕ್ನಾಲಜಿ ಕಿಟ್ ಅಭಿೃದ್ಧಿಪಡಿಸುತ್ತಿದೆ. ಇದೆ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಕಾರನ್ನು ಅಭಿವೃದ್ಧಿಪಡಿಸಿದೆ. ಮಾಡಿಫಿಕೇಶನ್ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 160 ಕಿ.ಮೀವರೆಗೆ ಚಲಿಸಲಿದೆ.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ಈ ಕಸ್ಟಮೈಸ್ ಮಾಡಿದ ನ್ಯಾನೋ ಎಲೆಕ್ಟ್ರಿಕ್ ಕಾರು 10 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ 0-60 ಕಿಮೀ ವರೆಗೆ ವೇಗವನ್ನು ಪಡೆದುಕೊಳ್ಳುತ್ತದೆ. ಮತ್ತೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಆಗಿ ಬಂದರೆ, ಪರಿಸರಕ್ಕೆ ಹಾನಿಯಾಗದಂತೆ ಇದು ಪರಿಪೂರ್ಣ ಸಿಟಿ ಕಾರ್ ಎಂದು ಸಾಬೀತುಪಡಿಸುತ್ತದೆ ಎಂದು ನಾವು ಊಹಿಸುತ್ತೇವೆ.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ಈ ಎಲೆಕ್ಟ್ರಾ ಇವಿ ಕಸ್ಟಮ್-ನಿರ್ಮಿತ ನ್ಯಾನೋ ಇವಿಗಾಗಿ 72V ಆರ್ಕಿಟೆಕ್ಚರ್ ಅನ್ನು ಬಳಸಿದೆ. ಈ ಆರ್ಟಿಟೆಕ್ನಚರ್ ಎಲೆಕ್ಟ್ರಾ ಇವಿ ಟಿಗೊರ್ ಇವಿ (ಟ್ಯಾಕ್ಸಿ ಆವೃತ್ತಿ) ಯಿಂದ 140 ಕಿಮೀ ರೇಂಜ್ ಅನ್ನು ವಿಸ್ತರಿಸಲು ಮತ್ತು ಡ್ರೈವಿಂಗ್ ರೇಂಜ್ ಅನ್ನು ಹೆಚ್ಚಿಸಲು ವಿನ್ಯಾಸವನ್ನು ಮಾರ್ಪಡಿಸಲು ಸಹಾಯ ಮಾಡಿತು. Tigor ನ Xpress T EV ಆವೃತ್ತಿಯ ರೇಂಜ್ ಪವರ್‌ಟ್ರೇನ್‌ಗೆ ಯಾವುದೇ ಬದಲಾವಣೆಗಳನ್ನು ಮಾಡದೆಯೇ 213 ಕಿಮೀಗಳಿಗೆ ಹೆಚ್ಚಿಸಲಾಗಿದೆ.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ಟಾಟಾ ನ್ಯಾನೋ ಇವಿ ನಿಖರವಾಗಿ ಪೆಟ್ರೋಲ್ ಚಾಲಿತ ನ್ಯಾನೋದಂತೆ ಕಾಣುತ್ತದೆ. ಇದು ಇನ್ನೂ ನಾಲ್ಕು ಡೋರುಗಳು, ನಾಲ್ಕೂ ಸೀಟುಗಳ ಸಣ್ಣ ಹ್ಯಾಚ್‌ಬ್ಯಾಕ್ ಆಗಿದೆ. ಕಾರು ಈಗ ಸೂಪರ್ ಪಾಲಿಮರ್ ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಚಾಲಿತವಾಗಿದೆ.

ಎಲೆಕ್ಟ್ರಾ ಇವಿ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ದೇಶದಲ್ಲಿ ಎಲಕ್ಟ್ರಿಕ್ ವಾಹನ ಟೆಕ್ನಾಲಜಿ, ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್, ಪವರ್‌ಟ್ರೈನ್ ಅಭಿವೃದ್ಧಿ ಸೇರಿದಂತೆ ಇವಿ ಕ್ಷೇತ್ರದಲ್ಲಿ ತೂಡಗಿಸಿಕೊಂಡಿದೆ. ಅತಿ ಕಡಿಮೆ ಬೆಲೆ, ಸಣ್ಣ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಂಡ ಟಾಟಾ ನ್ಯಾನೋ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ನೀಡಿರುವುದು ವಿಶೇಷ.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ಜನವರಿ 10, 2008 ರಂದು ಬಿಡುಗಡೆಯಾದ ದೇಶದ ಅತ್ಯಂತ ಕೈಗೆಟುಕುವ ಕಾರು ಉತ್ಪಾದನೆಯ ಹಿಂದಿನ ಸಂಕ್ಷಿಪ್ತ ಕಥೆಯನ್ನು ಹಂಚಿಕೊಂಡಿದ್ದಾರೆ. ಭಾರತದ ಮಧ್ಯಮ ವರ್ಗದ ಕುಟುಂಬಗಳು ಸ್ಕೂಟರ್ ಮೇಲೆ ಮಕ್ಕಳು, ಪತ್ನಿ ಜೊತೆ ಪ್ರಯಾಣ, ಹಾಳು, ಗುಂಡಿ ಬಿದ್ದ ರಸ್ತಗಳಲ್ಲಿನ ಪ್ರಯಾಣ ತಪ್ಪಿಸಲು ರತನ್ ಟಾಟಾ ನ್ಯಾನೋ ಕಾರನ್ನು ಪರಿಚಯಿಸಿದ್ದರು. 1 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನ್ಯಾನೋ ಕಾರನ್ನು ಪರಿಚಚಯಿಸಲಾಗಿತ್ತು.

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ ಸರಳತೆಗೆ ನೆಟ್ಟಿಗರ ಸಂತಸ

ಟಾಟಾ ಮೋಟಾರ್ಸ್ ಬೇಡಿಕೆಯ ಕುಸಿತದಿಂದಾಗಿ 2019 ರಲ್ಲಿ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರೂ ಭಾರತದ ಆಟೋಮೊಬೈಲ್ ಉದ್ಯಮದ ಇತಿಹಾಸದಲ್ಲಿ ಈ ಕಾರು ವಿಶೇಷವಾಗಿ ಉಳಿದುಕೊಂಡಿದೆ,

Most Read Articles

Kannada
English summary
Ratan tata arrives at taj mahal hotel in his customised nano electric car without bodyguards details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X