ಸಾಮಾನ್ಯರಂತೆ ಬಂದು ಆಟೋ ಓಡಿಸಿದ್ದು ಇವರಾ? ಯಾರೆಂದು ತಿಳಿದು ಅಚ್ಚರಿಗೊಂಡ ಜನ!
ಭಾರತದ ಪ್ರಮುಖ ಉದ್ಯಮಿಯೊಬ್ಬರು ಇತ್ತೀಚೆಗೆ ಆಟೋ ರಿಕ್ಷಾವನ್ನು ಓಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಇವರು ಅನೇಕ ಫೆರಾರಿ, ಲ್ಯಾಂಬೊರ್ಘಿನಿ ಸೇರಿದಂತೆ ಅಪರೂಪದ ಅಮೇರಿಕನ್, ಯುರೋಪಿಯನ್ ಕಾರುಗಳು ಸೇರಿದಂತೆ ದುಬಾರಿ ಐಷಾರಾಮಿ, ಸೂಪರ್ ಕಾರುಗಳನ್ನು ಹೊಂದಿದ್ದಾರೆ. ಸದಾ ಕೋಟ್ಯಾಂತರ ರೂ. ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರು ದಿಢೀರ್ ಆಗಿ ಸಾಮಾನ್ಯ ಆಟೋವನ್ನು ಓಡಿಸುತ್ತಾ ಕಾಣಿಸಿಕೊಂಡಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಅಷ್ಟಕ್ಕು ಅವರು ಯಾರು? ಆಟೋ ಓಡಿಸಿದ ಹಿಂದಿನ ಕಾರಣವೇನು? ಈ ಕುರಿತ ಎಲ್ಲಾ ಮಾಹಿತಿ ಇಲ್ಲಿದೆ.
ಜನಪ್ರಿಯ ರೇಮಂಡ್ ಕಂಪನಿಯ ಬಗ್ಗೆ ನಿಮಗೆ ಗೊತ್ತೇ? ಹೌದು, ನೀವು ಕೇಳಿದ್ದು ಸರಿ - ರೇಮಂಡ್ ಗ್ರೂಪ್‌ನ ಬಿಲಿಯನೇರ್ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಆಟೋ ರಿಕ್ಷಾ ಓಡಿಸುತ್ತಾ ಕಾಣಿಸಿಕೊಂಡಿದ್ದಾರೆ. ಈ ಆಟೋ ರಿಕ್ಷಾದ ಚಾಲಕನ ಸೀಟಿನಲ್ಲಿ ಗೌತಮ್ ಸಿಂಘಾನಿಯಾ ಇದ್ದು, ಹಿಂದಿನ ಸೀಟಿನಲ್ಲಿ ಇನ್ನೂ ಇಬ್ಬರು ಕುಳಿತಿದ್ದರು. ತಿಳಿದಿಲ್ಲದವರಿಗೆ, ಈ ನಿರ್ದಿಷ್ಟ ಆಟೋ ರಿಕ್ಷಾವು ರೇಮಂಡ್ ಗ್ರೂಪ್ ಒಡೆತನದಲ್ಲಿದೆ.

ಗೌತಮ್ ಸಿಂಘಾನಿಯಾ ಕಾರು ಉತ್ಸಾಹಿಯಾಗಿದ್ದು, ಹಲವು ಬಗೆಯ ವಾಹನಗಳನ್ನು ಹೊಂದಿದ್ದಾರೆ. ಅಂತೆಯೇ ಗೌತಮ್ ಸಿಂಘಾನಿಯಾ ಅವರು 2016 ರಲ್ಲಿ ಈ ಆಟೋವನ್ನು ಸಹ ಖರೀದಿಸಿದ್ದರು. ಈ ಆಟೋಗೆ ವಿಶಿಷ್ಟ ಸ್ಪರ್ಶ ನೀಡಲು, ಕೆಂಪು ಮತ್ತು ಬಿಳಿಯ ವಿಶಿಷ್ಟ ಡ್ಯುಯಲ್-ಟೋನ್ ಬಣ್ಣದಲ್ಲಿ ಮಾಡಿಫೈಗೊಳಿಸಿದ್ದಾರೆ. ಅಲ್ಲದೆ, ಈ ಆಟೋ ರಿಕ್ಷಾದ ಒಳಗಿನ ಸೀಟ್‌ಗಳನ್ನು ಬಿಳಿ ಬಣ್ಣದಲ್ಲಿ ಪೇಂಟ್ ಮಾಡಿಸಿದ್ದಾರೆ.
ಆಟೋ ಓಡಿಸುವ ಉದ್ದೇಶವೇನು?: ಗೌತಮ್ ಸಿಂಘಾನಿಯಾ ಅವರು, ತಮ್ಮ ಬ್ರಾಂಡ್‌ನ ರೇಮಂಡ್ 100 ಆಟೋಫೆಸ್ಟ್ ಈವೆಂಟ್‌ನಲ್ಲಿ ಮೋಜಿಗಾಗಿ ಈ ವಾಹನವನ್ನು ಓಡಿಸಿದ್ದಾರೆ ಎನ್ನಲಾಗಿದೆ. ಈ ವಿಶಿಷ್ಟ ಸೂಪರ್ ಕಾರ್ ಈವೆಂಟ್ ಅನ್ನು ರೇಮಂಡ್ ಗ್ರೂಪ್ ಮತ್ತು ಸೂಪರ್ ಕಾರ್ ಕ್ಲಬ್ ಗ್ಯಾರೇಜ್ ಆಯೋಜಿಸಿತ್ತು. ಇದರಲ್ಲಿ ಮಾಜಿ ಕ್ರಿಕೆಟ್ ಆಟಗಾರ ಶಾಸ್ತ್ರಿ, ಎಫ್ 1 ರೇಸರ್ ನಾರಾಯಣ್ ಕಾರ್ತಿಕೇಯನ್‌ನಂತಹ ಗಣ್ಯರು ಭಾಗವಹಿಸಿದ್ದರು.

