ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ವಿಮಾನಗಳಲ್ಲಿ ಸಂಚರಿಸುವವರು ವಿಮಾನಗಳ ಬಾಗಿಲು ಹಾಗೂ ತುರ್ತು ನಿರ್ಗಮನದ ಸುತ್ತಲೂ ದಪ್ಪ ರೇಖೆಯನ್ನು ಗಮನಿಸಬಹುದು. ಕೆಲವು ಪ್ರಯಾಣಿಕರ ಮನಸ್ಸಿನಲ್ಲಿ ಈ ದಪ್ಪ ರೇಖೆಯನ್ನು ಏಕೆ ನೀಡಲಾಗಿರುತ್ತದೆ ಎಂಬ ಅನುಮಾನ ಹಲವಾರು ಬಾರಿ ಉದ್ಭವಿಸಬಹುದು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ಈ ದಪ್ಪ ರೇಖೆಯನ್ನು ವಿಮಾನದ ಆಕರ್ಷಣೆಯನ್ನು ಹೆಚ್ಚಿಸಲು ಮಾಡಿರುವ ವಿನ್ಯಾಸವೆಂದು ಕೆಲವರು ಭಾವಿಸಬಹುದು. ಆದರೆ ಈ ರೇಖೆಗಳು ವಿಮಾನದ ಭದ್ರತೆಗೆ ಸಂಬಂಧಿಸಿರುತ್ತವೆ. ವಿಮಾನದ ಬಾಗಿಲುಗಳು ಹಾಗೂ ತುರ್ತು ನಿರ್ಗಮನಗಳ ಸುತ್ತ ಭದ್ರತೆಯ ಕಾರಣಕ್ಕಾಗಿ ದಪ್ಪ ರೇಖೆಗಳನ್ನು ನೀಡಲಾಗಿರುತ್ತದೆ. ವಿಮಾನಗಳ ವಾಣಿಜ್ಯಕ ಹಾರಾಟದ ಆರಂಭದ ದಿನಗಳಲ್ಲಿ ಹಲವಾರು ಅಪಘಾತಗಳು ಸಂಭವಿಸಿದವು.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ಅವುಗಳಲ್ಲಿ ಬಹಳಷ್ಟು ಅಪಘಾತಗಳು ಭೀಕರವಾಗಿದ್ದವು. ಈ ಅಪಘಾತಗಳಲ್ಲಿ ಹಲವಾರು ಜನರು ಪ್ರಾಣ ಕಳೆದು ಕೊಂಡರು. ವಿಮಾನ ಪತನಗೊಂಡ ಸ್ಥಳದಲ್ಲಿದ್ದ ರಕ್ಷಣಾ ತಂಡದವರಿಗೆ ವಿಮಾನಗಳ ಬಾಗಿಲುಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ವಿಮಾನದೊಳಗೆ ಸಿಲುಕಿರುವವರನ್ನು ತ್ವರಿತವಾಗಿ ರಕ್ಷಿಸಲು ಅವರಿಗೆ ಸಾಧ್ಯವಾಗಲಿಲ್ಲ.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ರಾತ್ರಿ ವೇಳೆ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವುದು ನಿಜಕ್ಕೂ ಸವಾಲಿನ ಕೆಲಸ. ಅದರಲ್ಲೂ ವಿಮಾನಗಳ ಬಾಗಿಲುಗಳನ್ನು ಕಂಡು ಹಿಡಿಯಲು ರಕ್ಷಣಾ ತಂಡಕ್ಕೆ ಕಷ್ಟವಾಗುತ್ತಿತ್ತು. ನಂತರ ವಿಮಾನದ ಬಣ್ಣಗಳಲ್ಲಿ ಬದಲಾವಣೆಗಳು ಕಂಡು ಬಂದವು. ಆಗ ವಿಮಾನಗಳ ಬಾಗಿಲು ಹಾಗೂ ತುರ್ತು ನಿರ್ಗಮನಗಳನ್ನು ಸುಲಭವಾಗಿ ಪತ್ತೆ ಹಚ್ಚುವ ಸಲುವಾಗಿ ಅವುಗಳ ಸುತ್ತಲೂ ದಪ್ಪ ರೇಖೆಗಳನ್ನು ನೀಡಲು ನಿರ್ಧರಿಸಲಾಯಿತು.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ಇದರಿಂದ ಅಪಘಾತವಾದಾಗ ವಿಮಾನಗಳ ಬಾಗಿಲುಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಬಾಗಿಲುಗಳು ಹಾಗೂ ತುರ್ತು ನಿರ್ಗಮನಗಳನ್ನು ಸಾಮಾನ್ಯವಾಗಿ ವಿಮಾನದ ಬಣ್ಣಕ್ಕಿಂತ ಭಿನ್ನವಾದ ಬಣ್ಣದಲ್ಲಿ ಚಿತ್ರಿಸಲಾಗುತ್ತದೆ. ಇವುಗಳು ಭಿನ್ನವಾದ ಬಣ್ಣಗಳನ್ನು ಹೊಂದಿರುವುದರಿಂದ ಒಂದು ವೇಳೆ ಅಪಘಾತವಾದರೆ ಹುಡುಕುವುದು ಸುಲಭವಾಗಲಿ ಎಂಬುದು ಇದರ ಹಿಂದಿರುವ ಪ್ರಮುಖ ಕಾರಣ.