ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ರೈಲು ಹಳಿಯ ಮೇಲೆ ಬಿದ್ದಿದ್ದ ಮಗುವನ್ನು ರಕ್ಷಿಸುವ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ರೈಲ್ವೆ ಪಾಯಿಂಟ್‌ಮ್ಯಾನ್ ಮಯೂರ್ ಶೆಲ್ಕೆ ಹೀರೋ ಆದರು. ವೇಗವಾಗಿ ಬರುತ್ತಿರುವ ರೈಲಿನ ಮುಂದೆ ಓಡಿ ಮಗುವನ್ನು ಉಳಿಸಿದ ಅವರನ್ನು ಜನರು ಶ್ಲಾಘಿಸುತ್ತಿದ್ದಾರೆ.

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಸಾರ್ವಜನಿಕರು ಮಾತ್ರವಲ್ಲದೇ ಜಾವಾ ಮೋಟಾರ್‌ಸೈಕಲ್ ಕಂಪನಿಯ ನಿರ್ದೇಶಕರಾದ ಅನುಪಮ್ ತಾರೆಜಾ ಹಾಗೂ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಸಹ ಮಯೂರ್ ಶೆಲ್ಕೆರವರನ್ನು ಪ್ರಶಂಶಿಸಿದ್ದರು. ಜಾವಾ ಮೋಟಾರ್‌ಸೈಕಲ್ ನಿರ್ದೇಶಕರಾದ ಅನುಪಮ್ ತಾರೆಜಾ ಶೆಲ್ಕೆ ಅವರಿಗೆ ಜಾವಾ ಬೈಕ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದರು.

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಇತ್ತೀಚಿಗೆ ಜಾವಾ ಕಂಪನಿಯ ಪ್ರತಿನಿಧಿಗಳು ಜಾವಾ ಬೈಕ್ ಅನ್ನು ಮಯೂರ್ ಶೆಲ್ಕೆರವರಿಗೆ ವಿತರಿಸಿದ್ದಾರೆ. ಮಯೂರ್ ಶೆಲ್ಕೆ ಬೈಕಿನ ವಿತರಣೆ ಪಡೆಯುತ್ತಿರುವ ಚಿತ್ರವನ್ನು ಜಾವಾ ಕಂಪನಿ ಬಿಡುಗಡೆ ಮಾಡಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಅನುಪಮ್ ತಾರೆಜಾ ಉಡುಗೊರೆ ನೀಡುವುದಾಗಿ ತಿಳಿಸಿದ ಒಂದು ದಿನದ ನಂತರ ಜಾವಾ ಕಂಪನಿಯ ಪ್ರತಿನಿಧಿಗಳು ಮಯೂರ್ ಶೆಲ್ಕೆ ಅವರ ಮನೆಗೆ ಹೋಗಿ ಹೊಸ ಜಾವಾ ಬೈಕ್ ಅನ್ನು ವಿತರಿಸಿದ್ದಾರೆ.

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಬೈಕಿನ ವಿತರಣೆ ಪಡೆಯುವ ವೇಳೆ ಮಯೂರ್ ಹಾಗೂ ಅವರ ಕುಟುಂಬ ಸದಸ್ಯರು ಹಾಜರಿದ್ದರು. ಜಾವಾ ಹೀರೋಸ್ ಇನಿಶಿಯೇಟಿವ್ ಅಡಿಯಲ್ಲಿ ಭಾರತದ ಮೂಲೆ ಮೂಲೆಗಳಲ್ಲಿರುವ ನಿಜವಾದ ಹೀರೋಗಳನ್ನು ಗುರುತಿಸಲಾಗುತ್ತಿದೆ ಎಂದು ಅನುಪಮ್ ತಾರೆಜಾ ಟ್ವೀಟ್ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಜಾವಾ ಕಮ್ಯೂನಿಟಿಯಲ್ಲಿ ಶೆಲ್ಕೆ ಅವರನ್ನು ಸೇರಿಸಲು ಜಾವಾ ಕಂಪನಿ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದ್ದಾರೆ. ಅನುಪಮ್ ತಾರೆಜಾ ಟ್ವೀಟ್ ನಂತರ ಮಹೀಂದ್ರಾ ಗ್ರೂಪ್ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಕೂಡ ಮಯೂರ್ ಶೆಲ್ಕೆಯವರನ್ನು ಶ್ಲಾಘಿಸಿದ್ದಾರೆ.

