ರಿಯಲ್ ಲೈಫ್ ಚಾರ್ಲಿ, ಧರ್ಮ: ಶ್ವಾನಕ್ಕಾಗಿ ಬೈಕ್ ಕಸ್ಟಮೈಸ್, ಇಬ್ಬರು ತಲುಪಿದ್ದು ಎಲ್ಲಿಗೆ ಗೊತ್ತಾ..?

ವಿಶೇಷ ಬೈಕ್‌ನಲ್ಲಿ ತನ್ನ ಸಾಕು ನಾಯಿಯೊಂದಿಗೆ ಲಡಾಖ್‌ನಲ್ಲಿರುವ ವಿಶ್ವದ ಅತಿ ಎತ್ತರದ ಮೋಟಾರು ವಾಹನಗಳು ಸಂಚರಿಸುವ ರಸ್ತೆಗೆ ತಲುಪಿದ ಯುವಕನೊಬ್ಬನ ವಿಡಿಯೋ Instagram ನಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪ್ರಯಾಣಕ್ಕಾಗಿ ಹಾಗೂ ಶ್ವಾನಕ್ಕಾಗಿ ಯುವಕ ತನ್ನ ಮೋಟಾರ್‌ ಸೈಕಲ್ ಅನ್ನು ವಿಶೇಷವಾಗಿ ಕಸ್ಟಮೈಸ್ ಮಾಡಿಸಿಕೊಂಡಿರುವುದಾಗಿ ಹೇಳಿದ್ದಾನೆ.

ಒಂದು ಕಾಲದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಬಿಟ್ಟು ಎಲ್ಲದರೂ ದೂರದ ಪ್ರವಾಸಕ್ಕೆ ಹೊರಡುವಾಗ ಮನೆಯಲ್ಲೇ ಬಿಟ್ಟು ಅಕ್ಕಪಕ್ಕದ ಮನೆಯವರಿಗೆ ಊಟದ ವ್ಯವಸ್ಥೆ ಮಾಡಲು ಹೇಳಿ ಹೊರಟು ಬಿಡುತ್ತೇವೆ. ಆದರೆ ಈಗ ಸಾಕು ಪ್ರಾಣಿಗಳನ್ನು ಮನೆಮಂದಿಯಲ್ಲಿ ಒಬ್ಬರಂತೆ ಕಾಣಲಾಗುತ್ತಿದೆ. ಅದರಲ್ಲೂ ಸಾಕು ಪ್ರಾಣಿಗಳು ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಗಾವುದು ನಾಯಿಗಳು, ಇವು ವಿಶ್ವಾಸಾರ್ಹವಾಗಿರುವುದರಿಂದ ದೇಶದಲ್ಲಿನ ಪ್ರತಿಯೊಂದು ಗಲ್ಲಿಯಲ್ಲೂ ಹುಡುಕಿದರೆ ಒಂದೆರಡು ಮನೆಗಳಲ್ಲಿ ಸಾಕು ನಾಯಿಗಳು ಸಿಗುತ್ತವೆ.

ಇದೀಗ ನಾಯಿಗಳನ್ನು ಕಾಣುವ ವಿಧಾನವೇ ಬದಲಾಗಿದ್ದು, ನಮ್ಮ ಕನ್ನಡ ಚಿತ್ರರಂಗದಿಂದ ಬಂದ ಚಾರ್ಲಿ ಸಿನಿಮಾ ಕೂಡ ಇದಕ್ಕೆ ಒಂದು ಕಾರಣವೆನ್ನಬಹುದು. ಸಿನಿಮಾದಲ್ಲಿ ಶ್ವಾನಗಳ ಕುರಿತ ವಿಶ್ವಾಸ, ಪ್ರೀತಿ ಹಾಗೂ ಅವುಗಳೊಂದಿಗಿನ ಭಾಂದವ್ಯವು ಎಂಥವರ ಕಣ್ಣಲ್ಲೂ ಕಣ್ಣೀರು ತರಿಸಿತ್ತು. ಈ ಮೂಲಕ ಚಾರ್ಲಿ ಸಿನಿಮಾ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವಿಶ್ವದಾದ್ಯಂತ ಪ್ರಶಂಸೆ ಪಡೆದುಕೊಂಡು ಕೆಜಿಎಫ್ ಬಳಿಕ ಕನ್ನಡ ಸಿನಿಮಾ ರಂಗವನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ.