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ವಿಮಾನ ಅಪಘಾತಕ್ಕೀಡಾದ ನಂತರ ಪ್ರತಿ ಸೆಕೆಂಡ್ ಅನ್ನು ಅತ್ಯಮೂಲ್ಯವೆಂದು ಪರಿಗಣಿಸಲಾಗುತ್ತದೆ. ಬಾಗಿಲುಗಳನ್ನು ಬೇಗ ಪತ್ತೆ ಹಚ್ಚುವುದರಿಂದ ವಿಮಾನದ ಒಳಗಿರುವವರನ್ನು ಬೇಗನೆ ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸಬಹುದು. ಈ ಕಾರಣಕ್ಕೆ ವಿಮಾನಗಳ ಬಣ್ಣಕ್ಕಿಂತ ಭಿನ್ನವಾದ ಬಣ್ಣದಲ್ಲಿ ವಿಮಾನಗಳ ಬಾಗಿಲು ಹಾಗೂ ತುರ್ತು ನಿರ್ಗಮನಗಳಿಗೆ ದಪ್ಪ ರೇಖೆಯಾಗಿ ನೀಡಲಾಗುತ್ತದೆ. ವಿಮಾನದ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಲವು ಮಾಹಿತಿಗಳು ಲಭ್ಯವಾಗುತ್ತವೆ.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ಜನರು ವಿಮಾನಗಳಲ್ಲಿ ಸಂಚರಿಸುವಾಗ ಪೈಲಟ್‌ಗಳನ್ನು ಗಮನಿಸಿರ ಬಹುದು. ಬಹುತೇಕ ಪೈಲಟ್‌ಗಳು ತಮ್ಮ ಮುಖವನ್ನು ಶೇವ್ ಮಾಡಿರುತ್ತಾರೆ. ಪೈಲಟ್‌ಗಳು ಗಡ್ಡ ಬಿಡಲು ವಿಮಾನಯಾನ ಕಂಪನಿಗಳು ಅನುಮತಿ ನೀಡುವುದಿಲ್ಲ. ಆದರೆ ಕೆಲವು ಕೆಲವು ವಿಮಾನಯಾನ ಕಂಪನಿಗಳು ಮಾತ್ರ ತಮ್ಮ ಪೈಲಟ್‌ಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಗಡ್ಡ ಬಿಡಲು ಅನುಮತಿ ನೀಡುತ್ತವೆ.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ಯಾವ ಕಾರಣಕ್ಕೆ ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುವುದಿಲ್ಲವೆಂಬುದನ್ನು ನೋಡುವುದಾದರೆ, ವಿಮಾನಯಾನ ಕಂಪನಿಗಳು ಭದ್ರತಾ ಕಾರಣಗಳಿಗಾಗಿ ಪೈಲಟ್‌ಗಳು ಗಡ್ಡ ಬಿಡುವುದನ್ನು ನಿಷೇಧಿಸುತ್ತಿವೆ. ವಿಮಾನವು ನಿರ್ದಿಷ್ಟ ಎತ್ತರದಿಂದ ಮೇಲಕ್ಕೆ ಹಾರಿದಾಗ ಆಕ್ಸಿಜನ್ ಮಾಸ್ಕ್'ಗಳನ್ನು ಧರಿಸಬೇಕು. ಈ ಕಾರಣಕ್ಕೆ ಪೈಲಟ್‌ಗಳಿಗೆ ಗಡ್ಡ ಬಿಡಲು ವಿಮಾನಯಾನ ಕಂಪನಿಗಳು ಅನುಮತಿ ನೀಡುವುದಿಲ್ಲ.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ವಿಮಾನಗಳು 12,500 ಅಡಿಗಳಿಗಿಂತ ಹೆಚ್ಚು ಮೇಲೆ ಹಾರಾಟ ನಡೆಸುವಾಗ ಯಾವುದೇ ಸಮಯದಲ್ಲಿ ಗಾಳಿಯ ಒತ್ತಡ ಇಳಿಯಬಹುದು. ಆ ಸಮಯದಲ್ಲಿ ಆಕ್ಸಿಜನ್ ಪೂರೈಕೆಗೆ ಅಡಚಣೆಯಾದರೆ ದೊಡ್ಡ ಅಪಾಯ ಎದುರಾಗುತ್ತದೆ. ಈ ವೇಳೆ ಪೈಲಟ್‌ಗಳಿಗೆ ಆಕ್ಸಿಜನ್ ಪೂರೈಸ ಬೇಕಾಗುತ್ತದೆ. ಈ ವೇಳೆ ಆಕ್ಸಿಜನ್ ಸರಬರಾಜು ಆಗುವುದನ್ನು ತಡೆಯಬಾರದು ಎಂಬ ಏಕೈಕ ಕಾರಣಕ್ಕೆ ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ದೊಡ್ಡದಾಗಿ ಗಡ್ಡ ಬಿಡಲು ಅವಕಾಶ ನೀಡುವುದಿಲ್ಲ.