ಹಲವಾರು ಜೆಡಿಎಂ (ಜಪಾನಿನ ದೇಶೀಯ ಮಾರುಕಟ್ಟೆ) ಸೂಪರ್ ಕಾರುಗಳು, ಅಪರೂಪದ ಫೆರಾರಿಗಳಾದ 488 ಪಿಸ್ಟಾಸ್, 812 ಕಾಂಪಿಟಿಜಿಯೋನ್, ಲ್ಯಾಂಬೊರ್ಗಿನಿ ಅವೆಂಟಡೋರ್ ಅಲ್ಟಿಮೆ ರೋಡ್ ಸ್ಟರ್, ಎಸ್ ವಿಜೆ ಸೇರಿದಂತೆ 500 ಕ್ಕೂ ಹೆಚ್ಚು ಕಾರುಗಳು ಈ ಈವೆಂಟ್‌ನಲ್ಲಿ ಇದ್ದವು. ಇದೇ ಕಾರ್ಯಕ್ರಮದಲ್ಲಿ ಗೌತಮ್ ಸಿಂಘಾನಿಯಾ ತಮ್ಮ ವೈಯಕ್ತಿಕ ಕಾರು ಸಂಗ್ರಹ ಮತ್ತು ಡ್ರಿಫ್ಟಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅವರು ಬಿಎಂಡಬ್ಲ್ಯು ಎಂ3, ನಿಸ್ಸಾನ್ ಸಿಲ್ವಿಯಾ ಮತ್ತು ಅವರ ಪ್ರೀತಿಯ ಫೋರ್ಡ್ ಮಸ್ಟಾಂಗ್ ಮ್ಯಾಕ್ -1 ಸೇರಿದಂತೆ ವಿವಿಧ ಡ್ರಿಫ್ಟ್ ಕಾರುಗಳನ್ನು ತಂದಿದ್ದರು. ಅಂದಹಾಗೆ ಗೌತಮ್ ಸಿಂಘಾನಿಯಾ ಡ್ರಿಫ್ಟಿಂಗ್ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದಾರೆ. ಈ ಹಿಂದೆ ಮಾಲ್ಟಾದಲ್ಲಿ ನಡೆದ ಆಲ್‌ಸ್ಟಾರ್ಸ್ ಯುರೋಪಿಯನ್ ಡ್ರಿಫ್ಟಿಂಗ್ ಚಾಂಪಿಯನ್‌ಷಿಪ್ ಸಹ ಗೆದ್ದಿದ್ದಾರೆ.

ಒಟ್ಟಾರೆ ಕೋಟ್ಯಾಧಿಪತಿಯಾದರೂ ತಮಗೆ ಕಾರುಗಳ ಮೇಲಿನ ಪ್ರೀತಿಯಿಂದಾಗಿ ಸಾಮಾನ್ಯರಂತೆ ಈವೆಂಟ್‌ನಲ್ಲಿ ಭಾಗವಹಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಅವರ ಕಾರು ಸಂಗ್ರಹವನ್ನು ಇತರರು ನೋಡಿ ಆನಂದಿಸುವಂತೆ ಒಂದಷ್ಟು ಕಾರುಗಳನ್ನು ಪ್ರದರ್ಶನಕ್ಕಿಟ್ಟು ನೋಡುಗರನ್ನು ಖುಷಿಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆಟೋ ಓಡಿಸಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications