ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ಉದ್ಯಮಿ ರವಿ ಪಿಳ್ಳೈ ಕೇರಳದ ಕೊಲ್ಲಂ ಮೂಲದವರು. ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಅವರು ಭಾರತ ಹಾಗೂ ಅರಬ್ ರಾಷ್ಟ್ರಗಳಲ್ಲಿ ಉದ್ಯಮವನ್ನು ಹೊಂದಿದ್ದಾರೆ. ಅವರ ಸದ್ಯದ ಆಸ್ತಿಯ ಮೌಲ್ಯ 3.5 ಬಿಲಿಯನ್ ಡಾಲರ್‌ಗಳಾಗಿದೆ.

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ಬಡತನದಲ್ಲೇ ಹುಟ್ಟಿಬೆಳೆದ ಇವರು ಆರಂಭದ ದಿನಗಳಲ್ಲಿ ಸಣ್ಣಪುಟ್ಟ ವ್ಯವಹಾರವನ್ನು ನಡೆಸುತ್ತಿದ್ದರು. ತದನಂತರದ ದಿನಗಳಲ್ಲಿ ಆರ್‌ಪಿ ಗ್ರೂಪ್ ಹೆಸರಿನಲ್ಲಿ ಹಲವು ಯೋಜನೆಗಳನ್ನು ಆರಂಭಿಸಿದರು. ಅವರು ಆರಂಭಿಸಿದ ಉದ್ಯಮವು ಈಗ ಬೆಳವಣಿಗೆಯ ಉತ್ತುಂಗವನ್ನು ತಲುಪಿದ್ದು, ಅಗರ್ಭ ಶ್ರೀಮಂತರ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದ್ದಾರೆ.

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ರವಿ ಪಿಳ್ಳೈ ಪ್ರಸ್ತುತ ಭಾರತವು ಸೇರಿದಂತೆ ಹಲವು ದೇಶಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಅವರು ಅರಬ್, ಕತಾರ್ ಹಾಗೂ ಬಹ್ರೇನ್ ಸೇರಿದಂತೆ ಹಲವು ದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ಉದ್ಯಮ ವ್ಯವಹಾರದ ಜೊತೆಗೆ ಅವರು ವಾಹನಗಳ ಬಗ್ಗೆಯೂ ಕ್ರೇಜ್ ಹೊಂದಿರುವುದು ಸಾಕಷ್ಟು ಸುದ್ದಿಯಲ್ಲಿರುವಂತೆ ಮಾಡಿದೆ.

ರವಿ ಪಿಳ್ಳೆ

ರವಿ ಪಿಳ್ಳೈಯವರ ಮನೆಯಲ್ಲಿ ಕೋಟಿ ಕೋಟಿ ಬೆಲೆಯ ಕಾರುಗಳನ್ನು ಕಾಣಬಹುದು. ರವಿ ಪಿಳ್ಳೈಯವರ ಬಳಿಯಿರುವ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ರೋಲ್ಸ್ ರಾಯ್ಸ್ ಘೋಸ್ಟ್

ರವಿ ಪಿಳ್ಳೈಯವರ ದುಬಾರಿ ಕಾರುಗಳ ಪಟ್ಟಿಯಲ್ಲಿ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಸೆಡಾನ್ ಕಾರು ಮೊದಲ ಸ್ಥಾನದಲ್ಲಿದೆ. ಈ ಕಾರ್ ಅನ್ನು ಅವರು 2011ರಲ್ಲಿ ಖರೀದಿಸಿದ್ದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ಇದು ರೋಲ್ಸ್ ರಾಯ್ಸ್‌ ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದ್ದು, ಪ್ರತಿಷ್ಠಿತ ವ್ಯಕ್ತಿಗಳು ಮಾತ್ರವೇ ಖರೀದಿ ಮಾಡಬಹುದಾದ ಕಾರು ಇದಾಗಿದೆ.

ರವಿ ಪಿಳ್ಳೆ

ರವಿ ಪಿಳ್ಳೈಯವರು ಯಾವಾಗಲೂ ರೋಲ್ಸ್ ರಾಯ್ಸ್ ಘೋಸ್ಟ್ ಸೆಡಾನ್ ಕಾರ್ ಅನ್ನು ಬಳಸುತ್ತಾರೆ. ಇದಕ್ಕೆ ಕಾರಣ ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿರುವ ರೋಲ್ಸ್ ರಾಯ್ಸ್ ಕಾರುಗಳ ಪ್ರಯಾಣವು ಅದರದ್ದೆ ಆದ ಗತ್ತು ಹೊಂದಿವೆ ಎನ್ನಬಹುದು.

