ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುವುದೆಂದರೆ ಹೆತ್ತವರಿಗೆ ಎಲ್ಲಿಲ್ಲದ ಖುಷಿ. ದೂರದ ಪ್ರಯಾಣ ಮಾಡಿದರೆ ಮಕ್ಕಳು ಮರೆಯಲಾಗದ ಆಹ್ಲಾದಕರ ಅನುಭವಗಳನ್ನು ಪಡೆಯುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ದೂರ ಪ್ರಯಾಣದ ಸಂದರ್ಭದಲ್ಲಿ ಮಕ್ಕಳಿಗೆ ಹಠಾತ್ ಕಾಯಿಲೆ ಬರುವ ಸಾಧ್ಯತೆಗಳಿರುತ್ತವೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಮೋಷನ್ ಸಿಕ್ ನೆಸ್ ಅಥವಾ ಚಲನೆಯ ಕಾಯಿಲೆ ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ಚಲನೆಯ ಕಾಯಿಲೆ ಎಂದರೇನು, ಈ ಕಾಯಿಲೆ ಮಕ್ಕಳ ಮೇಲೆ ಏಕೆ ಹೆಚ್ಚು ಪರಿಣಾಮ ಬೀರುತ್ತದೆ, ಸೆಲ್ ಫೋನ್ ಬಳಸುವಾಗ ಅಥವಾ ಕಾರಿನಲ್ಲಿ ಪ್ರಯಾಣಿಸುವ ವೇಳೆ ಪುಸ್ತಕ ಓದುವುದರಿಂದ ಚಲನೆಯ ಕಾಯಿಲೆ ಏಕೆ ಉಂಟಾಗುತ್ತದೆ ಎಂಬ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಮೋಷನ್ ಸಿಕ್ ನೆಸ್ ಸಮಸ್ಯೆಯನ್ನು ತಪ್ಪಿಸುವುದು ಹೇಗೆ?

ಮೋಷನ್ ಸಿಕ್ ನೆಸ್ ಎಂಬುದು ಕಣ್ಣು, ಕಿವಿ ಹಾಗೂ ದೇಹ ಕಳುಹಿಸುತ್ತಿರುವ ಮಾಹಿತಿಯನ್ನು ಮೆದುಳಿಗೆ ಗ್ರಹಿಸಲು ಸಾಧ್ಯವಾಗದಿದ್ದಾಗ ಉಂಟಾಗುವ ಸಮಸ್ಯೆಯಾಗಿದೆ. ಈ ಕಾಯಿಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಮಕ್ಕಳು ತುಂಬಾ ಚಿಕ್ಕವರಾಗಿರುವುದರಿಂದ, ಕಾರಿನಲ್ಲಿ ಪ್ರಯಾಣಿಸುವಾಗ ಅವರು ಕೆಲವೊಮ್ಮೆ ಕಿಟಕಿಯಿಂದ ಹೊರಗೆ ನೋಡಲಾಗುವುದಿಲ್ಲ. ಆದರೆ ಅವರ ಕಿವಿ ಕಾರು ಚಾಲನೆಯಲ್ಲಿರುವ ಶಬ್ದವನ್ನು ಗ್ರಹಿಸಿ, ಮಾಹಿತಿಯನ್ನು ಮೆದುಳಿಗೆ ಕಳುಹಿಸುತ್ತದೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಆ ಸಮಯದಲ್ಲಿ ಮಕ್ಕಳ ಕಣ್ಣುಗಳು ಪುಸ್ತಕವನ್ನು ಓದುತ್ತಿರಬಹುದು ಅಥವಾ ಅವರು ಮೊಬೈಲ್'ನಲ್ಲಿ ವೀಡಿಯೊ ಗೇಮ್ ಆಡುತ್ತಿರಬಹುದು. ಆದರೆ ಅವರ ದೇಹವು ಕುಳಿತುಕೊಳ್ಳುವ ಸ್ಥಾನದಲ್ಲಿ ಉಳಿಯುತ್ತದೆ. ಆದರೆ ಕಿವಿಗಳು ನಿರಂತರವಾಗಿ ಚಲನೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಮೆದುಳಿಗೆ ಕಳುಹಿಸುತ್ತಿದೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಹೀಗಾಗಿ ಮೆದುಳು ಸಂಘರ್ಷದ ಮಾಹಿತಿಯನ್ನು ಪಡೆದಾಗ ಮೋಷನ್ ಸಿಕ್ ನೆಸ್ ಉಂಟಾಗುತ್ತದೆ. ಈ ಕಾಯಿಲೆಯಿಂದಾಗಿ ಮಕ್ಕಳು ವಾಂತಿ ಅಥವಾ ಅತಿಯಾದಬೆವರುವಿಕೆಯಂತಹ ಸಮಸ್ಯೆಗಳನ್ನು ಎದುರಿಸಬಹುದು.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಚಲನೆ ಕಾಯಿಲೆ ಮಕ್ಕಳಿಗೆ ಸೀಮಿತವಾಗಿಲ್ಲ. ಅದು ಯಾರಿಗಾದರೂ ಆಗಬಹುದು. ಆದರೆ ದೊಡ್ಡವರಿಗಿಂತ ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ. ಸುಮಾರು ಮೂರನೇ ಒಂದು ಭಾಗದಷ್ಟು ಜನರು ಕಾರಿನಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ಚಲನೆ ಕಾಯಿಲೆಗೆ ತುತ್ತಾಗುತ್ತಾರೆ ಎಂದು ಅಂದಾಜಿಸಲಾಗಿದೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

2 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಚಲನೆ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚು. ಕಣ್ಣು, ಕಿವಿ, ಸ್ನಾಯು ಹಾಗೂ ಕೀಲುಗಳಂತಹ ಚಲನೆಯನ್ನು ಗ್ರಹಿಸುವ ದೇಹದ ಭಾಗಗಳಿಂದ ಮೆದುಳು ಸಂಕೇತಗಳನ್ನು ಪಡೆಯುತ್ತದೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಆದರೆ ಈ ಅಂಶಗಳು ಸಂಘರ್ಷದ ಮಾಹಿತಿಯನ್ನು ಕಳುಹಿಸಿದಾಗ ನೀವು ಒಂದೇ ಸ್ಥಳದಲ್ಲಿದ್ದೀರಾ ಅಥವಾ ನೀವು ಚಲಿಸುತ್ತಿದ್ದೀರಾ ಎಂಬುದು ಅರ್ಥವಾಗದೆ ಮೆದುಳು ಗೊಂದಲಕ್ಕೀಡಾಗುತ್ತದೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಇದು ಚಲನೆ ಕಾಯಿಲೆಗೆ ಕಾರಣವಾಗುತ್ತದೆ. ಚಲನೆ ಕಾಯಿಲೆ ಉಂಟಾದಾಗ ವಾಂತಿ, ಅತಿಯಾದ ಬೆವರು, ತಲೆತಿರುಗುವಿಕೆ, ಆಯಾಸ, ತಲೆನೋವು, ಕಿರಿಕಿರಿ ಹಾಗೂ ಯಾವುದೇ ವಿಷಯದತ್ತ ಗಮನಹರಿಸಲು ಸಾಧ್ಯವಾಗದಂತಹ ಸಮಸ್ಯೆಗಳು ಎದುರಾಗುತ್ತವೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಪ್ರಯಾಣಿಸುವಾಗ ಮೊಬೈಲ್ ಫೋನ್ ಬಳಸುತ್ತಿದ್ದರೆ ಅಥವಾ ಪುಸ್ತಕಗಳನ್ನು ಓದುತ್ತಿದ್ದರೆ ಚಲನೆ ಕಾಯಿಲೆ ಬರಬಹುದು. ಕಿವಿ, ಕಣ್ಣು, ಸ್ನಾಯುಗಳು ಚಲನೆಯನ್ನು ಗ್ರಹಿಸದಿದ್ದಾಗ, ವಿರೋಧಾತ್ಮಕ ಮಾಹಿತಿಯು ಮೆದುಳಿಗೆ ಹೋಗಿ ಚಲನೆ ಕಾಯಿಲೆ ಸಂಭವಿಸುತ್ತದೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಚಲನೆ ಕಾಯಿಲೆಯನ್ನು ಕೆಲವು ಸರಳ ವಿಧಾನಗಳ ಮೂಲಕ ತಪ್ಪಿಸಬಹುದು. ಚಲನೆ ಕಾಯಿಲೆಗೆ ಒಳಗಾಗುವ ಮಕ್ಕಳನ್ನು ಸೀಟಿನ ಮಧ್ಯದಲ್ಲಿ ಕೂರಿಸಬೇಕು. ಇದರಿಂದ ಮುಂಭಾಗದ ವಿಂಡ್‌ಶೀಲ್ಡ್ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದ ಚಲನೆ ಕಾಯಿಲೆ ಎದುರಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಕಿವಿ, ಕಣ್ಣುಗಳು