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ಗಡ್ಡವು ದೊಡ್ಡದಾಗಿದ್ದರೆ ಮಾಸ್ಕ್'ಗಳು ಪೈಲಟ್‌ಗಳ ಮುಖಕ್ಕೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಇದರಿಂದ ಪೈಲಟ್‌ಗಳಿಗೆ ಆಕ್ಸಿಜನ್ ಸಿಗದಂತಾಗುತ್ತದೆ. ಈ ಅಂಶವನ್ನು ಪರಿಗಣಿಸಿ ಹಲವು ವಿಮಾನಯಾನ ಕಂಪನಿಗಳು ಪೈಲಟ್‌ಗಳಿಗೆ ಗಡ್ಡ ಬಿಡಲು ಅನುಮತಿ ನೀಡುವುದಿಲ್ಲ. ಇತ್ತೀಚೆಗೆ ಕೆನಡಾದ ಸೈಮನ್ ಫ್ರೇಸರ್ ವಿಶ್ವವಿದ್ಯಾಲಯವು ಗಡ್ಡದ ಮೇಲೆ ಆಕ್ಸಿಜನ್ ಮಾಸ್ಕ್ ಬಳಸುವುದರಿಂದ ಆಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿತ್ತು.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ಇದಕ್ಕಾಗಿ ಮೂರು ಗುಂಪುಗಳನ್ನು ರಚಿಸಲಾಗಿತ್ತು. ಈ ಗುಂಪಿನಲ್ಲಿದ್ದ ಯಾರಿಗೂ ಗಡ್ಡವಿರಲಿಲ್ಲ. ಒಬ್ಬರು ಅಲ್ಪ ಪ್ರಮಾಣದ ಗಡ್ಡ ಹಾಗೂ ಮತ್ತೊಬ್ಬರು ಹೆಚ್ಚು ಗಡ್ಡವನ್ನು ಅಂಟಿಸಿಕೊಂಡು ಆಕ್ಸಿಜನ್ ಮಾಸ್ಕ್ ಬಳಸಿದಾಗ ಆಕ್ಸಿಜನ್ ಮಟ್ಟ ಎಷ್ಟಿರುತ್ತದೆ ಎಂಬುದನ್ನು ಪರೀಕ್ಷಿಸಿದರು. ಆಕ್ಸಿಜನ್ ಮಾಸ್ಕ್ ಹಾಗೂ ಗಡ್ಡದ ನಡುವೆ ಕಿರಿಕಿರಿ ಅನುಭವವಾಗುತ್ತದೆಯೇ ಎಂಬುದನ್ನು ಸಂಶೋಧನೆ ನಡೆಸಿದರು.

ವಿಮಾನಗಳ ಬಾಗಿಲ ಬಳಿ ದಪ್ಪ ರೇಖೆಗಳಿರಲು ಕಾರಣಗಳಿವು

ಆದರೆ ಈ ಸಂಶೋಧನೆಯಲ್ಲಿ ಅಲ್ಪ ಪ್ರಮಾಣದ ಗಡ್ಡ ಹಾಗೂ ಹೆಚ್ಚು ಗಡ್ಡ ಎರಡೂ ಒಂದೇ ರೀತಿಯ ಅನುಭವಗಳನ್ನು ಪಡೆದಿವೆ ಎಂದು ಕಂಡು ಬಂದಿದೆ. ಆದರೆ ಹಲವು ವರ್ಷಗಳಿಂದ ಜಾರಿಯಲ್ಲಿರುವ ನಿಯಮಗಳನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲವೆಂದು ವಿಮಾನಯಾನ ತಜ್ಞರು ಹೇಳಿದ್ದಾರೆ. ಈ ನಿಯಮಗಳನ್ನು ಬದಲಿಸುವ ಮುನ್ನ ಮತ್ತಷ್ಟು ಸಂಶೋಧನೆ ನಡೆಸಬೇಕು ಎಂಬುದು ವಿಮಾನಯಾನ ತಜ್ಞರ ಅಭಿಪ್ರಾಯ. ಒಟ್ಟಿನಲ್ಲಿ ವಿಮಾನಗಳು ಆಸಕ್ತಿಗಳ ಆಗರವಾಗಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Reasons for airplane doors having thick lines details
Story first published: Monday, October 11, 2021, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X