ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಪೈಲಟ್‌ಗಳಿಗೆ ತರಬೇತಿ ನೀಡುವ ಅಕಾಡೆಮಿಗಳಿಗೆ ಹೋದಾಗ ಅಲ್ಲಿರುವ ಪೈಲಟ್'ಗಳ ಶರ್ಟ್‌ಗಳ ಹಿಂಭಾಗವನ್ನು ಹರಿದು ಹಾಕಿರುವುದನ್ನು ಕಾಣಬಹುದು. ಹರಿದ ಶರ್ಟ್‌ಗಳ ಹಿಂಭಾಗದಲ್ಲಿ ವಿವಿಧ ಅಕ್ಷರಗಳು ಹಾಗೂ ಚಿಹ್ನೆಗಳನ್ನು ಸಹ ಕಾಣಬಹುದು.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಶರ್ಟ್‌ಗಳ ಹಿಂಭಾಗವನ್ನು ಮಾತ್ರ ಹರಿದು ಹಾಕುವುದು ಏಕೆ, ಅದರಲ್ಲಿರುವ ಅಕ್ಷರಗಳು ಹಾಗೂ ಚಿಹ್ನೆಗಳ ಅರ್ಥವೇನು ಎಂಬ ಪ್ರಶ್ನೆಗಳು ಮೂಡುವುದು ಸಹಜ. ಈ ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರಗಳನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಪೈಲಟ್‌ನ ಅಂಗಿಯ ಹಿಂಭಾಗವನ್ನು ಹರಿದು ಹಾಕುವುದು ಅಲಂಕಾರಕ್ಕಾಗಿಯೋ ಅಥವಾ ಶೋಕಿಗಾಗಿಯೋ ಅಲ್ಲ. ಬದಲಿಗೆ ವಿದ್ಯಾರ್ಥಿಗಳಾಗಿದ್ದವರು ಪೈಲಟ್‌ಗಳಾಗಿ ವಿಕಸನಗೊಂಡಾಗ ಅವರನ್ನು ಗೌರವಿಸುವ ಸಾಂಪ್ರದಾಯಿಕ ಕ್ರಮವಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಮೊದಲ ಬಾರಿಗೆ ಏಕಾಂಗಿಯಾಗಿ ವಿಮಾನ ಹಾರಾಟ ಮಾಡಿದ ನಂತರ ಪೈಲಟ್ ಪ್ರಶಿಕ್ಷಣಾರ್ಥಿಗಳ ಶರ್ಟಿನ ಹಿಂಭಾಗವನ್ನು ಹರಿದು ಹಾಕಲಾಗುತ್ತದೆ. ಆತನ ಮಾರ್ಗದರ್ಶಿ ಪೈಲಟ್‌ ವಿದ್ಯಾರ್ಥಿ ಪೈಲಟ್‌ನ ಅಂಗಿಯ ಹಿಂಭಾಗವನ್ನು ಹರಿದು ಹಾಕುತ್ತಾನೆ.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಯಾವುದೇ ಪೈಲಟ್‌ನ ಜೀವನದಲ್ಲಿ ಮೊದಲ ಬಾರಿಗೆ ವಿಮಾನವನ್ನು ಚಾಲನೆ ಮಾಡುವುದು ದೊಡ್ಡ ಸಾಧನೆಯಾಗಿದೆ. ಮೊದಲ ಬಾರಿಗೆ ಏಕಾಂಗಿಯಾಗಿ ವಿಮಾನ ಚಾಲನೆ ಮಾಡುವಾಗ ತಮ್ಮ ಮಾರ್ಗದರ್ಶಿಯ ಹಸ್ತಕ್ಷೇಪವಿಲ್ಲದೆ ತಾವಾಗಿಯೇ ಚಾಲನೆ ಮಾಡಬೇಕು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ವಿಮಾನವನ್ನು ಟೇಕ್ ಆಫ್ ಮಾಡುವುದು ಅಥವಾ ಲ್ಯಾಂಡಿಂಗ್ ಮಾಡುವುದು ಅತ್ಯಂತ ಸವಾಲಿನ ಕೆಲಸ. ಈ ಎಲ್ಲ ಕೆಲಸಗಳನ್ನು ಮಾರ್ಗದರ್ಶಕರಸಹಾಯವಿಲ್ಲದೆ ವಿದ್ಯಾರ್ಥಿಗಳೇ ಮಾಡಬೇಕು.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ವಿದ್ಯಾರ್ಥಿಗಳು ಏಕಾಂಗಿಯಾಗಿ ವಿಮಾನ ಚಾಲನೆ ಮಾಡಲು ಸಿದ್ಧ ಎಂದು ತೋರಿಸುವ ಕ್ಷಣವಿದು. ವಿಮಾನವನ್ನು ನಿರ್ವಹಿಸುವುದು ಪೈಲಟ್‌ ಪರವಾನಗಿ ಪಡೆಯುವ ಪ್ರಮುಖ ಭಾಗವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಈ ಕಾರಣಕ್ಕೆ ಮೊದಲ ಬಾರಿಗೆ ಏಕಾಂಗಿಯಾಗಿ ವಿಮಾನವನ್ನು ಚಾಲನೆ ಮಾಡುವ ಹೊಸ ಪೈಲಟ್‌ಗಳು ಆ ಪ್ರಯತ್ನದಲ್ಲಿ ಯಶಸ್ವಿಯಾಗಲು ಬಹಳ ಉತ್ಸುಕರಾಗುತ್ತಾರೆ.