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್ 600

ಮರ್ಸಿಡಿಸ್ ಮೇಬ್ಯಾಕ್ ಎಸ್ 600, ಲಿಮೋಸಿನ್ ಕಾರುಗಳ ಲುಕ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹಲವಾರು ಐಷಾರಾಮಿ ಅಂಶಗಳಿರುವ ಕಾರಣಕ್ಕೆ ಐಷಾರಾಮಿ ಪ್ರಯಾಣವನ್ನು ಬಯಸುವ ಪ್ರಯಾಣಿಕರು ಈ ಕಾರಿಗೆ ಮೊದಲ ಆದ್ಯತೆ ನೀಡುತ್ತಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ಈ ಕಾರು ಕ್ರೂಸ್ ಹಡಗುಗಳಲ್ಲಿರುವಂತಹ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಈ ಕಾರಣಕ್ಕೆ ಈ ಕಾರಿನಲ್ಲಿ ಪ್ರಯಾಣಿಸಿದಾಗ ಹಡಗಿನಲ್ಲಿ ಪ್ರಯಾಣ ಮಾಡಿದಂತಹ ಅನುಭವವಾಗುತ್ತದೆ.

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ಈ ಕಾರಿನಲ್ಲಿ ಇನ್‌ಫೋಟೆನ್‌ಮೆಂಟ್ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಹಾಗೂ ಫರ್ಫ್ಯೂಮ್ ಸಿಸ್ಟಂಗಳಿವೆ. ಈ ಕಾರಿನಲ್ಲಿ ಅಳವಡಿಸಿರುವ 6.0-ಲೀಟರಿನ ವಿ12 ಎಂಜಿನ್ 530 ಬಿಹೆಚ್‌ಪಿ ಪವರ್ ಹಾಗೂ 800 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಅಂದ ಹಾಗೆ ಈ ಕಾರ್ ಅನ್ನು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿಲ್ಲವಾದ್ದರಿಂದ ಗ್ರಾಹಕರ ಬೇಡಿಕೆ ಮೇರೆಗೆ ಆಮದು ಮಾಡಿಕೊಳ್ಳಲಾಗುತ್ತದೆ.

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ಇವುಗಳ ಜೊತೆಗೆ ರವಿ ಪಿಳ್ಳೈರವರು ಬಿಎಂಡಬ್ಲ್ಯು 520 ಡಿ, ಆಡಿ ಎ6 ಮ್ಯಾಟ್ರಿಕ್ಸ್ ಕಾರುಗಳಿದ್ದು, ಇವುಗಳು ಹಲವಾರು ಐಷಾರಾಮಿ ಫೀಚರ್ಸ್‌ನೊಂದಿಗೆ ರೂ. 55 ಲಕ್ಷದಿಂದ ರೂ.65 ಲಕ್ಷ ತನಕ ಬೆಲೆ ಹೊಂದಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ರವಿ ಪಿಳ್ಳೆ

ಜೊತೆಗೆ ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್ 500, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋ ಬಯಾಗ್ರಫಿ ಕಾರುಗಳನ್ನು ಹೊಂದಿದ್ದರುವ ಉದ್ಯಮಿ ರವಿ ಪಿಳ್ಳೈ ಅವರು ಸಂದರ್ಭಗಳಿಗೆ ತಕ್ಕಂತೆ ಕಾರು ಮಾದರಿಗಳನ್ನು ಬಳಕೆ ಮಾಡುತ್ತಾರೆ.

ಬಡ ಕೃಷಿಕನ ಮಗ ಈಗ ಕೋಟಿ ಕೋಟಿ ಬೆಲೆಯ ಕಾರುಗಳ ಮಾಲೀಕ

ರವಿ ಪಿಳ್ಳೈ ಅವರು ತಮ್ಮ ಮಗಳ ಮದುವೆಯನ್ನು ಅಲಂಕರಿಸಲು ಆಡಿ ಎ6 ಮ್ಯಾಟ್ರಿಕ್ಸ್ ಕಾರನ್ನು ಖರೀದಿಸಿ ಭಾರೀ ಸುದ್ದಿಯಾಗಿದ್ದರು ಹಾಗೆಯೇ ನವದಂಪತಿಗಳಿಗಾಗಿ ಕೋಟಿ ಮೌಲ್ಯದ ಸೆಡಾನ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ರವಿ ಪಿಳ್ಳೆ

ಮಗಳಿಗಾಗಿ ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್ 500 ಕಾರ್ ಅನ್ನು ನೀಡಿದ್ದ ರವಿ ಪಿಳ್ಳೈ ಅವರು ಭಾರೀ ಸುದ್ದಿಯಾಗಿದ್ದರು.

ರವಿ ಪಿಳ್ಳೆ

ರವಿ ಪಿಳ್ಳೈ ಅವರು ಸಂಕಷ್ಟದ ಜೀವನದಲ್ಲೂ ಉದ್ಯಮ ವ್ಯವಹಾರಗಳನ್ನು ಕೈಗೊಂಡು ಯಶಸ್ವಿ ಕಂಡು ಸಾವಿರಾರು ಉದ್ಯೋಗಿಗಳಿಗೆ ಅನ್ನದಾತ ಕೂಡಾ ಹೌದು. ಇವರು ನಡೆಸುತ್ತಿರುವ ವಿವಿಧ ಉದ್ಯಮ ವ್ಯವಹಾರಗಳಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಜೀವನ ಕಂಡುಕೊಂಡಿದ್ದಾರೆ.

Article Published On: Monday, May 25, 2020, 11:02 [IST]
English summary
Billionaire Ravi Pillai's luxury cars. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+