Ratan Tata: ರತನ್ ಟಾಟಾ ಬಳಿಯಿದ್ದ ಅದ್ಭುತ ಕಾರುಗಳಿವು.. ಲಕ್ಷದಿಂದ ಕೋಟಿ ವರೆಗೆ.. ನೀವೇ ನೋಡಿ!
ಟಾಟಾ ಸಮೂಹದ (Tata Sons) ಗೌರವ ಅಧ್ಯಕ್ಷ ರತನ್ ಟಾಟಾ (Ratan Tata) ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಅವರ ಮಾಲೀಕತ್ವದ ಟಾಟಾ ಮೋಟಾರ್ಸ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ರತನ್ ಟಾಟಾ ಅವರಿಗೆ ಕಾರುಗಳ ಮೇಲೆ ವಿಶೇಷ ಪ್ರೀತಿ ಇತ್ತು. ಅವರು ಹಲವು ಕಾರುಗಳ ಮಾಲೀಕರೂ ಆಗಿದ್ದರು. ಬನ್ನಿ.. ರತನ್ ಟಾಟಾ ಮನೆಯಲ್ಲಿರುವ ದುಬಾರಿ ಹಾಗೂ ಅಪರೂಪದ ಕಾರುಗಳು ಯಾವುದೆಂದು ತಿಳಿಯೋಣ.
ರತನ್ ಟಾಟಾ ಅವರ ಬಳಿ ತಮ್ಮದೇ ಕಂಪನಿಯ ನೆಕ್ಸಾನ್ (Nexon) ಕಾರು ಸಹ ಇತ್ತು. ಈ ಕಾರು, ನೀಲಿ (ಬ್ಲ್ಯೂ) ಬಣ್ಣವನ್ನು ಹೊಂದಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ (New Generation) ಟಾಟಾ ನೆಕ್ಸಾನ್ ಖರೀದಿಗೆ ಲಭ್ಯವಿದೆ. ಇದು ಎಸ್‌ಯುವಿಯಾಗಿದ್ದು, ರೂ.8 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ.

ಟಾಟಾ ಇಂಡಿಗೋ ಮರಿನಾ (Tata Indigo Marina) ದೊಡ್ಡ ಗಾತ್ರದ ಕಾರಾಗಿತ್ತು. ರತನ್ ಟಾಟಾ ಅವರು ತಮ್ಮ ಮುಂಬೈ ನಿವಾಸದ ಗ್ಯಾರೇಜ್‌ನಲ್ಲಿ ಈ ಕಾರನ್ನು ಇಟ್ಟುಕೊಂಡಿದ್ದರು. 2009ರಲ್ಲಿ ಇಂಡಿಗೋ ಮರಿನಾ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಇದೇ ಕಾರು, ರೂ.4.87 ಲಕ್ಷದಿಂದ ರೂ.6.28 ಲಕ್ಷ ದರವನ್ನು ಹೊಂದಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನೊಂದಿಗೆ 5-ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿತ್ತು.
ರತನ್ ಟಾಟಾ ಅವರು ಐಷಾರಾಮಿ ಫೆರಾರಿ ಕ್ಯಾಲಿಫೋರ್ನಿಯಾ (Ferrari California) ಕಾರಿನ ಮಾಲೀಕರೂ ಆಗಿದ್ದರು. ಮುಂಬೈನಲ್ಲಿ ಹಲವಾರು ಬಾರಿ ಈ ಕಾರಿನಲ್ಲಿ ಓಡಾಟ ನಡೆಸುವಾಗ ಅವರು ಕಾಣಿಸಿಕೊಂಡಿದ್ದರು. 2015ರಲ್ಲಿಯೇ ಫೆರಾರಿ ಕ್ಯಾಲಿಫೋರ್ನಿಯಾ ಮಾರಾಟವನ್ನು ನಿಲ್ಲಿಸಲಾಗಿದ್ದು, ಇದು ರೂ.2.20 ರಿಂದ ರೂ.3.29 ಕೋಟಿ ಬೆಲೆಗೆ ಖರೀದಿಗೆ ಸಿಗುತ್ತಿತ್ತು.