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಅವರು ಮೊದಲ ಬಾರಿಗೆ ಏಕಾಂಗಿಯಾಗಿ ವಿಮಾನವನ್ನು ಚಾಲನೆ ಮಾಡಿದ ನಂತರ ಏನಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಮೊದಲ ಬಾರಿಗೆ ಏಕಾಂಗಿಯಾಗಿ ವಿಮಾನವನ್ನು ಯಶಸ್ವಿಯಾಗಿ ಚಾಲನೆ ಮಾಡಿದ ನಂತರ, ಹೊಸ ಪೈಲಟ್ ತನ್ನ ಮಾರ್ಗದರ್ಶಿಯ ಕತ್ತರಿಗಳಿಂದ ತನ್ನ ಅಂಗಿಯ ಹಿಂಭಾಗವನ್ನು ಕತ್ತರಿಸುತ್ತಾನೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಹೀಗೆ ಹರಿದು ಹಾಕಲಾದ ಶರ್ಟ್ ಹೊಸ ಪೈಲಟ್‌ನ ಹೆಸರು, ಅವನು ಮೊದಲ ಬಾರಿಗೆ ಏಕಾಂಗಿಯಾಗಿ ಹಾರಿದ ವಿಮಾನದ ವಿವರಗಳನ್ನು ಹೊಂದಿರುತ್ತದೆ. ಜೊತೆಗೆ ರನ್ ವೇ ಹಾಗೂ ವಿಮಾನ ನಿಲ್ದಾಣದಂತಹ ವಿವರಗಳನ್ನು ಸಹ ನಮೂದಿಸಲಾಗುತ್ತದೆ.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಅಂಗಿಯ ಹಿಂಭಾಗವನ್ನು ಹರಿದುಹಾಕುವುದು ಮಾರ್ಗದರ್ಶಕರು ತಮ್ಮ ವಿದ್ಯಾರ್ಥಿಗಳ ಮೇಲೆ ನಂಬಿಕೆ ಇಡುತ್ತಿದ್ದಾರೆ ಎಂಬುದರ ಸಂಕೇತವಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಹೆಡ್‌ಸೆಟ್‌ಗಳು ಹಾಗೂ ರೇಡಿಯೊ ಸಂವಹನವನ್ನು ಪರಿಚಯಿಸುವ ಮೊದಲು, ಅಂದರೆ ಮಾನವರು ವಿಮಾನ ಹಾರಾಟ ಆರಂಭಿಸಿದ ಆರಂಭಿಕ ದಿನಗಳಲ್ಲಿ, ಮಾರ್ಗದರ್ಶಕರು ವಿದ್ಯಾರ್ಥಿ ಪೈಲಟ್‌ಗಳಿಗೆ ಓಪನ್-ಕಾಕ್‌ಪಿಟ್ ವಿಮಾನದಲ್ಲಿ ತರಬೇತಿ ನೀಡುತ್ತಿದ್ದರು.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಈ ವಿಮಾನಗಳಲ್ಲಿ ವಿದ್ಯಾರ್ಥಿಗಳು ಮುಂಭಾಗದಲ್ಲಿ ಕುಳಿತುಕೊಂಡರೆ, ಮಾರ್ಗದರ್ಶಕರು ಹಿಂಭಾಗದಲ್ಲಿ ಕುಳಿತುಕೊಳ್ಳುತ್ತಿದ್ದರು.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ಸಂವಹನ ಸಲಕರಣೆಗಳ ಕೊರತೆ, ಒಂದರ ಹಿಂದೆ ಒಂದು ಸೀಟುಗಳ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿ ಪೈಲಟ್‌ ಹಾಗೂ ಮಾರ್ಗದರ್ಶಿ ಪೈಲಟ್'ಗಳ ನಡುವೆ ಮಾತುಕತೆ ಬಹಳ ಸವಾಲಿನದಾಗಿತ್ತು.

ವಿಮಾನಗಳ ಪೈಲಟ್‌ಗಳು ಹರಿದ ಶರ್ಟ್ ಹಾಕಲು ಕಾರಣಗಳಿವು

ವಿದ್ಯಾರ್ಥಿ ಪೈಲಟ್‌ಗಳು ಮೊದಲ ಬಾರಿಗೆ ಏಕಾಂಗಿಯಾಗಿ ವಿಮಾನವನ್ನು ಚಾಲನೆ ಮಾಡಿದ ನಂತರ ಅಂತಹ ಸಂವಹನವು ಇನ್ನು ಮುಂದೆ ಅಗತ್ಯವಿಲ್ಲ ಎಂದು ಸೂಚಿಸಲು ಮಾರ್ಗದರ್ಶಿ ಪೈಲಟ್'ಗಳು ಶರ್ಟ್‌ಗಳ ಹಿಂಭಾಗವನ್ನು ಕತ್ತರಿಸುತ್ತಾರೆ.

Most Read Articles
 
Kannada
English summary
Reasons behind aero plane pilots wearing tail cut shirts. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X