ಚಲನೆಯಲ್ಲಿವೆ ಎಂದು ಗ್ರಹಿಸಿ ಅದೇ ಸಂಕೇತ ಮೆದುಳಿಗೆ ಕಳುಹಿಸುತ್ತವೆ. ಮಕ್ಕಳು ಹೊರಗೆ ನೋಡದಿದ್ದರೆ, ಅವರು ಚಲನೆಯಲ್ಲಿರುವುದನ್ನು ಅವರ ಕಣ್ಣುಗಳು ಗ್ರಹಿಸುವುದಿಲ್ಲ. ಇದರಿಂದ ಮೆದುಳಿಗೆ ಸಂಘರ್ಷದ ಮಾಹಿತಿ ದೊರೆತು ಚಲನೆ ಕಾಯಿಲೆ ಸಂಭವಿಸಬಹುದು.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಚಲನೆ ಕಾಯಿಲೆ ಚಾಲಕನ ಮೇಲೆ ಏಕೆ ಪರಿಣಾಮ ಬೀರುವುದಿಲ್ಲಎಂಬುದು ಇದರಿಂದ ಅರ್ಥವಾಗುತ್ತದೆ. ಚಾಲಕ ವಿಂಡ್‌ಶೀಲ್ಡ್ ಹಾಗೂ ವಿಂಡೋ ಮೂಲಕ ಹೊರಗೆ ನೋಡುವುದನ್ನೇ ಕಿವಿ, ಕಣ್ಣುಗಳು ಗ್ರಹಿಸಿ ಅದೇ ಮಾಹಿತಿಯನ್ನು ಮೆದುಳಿಗೆ ಕಳುಹಿಸುತ್ತವೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ಆದ್ದರಿಂದ ದೂರದ ಪ್ರಯಾಣ ಮಾಡುವಾಗ ವೀಡಿಯೊ ಗೇಮ್ ಆಡುವುದನ್ನು, ಸಿನಿಮಾ ನೋಡುವುದನ್ನು ಹಾಗೂ ಪುಸ್ತಕಗಳನ್ನು ಓದುವುದನ್ನು ತಪ್ಪಿಸುವುದು ಒಳ್ಳೆಯದು. ಈ ಚಟುವಟಿಕೆಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ವಿಂಡೋಗಳನ್ನು ತೆರೆದಿಡುವುದು ಸಹ ಚಲನೆಯ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸುತ್ತದೆ. ಪ್ರಯಾಣಿಕರ ದೈಹಿಕ ಸ್ಥಿತಿ ಸರಿಯಿರದಿದ್ದರೆ ತಾಜಾ ಗಾಳಿಯು ಚೇತರಿಸಿಕೊಳ್ಳಲು ನೆರವಾಗುತ್ತದೆ.

ಪ್ರಯಾಣದ ವೇಳೆ ಮೋಷನ್ ಸಿಕ್ ನೆಸ್ ಉಂಟಾಗಲು ಕಾರಣಗಳಿವು

ದೂರ ಪ್ರಯಾಣ ಮಾಡುವಾಗ ಉಪ್ಪು ಅಧಿಕವಾಗಿರುವ ಆಹಾರದ ಬದಲು ಮೃದು ಆಹಾರವನ್ನು ಸೇವಿಸುವುದು ಒಳ್ಳೆಯದು. ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯ ತೊಂದರೆಗಳನ್ನು ತಪ್ಪಿಸಬಹುದು.

Most Read Articles

Kannada
English summary
Reasons for getting motion sickness during travel. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X