ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ವಿಮಾನಗಳಲ್ಲಿ ಪ್ರಯಾಣಿಸುವಾಗ ವಿಂಡೋಗಳನ್ನು ಮುಚ್ಚಲು ಫ್ಲೈಟ್ ಅಟೆಂಡೆಂಟ್‌ಗಳು ಒತ್ತಾಯಿಸುವುದನ್ನು ಗಮನಿಸಬಹುದು. ಆದರೆ ವಿಮಾನಗಳು ಟೇಕ್ ಆಫ್ ಆಗುವಾಗ ಹಾಗೂ ಲ್ಯಾಂಡಿಂಗ್ ಆಗುವಾಗ ವಿಂಡೋ ಷಟರ್'ಗಳನ್ನು ತೆಗೆಯುವಂತೆ ಸೂಚನೆ ನೀಡಲಾಗುತ್ತದೆ.

ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ಇದಕ್ಕೆ ಕಾರಣವೇನು ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಈ ಲೇಖನದಲ್ಲಿ ಇದಕ್ಕೆ ಕಾರಣಗಳೇನು ಎಂಬುದನ್ನು ನೋಡೋಣ. ಮೊದಲ ಕಾರಣವೆಂದರೆ ಪ್ರಯಾಣಿಕರ ಸುರಕ್ಷತೆ. ವಿಮಾನಗಳ ಟೇಕ್ ಆಫ್ ಹಾಗೂ ಲ್ಯಾಂಡಿಂಗ್'ಗಳನ್ನು ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ವಿಮಾನ ಟೇಕಾಫ್ ಆಗುವಾಗ ಹಾಗೂ ಇಳಿಯುವಾಗ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚು. ಈ ಸಮಯದಲ್ಲಿ ವಿಂಡೋಗಳನ್ನು ತೆರೆಯುವುದರಿಂದ ಪ್ರಯಾಣಿಕರ ದೃಷ್ಟಿ ಹೊರಗಿನ ಬೆಳಕಿಗೆ ಹೊಂದಿಕೊಳ್ಳುತ್ತವೆ ಎಂಬುದು ಇದರ ಹಿಂದಿರುವ ಕಾರಣ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ವಿಂಡೋಗಳನ್ನು ತೆರೆಯುವ ಮತ್ತೊಂದು ಕಾರಣವೆಂದರೆ ವಿಮಾನದ ರೆಕ್ಕೆಗಳಂತಹ ಭಾಗಗಳಿಗೆ ಏನಾದರೂ ಹಾನಿಯಾಗಿದ್ದರೆ, ಅದನ್ನು ಫ್ಲೈಟ್ ಅಟೆಂಡೆಂಟ್‌ಗಳು ಸುಲಭವಾಗಿ ಗಮನಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು.

ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ಇದರಿಂದ ಪ್ರಯಾಣಿಕರು ಸುರಕ್ಷಿತವಾಗಿ ನಿರ್ಗಮಿಸಲು ಯಾವ ಭಾಗವು ಸುರಕ್ಷಿತವಾಗಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಲಿದೆ. ವಿಂಡೋಗಳನ್ನು ತೆರೆದಿಡಲು ಮತ್ತೊಂದು ಕಾರಣವೆಂದರೆ, ವಿಂಡೋಗಳನ್ನು ಮುಚ್ಚಿದ್ದರೆ, ವಿಮಾನದ ಒಳಗೆ ಏನಾಗುತ್ತದೆ ಎಂಬುದು ಹೊರಗಿನವರಿಗೆ ತಿಳಿಯುವುದಿಲ್ಲ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ಒಂದೊಮ್ಮೆ ಕ್ಯಾಬಿನ್'ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಹೊಗೆ ಕಾಣಿಸಿಕೊಂಡಾಗ ವಿಂಡೋಗಳನ್ನು ಮುಚ್ಚಿದ್ದರೆ ಹೊರಗಿನವರಿಗೆ ತಿಳಿಯುವುದಿಲ್ಲ. ವಿಂಡೋಗಳನ್ನು ತೆರೆದಿದ್ದರೆ ವಿಮಾನಗಳ ಒಳಗೆ ಏನಾಗುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ವಿಮಾನ ಟೇಕಾಫ್ ಆಗುವಾಗ ಮತ್ತು ಲ್ಯಾಂಡಿಂಗ್ ಆಗುವಾಗ ವಿಂಡೋಗಳನ್ನು ತೆರೆದಿಡುವುದು ಎಷ್ಟು ಮುಖ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಭವಿಷ್ಯದಲ್ಲಿ ನೀವು ವಿಮಾನದಲ್ಲಿ ಪ್ರಯಾಣಿಸುವಾಗ ವಿಮಾನಗಳ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಂಡೋಗಳನ್ನು ತೆರೆಯಲು ಮರೆಯಬೇಡಿ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ಈ ಕ್ರಮವು ನಿಮ್ಮ ಸುರಕ್ಷತೆ ಮಾತ್ರವಲ್ಲದೆ ಇತರ ಪ್ರಯಾಣಿಕರ ಸುರಕ್ಷತೆಯನ್ನೂ ಒಳಗೊಂಡಿದೆ ಎಂಬುದನ್ನು ನೆನಪಿನಲ್ಲಿಡಿ. ಇದೇ ವೇಳೆ ವಿಂಡೋಗಳನ್ನು ತೆರೆದಿಡುವುದು ನಿಮಗೂ ಉತ್ತಮ ಅನುಭವವನ್ನು ನೀಡುತ್ತದೆ ಎಂಬುದನ್ನು ಗಮನಿಸಿ.

ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ವಿಮಾನಗಳ ವಿಂಡೋ ಷಟರ್ ತೆರೆಯಲು ಪ್ರಮುಖ ಕಾರಣಗಳಿವು

ವಿಮಾನಗಳ ವಿಂಡೋಗಳನ್ನು ತೆರೆಯುವ ಮೂಲಕ ಆಕಾಶದ ಸೌಂದರ್ಯವನ್ನು ಆನಂದಿಸಬಹುದು. ಈ ಕಾರಣಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ವಿಂಡೋಗಳನ್ನು ತೆರೆದಿಡಲು ಮರೆಯದಿರಿ.

Most Read Articles

Kannada
English summary
Reasons for opening planes window shades during take off and landing. Read in Kannada.
Story first published: Saturday, May 29, 2021, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X