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಆನಂದ್ ಮಹೀಂದ್ರಾ ತಮ್ಮ ಟ್ವೀಟ್'ನಲ್ಲಿ ಮಯೂರ್ ಶೆಲ್ಕೆ ಯಾವುದೇ ವೇಷಭೂಷಣ ತೊಡದೇ ಸಿನಿಮಾಗಳಲ್ಲಿ ಬರುವ ಸೂಪರ್ ಹೀರೊಗಳಿಗಿಂತ ಹೆಚ್ಚು ಧೈರ್ಯವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ನಾವೆಲ್ಲರೂ ಮಯೂರ್ ಶೆಲ್ಕೆರವರಿಗೆ ನಮಸ್ಕರಿಸುತ್ತೇವೆ. ಕಷ್ಟದ ಸಮಯದಲ್ಲಿ ನಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಲು ನಾವು ಯಾವಾಗಲೂ ಸಿದ್ಧರಿರಬೇಕು. ಅಂತಹ ಜನರು ಉತ್ತಮ ಜಗತ್ತಿಗೆ ದಾರಿ ತೋರಿಸುತ್ತಾರೆ ಎಂಬುದನ್ನು ಮಯೂರ್ ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಜಾವಾ ಮೋಟಾರ್ಸೈಕಲ್ ಭಾಗಶಃ ಮಹೀಂದ್ರಾ ಗ್ರೂಪ್'ನ ಅಧೀನದಲ್ಲಿದೆ ಎಂಬುದು ಗಮನಾರ್ಹ. ಇದೇ ವೇಳೆ ಆನಂದ್ ಮಹೀಂದ್ರಾ ಮಯೂರ್ ಶೆಲ್ಕೆರವರಿಗೆ ಹೊಸ ಮಹೀಂದ್ರಾ ಥಾರ್ ಎಸ್‌ಯು‌ವಿಯನ್ನು ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಆನಂದ್ ಮಹೀಂದ್ರಾ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲಲು ನೇರವಾದ ಆರು ಜನ ಯುವ ಕ್ರಿಕೆಟಿಗರಿಗೆ ಥಾರ್ ಎಸ್‌ಯು‌ವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಹೀಂದ್ರಾ ಥಾರ್ ಭಾರತದಲ್ಲಿ ಇದುವರೆಗೂ 50,000ಕ್ಕೂ ಹೆಚ್ಚು ಬುಕ್ಕಿಂಗ್'ಗಳನ್ನು ಪಡೆದಿದೆ.

ಜಾವಾ ಬೈಕಿನ ವಿತರಣೆ ಪಡೆದ ರಿಯಲ್ ಹೀರೋ

ಸೆಮಿ ಕಂಡಕ್ಟರ್‌ ಹಾಗೂ ಇತರ ಬಿಡಿಭಾಗಗಳ ಕೊರತೆಯಿಂದಾಗಿ ಥಾರ್ ಎಸ್‌ಯು‌ವಿಯ ವಿತರಣೆ ಪಡೆಯಲು ಸುಮಾರು ಒಂದು ವರ್ಷ ಕಾಯಬೇಕಾಗಿದೆ.ರೈಲ್ವೆ ಅಧಿಕಾರಿಗಳು ಸಹ ಮಯೂರ್ ಶೆಲ್ಕೆಯವರ ಕಾರ್ಯವನ್ನು ಶ್ಲಾಘಿಸಿ ರೂ.50,000 ನಗದು ಬಹುಮಾನ ನೀಡಿದ್ದಾರೆ.

Most Read Articles

Kannada
English summary
Anand Mahindra to gift new Thar SUV to real hero Mayur Shelke. Read in Kannada.
Story first published: Friday, April 23, 2021, 14:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X