ಈ ಸಿನಿಮಾದಲ್ಲಿ ಚಾರ್ಲಿ ಪಾತ್ರವನ್ನು ಮಾಡಿದ್ದ ಶ್ವಾನಕ್ಕೆ ಫಿದಾ ಆಗದವರಿಲ್ಲ. ಈ ಸಿನಿಮಾ ನೋಡಿದ ಬಳಿಕ ಶ್ವಾನಗಳನ್ನು ಸಾಕುತ್ತಿರುವವರು ಅದೆಷ್ಟೋ ಮಂದಿಯಿದ್ದಾರೆ. ಥೇಟ್ ನಮ್ಮ ಚಾರ್ಲಿ ಸಿನಿಮಾನಂತೆಯೇ ಯುವಕನೊಬ್ಬ ತನ್ನ ಸಾಕು ನಾಯಿಯೊಂದಿಗೆ ಲಡಾಖ್‌ನಲ್ಲಿರುವ ವಿಶ್ವದ ಅತಿ ಎತ್ತರದ ಮೋಟಾರು ವಾಹನಗಳು ಸಂಚರಿಸುವ ರಸ್ತೆಗೆ ಪ್ರಯಾಣಿಸುತ್ತಿರುವುದನ್ನು ಪ್ರದರ್ಶಿಸುವ ವೀಡಿಯೊವೊಂದು ಸಖತ್ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚೌ ಸುರೆಂಗ್ ರಾಜ್‌ಕೊನ್ವಾರ್ ಎಂಬ ಯುವಕ ತನ್ನ ಸಾಕು ನಾಯಿ ಬೆಲ್ಲಾದೊಂದಿಗೆ ಕಸ್ಟಮೈಸ್ ಮಾಡಿಸಿದ ಬೈಕ್‌ನಲ್ಲಿ ದೂರದ ಪ್ರಯಾಣಗಳನ್ನು ಮಾಡುತ್ತಿದ್ದಾನೆ. ಸದ್ಯ ವೈರಲ್ ಆಗಿರುವ ವಿಡಿಯೋವು ಚೌ ಸುರೆಂಗ್ ರಾಜ್‌ಕೊನ್ವಾರ್ ಮತ್ತು ಆತನ ಸಾಕು ನಾಯಿ ಬೆಲ್ಲಾ ಕೆಲವು ಸುಂದರವಾದ ಸ್ಥಳಗಳಲ್ಲಿ ಸವಾರಿ ಮಾಡಿರುವುದನ್ನು ತೋರುತ್ತದೆ. "45 ಸೆಕೆಂಡುಗಳಲ್ಲಿ ನಮ್ಮ ಝನ್ಸ್ಕಾರ್ ಮತ್ತು ಲಡಾಖ್ ಕಥೆ" ಎಂಬ ಶೀರ್ಷಿಕೆಯೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ಸಂಪೂರ್ಣ ಪ್ರಯಾಣದ ಕುರಿತು ಸಣ್ಣ ಮಾಹಿತಿ ಒಳಗೊಂಡಿದೆ.

ಬೆಲ್ಲಾಗಾಗಿ ಕಸ್ಟಮೈಸ್ ಮಾಡಿದ ಆಸನ, ಬೆಲ್ಲಾಗೆ ತರಬೇತಿ ನೀಡುವುದು ಮತ್ತು ಅವಳ ಲಗೇಜ್ ಪ್ಯಾಕ್ ಮಾಡುವುದನ್ನು ಒಳಗೊಂಡಿರುವ ಕಾರಣ ದೆಹಲಿಯಿಂದ ಲಡಾಖ್‌ಗೆ ಸವಾರಿ ಮಾಡುವುದು ಸುಲಭದ ನಿರ್ಧಾರವಲ್ಲ ಎಂದು ರಾಜ್‌ಕೋನ್ವಾರ್ ಹೇಳುವ ಮಾತುಗಳ ಮೂಲಕ ವಿಡಿಯೋ ಆರಂಭವಾಗುತ್ತದೆ. ನಂತರ ಜೋಡಿಯು ಹಿಮಧೂಳಿನ ಹಿಮಾಲಯ ಶ್ರೇಣಿಗಳ ಉದ್ದಕ್ಕೂ ಸವಾರಿ ಮಾಡುವುದನ್ನು ಮತ್ತು ಝನ್ಸ್ಕರ್-ಲಡಾಖ್ ಸರ್ಕ್ಯೂಟ್ ಮೂಲಕ ಸಾಗುವಾಗ ಸಿಗುವ ನದಿಗಳನ್ನು ವಿಡಿಯೋದಲ್ಲಿ ನೋಡಬಹುದು.

ಕೊನೆಯಲ್ಲಿ ವಿಡಿಯೋ ಮುಕ್ತಾಯವಾಗುವ ವೇಳೆ ಇಬ್ಬರೂ ಭಾರತದ ಧ್ವಜದೊಂದಿಗೆ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯಾದ ಉಮ್ಲಿಂಗ್ ಲಾದಲ್ಲಿರುವುದನ್ನು ಕಾಣಬಹುದು. ನವೆಂಬರ್ 16 ರಂದು ಹಂಚಿಕೊಂಡ ಈ ವಿಡಿಯೋಗೆ ಬರೋಬ್ಬರಿ 1.3 ಮಿಲಿಯನ್ ವೀಕ್ಷಣೆಗಳು ಸಿಕ್ಕಿವೆ. ಇದು ಲಕ್ಷಗಟ್ಟಲೆ ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಸಹ ಸಂಗ್ರಹಿಸಿದೆ. ಹಲವರು ಚಾರ್ಲಿ ಸಿನಿಮಾವನ್ನು ನೆನಪಿಸಿಕೊಂಡು ಈ ವಿಡಿಯೋಗೆ ಕಮೆಂಟ್‌ ಮಾಡಿದ್ದು, ಇದಕ್ಕೂ ಹಲವು ಲೈಕ್‌ಗಳು ಬಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Real life charlie dharma do you know where they reached
Story first published: Tuesday, November 29, 2022, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X