ಮರ್ಸಿಡಿಸ್ ಬೆಂಝ್ ಎಸ್ಎಲ್ 500 ಕಾರು ಚಾಲನೆ ಮಾಡಿದ ರತನ್ ಟಾಟಾ

ಟಾಟಾ ಸನ್ಸ್ ಹಾಗೂ ಟಾಟಾ ಟ್ರಸ್ಟ್‌ ಮಾಲೀಕರಾದ ರತನ್ ಟಾಟಾ ಭಾರತದ ಜನಪ್ರಿಯ ಉದ್ಯಮಿಗಳಲ್ಲಿ ಒಬ್ಬರು. ರತನ್ ಟಾಟಾ ಭಾರತ ಹಾಗೂ ವಿದೇಶಗಳಲ್ಲಿ ಟಾಟಾ ಸಾಮ್ರಾಜ್ಯವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿದರು. ರತನ್ ಟಾಟಾ ತಮ್ಮ ಪರೋಪಕಾರಿತನಕ್ಕೆ ಹೆಸರುವಾಸಿಯಾಗಿದ್ದಾರೆ.

ಮರ್ಸಿಡಿಸ್ ಬೆಂಝ್ ಎಸ್ಎಲ್ 500 ಕಾರು ಚಾಲನೆ ಮಾಡಿದ ರತನ್ ಟಾಟಾ

ರತನ್ ಟಾಟಾ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಐಷಾರಾಮಿ ಕಾರುಗಳ ಬಗ್ಗೆ ಒಲವನ್ನು ಹೊಂದಿರುವ ರತನ್ ಟಾಟಾ ಅನೇಕ ಆಮದು ಕಾರುಗಳನ್ನು ಹೊಂದಿದ್ದಾರೆ. ರತನ್ ಟಾಟಾ ಬಿಡುವಿನ ವೇಳೆಯಲ್ಲಿ ತಮ್ಮ ನೆಚ್ಚಿನ ಕಾರಿನಲ್ಲಿ ಸಂಚರಿಸುತ್ತಾರೆ. ಅಚ್ಚರಿಯ ಸಂಗತಿಯೆಂದರೆ ರತನ್ ಟಾಟಾ ಎಡಗಡೆ ಸ್ಟೀಯರಿಂಗ್ ಇರುವ ಮರ್ಸಿಡಿಸ್ ಬೆಂಝ್ ಎಸ್ಎಲ್ 500 ಕಾರನ್ನು ಚಾಲನೆ ಮಾಡುತ್ತಾರೆ.

ಮರ್ಸಿಡಿಸ್ ಬೆಂಝ್ ಎಸ್ಎಲ್ 500 ಕಾರು ಚಾಲನೆ ಮಾಡಿದ ರತನ್ ಟಾಟಾ

ಈ ಕಾರನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ರತನ್ ಟಾಟಾ ಮರ್ಸಿಡಿಸ್ ಬೆಂಝ್ ಎಸ್ಎಲ್ 500 ಕಾರನ್ನು ಡ್ರೈವ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಅವರ ಜೊತೆಗೆ ಸಹ-ಚಾಲಕನ ಸೀಟಿನಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದಾನೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮರ್ಸಿಡಿಸ್ ಬೆಂಝ್ ಎಸ್ಎಲ್ 500 ಕಾರು ಚಾಲನೆ ಮಾಡಿದ ರತನ್ ಟಾಟಾ

ಆತ ರತನ್ ಟಾಟಾರವರ ಭದ್ರತಾ ಸಿಬ್ಬಂದಿಯಂತೆ ಅಥವಾ ಪಿಎ ರೀತಿಯಲ್ಲಿ ಕಾಣುವುದಿಲ್ಲ. ರತನ್ ಟಾಟಾರವರು ಕಾರು ಚಾಲನೆ ವೇಳೆ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಲೇ ಇರುತ್ತಾರೆ.

ಮರ್ಸಿಡಿಸ್ ಬೆಂಝ್ ಎಸ್ಎಲ್ 500 ಕಾರು ಚಾಲನೆ ಮಾಡಿದ ರತನ್ ಟಾಟಾ

ಆದರೆ ಈ ವೀಡಿಯೊ 3-4 ವರ್ಷಗಳಷ್ಟು ಹಳೆಯದಾಗಿದ್ದು, ಈಗ ವೈರಲ್ ಆಗಿದೆ. ರತನ್ ಟಾಟಾರವರು ಸಾರ್ವಜನಿಕ ರಸ್ತೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ರತನ್ ಟಾಟಾ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ 500 ಸೇರಿದಂತೆ ಆಮದು ಮಾಡಿಕೊಂಡ ಹಲವು ಕಾರುಗಳನ್ನು ಹೊಂದಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಈ ಹಿಂದೆ ಅವರು ಯಾವುದೇ ಭದ್ರತಾ ಪಡೆ ಇಲ್ಲದೇ ಸಾರ್ವಜನಿಕ ರಸ್ತೆಗಳಲ್ಲಿ ಕನ್ವರ್ಟಿಬಲ್ ಫೆರಾರಿ ಕ್ಯಾಲಿಫೋರ್ನಿಯಾ ಕಾರನ್ನು ಚಾಲನೆ ಮಾಡಿದ್ದರು.ಭಾರತದ ಬಹುತೇಕ ಉದ್ಯಮಿಗಳು ಐಷಾರಾಮಿ ಕಾರುಗಳನ್ನು ಚಾಲನೆ ಮಾಡುವ ವೇಳೆಯಲ್ಲಿ ಕನಿಷ್ಠ ಒಂದು ಭದ್ರತಾ ಪಡೆ ಕಾರು ಅವರೊಂದಿಗೆ ಇರುತ್ತದೆ.

ಮರ್ಸಿಡಿಸ್ ಬೆಂಝ್ ಎಸ್ಎಲ್ 500 ಕಾರು ಚಾಲನೆ ಮಾಡಿದ ರತನ್ ಟಾಟಾ

ಮರ್ಸಿಡಿಸ್ ಬೆಂಝ್ ಎಸ್‌ಎಲ್‌ 500 ಕಾರಿನಲ್ಲಿ 5.0-ಲೀಟರಿನ ಆಸ್ಪಿರೇಟೆಡ್ ಪೆಟ್ರೋಲ್ ವಿ 8 ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 306 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ರತನ್ ಟಾಟಾ ಯಶಸ್ವಿ ಉದ್ಯಮಿ ಮಾತ್ರವಲ್ಲದೇ, ತರಬೇತಿ ಪಡೆದ ಪೈಲಟ್ ಸಹ ಹೌದು.

Most Read Articles

Kannada
English summary
Ratan Tata seen while driving Mercedes Benz SL 500. Read in Kannada.
Story first published: Thursday, August 20, 2020, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X