ದುಬಾರಿ ದರದ ಮರ್ಸಿಡಿಸ್-ಬೆಂಜ್ ಎಸ್-ಕ್ಲಾಸ್ (Mercedes-Benz S-Class) ಸೆಡಾನ್ ಮೇಲೆ ರತನ್ ಟಾಟಾ ಅವರು ಅತೀವ ಆಸಕ್ತಿ ಇತ್ತು. ಕಪ್ಪು (ಬ್ಲ್ಯಾಕ್) ಬಣ್ಣದ ಈ ಕಾರಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಸದ್ಯ ಹೊಸ ತಲೆಮಾರಿನ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಕಾರು ಗ್ರಾಹಕರಿಗೆ ಲಭ್ಯವಿದ್ದು, ರೂ.1.77 ಕೋಟಿಯಿಂದ ರೂ.1.86 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.
ರತನ್ ಟಾಟಾ ಅವರು ಜನಪ್ರಿಯ ಹೋಂಡಾ ಸಿವಿಕ್ (Honda Civic) ಸೆಡಾನ್‌ನ್ನು ಹೊಂದಿದ್ದರು. ಬಿಳಿ (ವೈಟ್) ಬಣ್ಣದ ಈ ಕಾರನ್ನು ದಿನನಿತ್ಯದ ಕೆಲಸ-ಕಾರ್ಯಗಳಿಗಾಗಿ ಬಳಕೆ ಮಾಡುತ್ತಿದ್ದರು. ಕೆಲವೊಮ್ಮೆ ಅವರೇ ಕಾರನ್ನು ಚಲಾಯಿಸುತ್ತಿದ್ದರು. ಹಲವು ವರ್ಷಗಳ ಹಿಂದೆಯೇ ಹೋಂಡಾ ಸಿವಿಕ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದೇ ಕಾರು, ರೂ.15 ಲಕ್ಷದಿಂದ ರೂ.22.35 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿತ್ತು.

ಸಾಮಾನ್ಯ ವರ್ಗದ ಜನರ ನೆಚ್ಚಿನ ಟಾಟಾ ನ್ಯಾನೋದ ಎಲೆಕ್ಟ್ರಿಕ್ ಚಾಲಿತ ಮಾದರಿ ಕೂಡ ರತನ್ ಟಾಟಾ ಅವರ ಬಳಿಯಿತ್ತು. ಇಂಧನ ಚಾಲಿತ ಆಯ್ಕೆಯಲಿದ್ದ ನ್ಯಾನೋವನ್ನು 'ಎಲೆಕ್ಟ್ರಾ ಇವಿ' ಕಂಪನಿಯು ಎಲೆಕ್ಟ್ರಿಕ್ ಪವರ್‌ಟ್ರೇನ್ ಅಳವಡಿಸಿ, ರತನ್ ಟಾಟಾ ಅವರಿಗೆ ಉಡುಗೊರೆಯಾಗಿ ನೀಡಿತ್ತು. ಇವುಗಳಷ್ಟೇ ಅಲ್ಲದೆ, ರತನ್ ಟಾಟಾ ಅವರು ಲ್ಯಾಂಡ್ ರೋವರ್ ಫ್ರೀಲ್ಯಾಂಡರ್, ಮರ್ಸಿಡಿಸ್-ಬೆಂಜ್ ಡಬ್ಲ್ಯೂ124, ಕ್ಯಾಡಿಲಾಕ್ ಎಕ್ಸ್ಎಲ್ಆರ್ ಮತ್ತು ಕ್ರಿಸ್ಲರ್ ಸೆಬ್ರಿಂಗ್ ಕಾರುಗಳ ಒಡೆಯರೂ ಆಗಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications