ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ವಿಮಾನದ ಕ್ಯಾಬಿನ್‌ನೊಳಗೆ ಪ್ರವೇಶಿಸಿದಾಗ, ಫ್ಲೈಟ್ ಅಟೆಂಡೆಂಟ್‌ಗಳು ನಿಮ್ಮನ್ನು ಸ್ವಾಗತಿಸುತ್ತಾರೆ. ಅವರು ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಮಡಚಿಟ್ಟು ಕೊಂಡಿರುತ್ತಾರೆ. ವಿಮಾನಗಳಲ್ಲಿ ಪ್ರಯಾಣಿಸುವವರು ಫ್ಲೈಟ್ ಅಟೆಂಡೆಂಟ್‌ಗಳ ಈ ನಡವಳಿಕೆಯನ್ನು ಗಮನಿಸಬಹುದು.

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ಫ್ಲೈಟ್ ಅಟೆಂಡೆಂಟ್‌ಗಳು ಏಕೆ ಈ ರೀತಿ ಕೈಯನ್ನು ಹಿಂದೆ ಮಡಚಿಟ್ಟುಕೊಳ್ಳುತ್ತಾರೆ ಎಂಬ ಅನುಮಾನಗಳು ಮೂಡುವುದು ಸಹಜ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ. ಫ್ಲೈಟ್ ಅಟೆಂಡೆಂಟ್‌ಗಳ ಕೆಲಸವು ತುಂಬಾ ಜವಾಬ್ದಾರಿಯಿಂದ ಕೂಡಿರುತ್ತದೆ.

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ವಿಮಾನಗಳು ಅಚ್ಚುಕಟ್ಟಾಗಿವೆಯೆ, ಪ್ರಯಾಣಿಕರು ಸುರಕ್ಷಿತವಾಗಿರುವರೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತಹ ಹಲವಾರು ಜವಾಬ್ದಾರಿಗಳನ್ನು ಅವರು ಹೊಂದಿರುತ್ತಾರೆ. ಬೆನ್ನಿನ ಹಿಂದೆ ಒಂದು ಕೈ ಇಡುವುದು ಕೂಡ ಅವರ ಜವಾಬ್ದಾರಿಗಳಲ್ಲಿ ಒಂದಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ಸರಳವಾಗಿ ಹೇಳುವುದಾದರೆ, ಅವರ ಕೈಯಲ್ಲಿ ಕೌಂಟರ್ ಇಟ್ಟುಕೊಂಡಿರುತ್ತಾರೆ. ಫ್ಲೈಟ್ ಹತ್ತಿದ ಪ್ರಯಾಣಿಕರ ಸಂಖ್ಯೆಯು ಸ್ಕ್ಯಾನ್ ಮಾಡಿದ ಟಿಕೆಟ್‌ಗಳ ಸಂಖ್ಯೆಗೆಹೊಂದಿಕೆಯಾಗುತ್ತಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಫ್ಲೈಟ್ ಅಟೆಂಡೆಂಟ್‌ಗಳು ಈ ಕೌಂಟರ್ ಬಳಸುತ್ತಾರೆ.

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ಇದರಿಂದಾಗಿ ವಿಮಾನದಲ್ಲಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ. ಅದರಲ್ಲೂ ಹೆಚ್ಚು ಬಿಜಿ ಇರುವ ವಿಮಾನಗಳಲ್ಲಿ ನೆರವಿಗೆ ಬರುತ್ತದೆ. ಜನರು ಸಾಮಾನ್ಯವಾಗಿ ಪ್ರವಾಸಗಳಿಗೆ ತೆರಳಿದಾಗ ಎಲ್ಲರೂ ಬಂದಿದ್ದಾರೆಯೇ ಎಂಬುದನ್ನು ಯಾರಾದರೂ ಒಬ್ಬರು ಮುಂದೆ ನಿಂತು ಎಣಿಸುತ್ತಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ಆಗ ವಾಹನದಲ್ಲಿರುವವರ ಗಮನವು ಎಣಿಸುವವರ ಮೇಲೆ ಇರುತ್ತದೆ. ಆದರೆ ಫ್ಲೈಟ್ ಅಟೆಂಡೆಂಟ್‌ಗಳು ಯಾವುದೇ ಮುಜುಗರಗಳಿಗೆ ಆಸ್ಪದ ನೀಡದಂತೆಪ್ರಯಾಣಿಕರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಈ ಕೌಂಟರ್‌ಗಳನ್ನು ಬಳಸುತ್ತಾರೆ.

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ಪ್ರತಿ ಪ್ರಯಾಣಿಕರು ವಿಮಾನದೊಳಗೆ ಪ್ರವೇಶಿಸುತ್ತಿದ್ದಂತೆ ಅವರು ಈ ಕೌಂಟರ್ ಅನ್ನು ಕ್ಲಿಕ್ ಮಾಡುತ್ತಾರೆ. ಇದರಿಂದ ಅಂತಿಮವಾಗಿ ಅವರಿಗೆ ಪ್ರಯಾಣಿಕರಸಂಖ್ಯೆಯ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ಈ ಕೌಂಟರ್‌ಗಳು ಕೈಯಲ್ಲಿ ಮಡುಚುವಷ್ಟು ಚಿಕ್ಕದಾಗಿರುತ್ತವೆ. ಕೆಲವೊಮ್ಮೆ ಪ್ರಯಾಣಿಕರು ವಿಮಾನದೊಳಕ್ಕೆ ಪ್ರವೇಶಿಸಿದಾಗ ಪ್ರಯಾಣಿಕರ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ವಿಮಾನದೊಳಗಿರುವ ಫ್ಲೈಟ್ ಅಟೆಂಡೆಂಟ್‌ಗಳು ಈ ರೀತಿ ಕೈ ಹಿಂದೆ ಮಡಚಿರುವುದನ್ನು ಕಾಣಬಹುದು.

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ಕೆಲವು ಸಂದರ್ಭಗಳಲ್ಲಿ ಪ್ರಯಾಣಿಕರು ಸೀಟಿನಲ್ಲಿ ಕುಳಿತ ನಂತರ ಪ್ರಯಾಣಿಕರ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಆ ಸಂದರ್ಭಗಳಲ್ಲಿ ಫ್ಲೈಟ್ ಅಟೆಂಡೆಂಟ್‌ಗಳು ಒಂದು ಕೈಯನ್ನು ಬೆನ್ನಿನ ಹಿಂದೆ ಮಡಚಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಇನ್ನೂ ಕೆಲವು ವಿಮಾನಗಳಲ್ಲಿ ಪ್ರಯಾಣಿಕರು ಹತ್ತಿದ ನಂತರ ಹಾಗೂ ಸೀಟುಗಳ ಮೇಲೆ ಕುಳಿತ ನಂತರ ಪ್ರಯಾಣಿಕರ ಸಂಖ್ಯೆಯನ್ನು ಎಣಿಸಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫ್ಲೈಟ್ ಅಟೆಂಡೆಂಟ್‌ಗಳು ಕೈಯನ್ನು ಹಿಂದೆ ಮಡಚುವ ಹಿಂದಿದೆ ಈ ಕಾರಣ

ಮುಂದಿನ ಬಾರಿ ನೀವು ವಿಮಾನವನ್ನು ಹತ್ತಿದಾಗ ಫ್ಲೈಟ್ ಅಟೆಂಡೆಂಟ್‌ಗಳ ಕೈಗಳನ್ನು ಗಮನಿಸಿ. ಅವರು ಕೈಯನ್ನು ಮಡಚಿ ಸಣ್ಣ ಕೌಂಟರ್ ಅನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಕ್ಲಿಕ್ ಮಾಡುವುದನ್ನು ಗಮನಿಸಿ.

Most Read Articles

Kannada
English summary
Reasons behind flight attendants folding their hands. Read in Kannada.
Story first published: Sunday, February 21, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X