ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಹುರಾಕನ್ ಇವೊ ಸೂಪರ್ ಕಾರ್ ಅನ್ನು ಇಟಲಿಯ ಪೊಲೊನರುವಾ ವಿಮಾನ ನಿಲ್ದಾಣದಲ್ಲಿ ಫಾಲೋ ಮೀ ಕಾರ್ ಆಗಿ ಅನಾವರಣಗೊಳಿಸಿರುವ ಬಗ್ಗೆ ವರದಿಯಾಗಿದೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಈ ಸುದ್ದಿ ತಿಳಿದ ನಂತರ ಫಾಲೋ ಮೀ ಕಾರಿನ ಬಗ್ಗೆ ಚರ್ಚೆಯಾಗುತ್ತಿದೆ. ಫಾಲೋ ಮೀ ಕಾರುಗಳೆಂದರೆ ಏನು, ಅವುಗಳನ್ನು ಯಾವ ಕಾರಣಕ್ಕೆ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುತ್ತದೆ ಎಂಬ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಫಾಲೋ ಮೀ ಕಾರುಗಳ ಕಾರ್ಯ

ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಲು ನೆರವಾಗುವುದು ಫಾಲೋ ಮೀ ಕಾರುಗಳ ಮುಖ್ಯ ಪಾತ್ರ. ವಿಮಾನಗಳಿಗೆ ನಿಖರವಾಗಿ ಮಾರ್ಗದರ್ಶನ ಮಾಡುವುದು ಫಾಲೋ ಮೀ ಕಾರುಗಳ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಗಮ್ಯಸ್ಥಾನವನ್ನು ತಲುಪಿದ ನಂತರ ಫಾಲೋ ಮೀ ಕಾರಿನಲ್ಲಿರುವ ಮಾರ್ಗದರ್ಶಿ (ಮಾರ್ಷಲ್) ವಿಮಾನವನ್ನು ನಿಖರವಾದ ಗೇಟ್ ನಿಲ್ದಾಣದಲ್ಲಿ ನಿಲ್ಲಿಸಲು ನೆರವಾಗುತ್ತಾರೆ. ಈ ಆಧುನಿಕ ಯುಗದಲ್ಲಿ ಫಾಲೋ ಮೀ ಕಾರುಗಳು ಕ್ಯಾಮೆರಾಗಳ ಮೂಲಕ ವಿಮಾನದ ಹಾದಿಯನ್ನು ತೋರಿಸುತ್ತವೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ವಿಮಾನವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆಯೇ ಎಂಬುದನ್ನು ಕ್ಯಾಮೆರಾ ಮೇಲ್ವಿಚಾರಣೆ ಮಾಡಿ ಅದನ್ನು ವಿಮಾನದಲ್ಲಿರುವ ಸ್ಕ್ರೀನ್ ಮೂಲಕ ಪೈಲಟ್‌ಗಳಿಗೆ ತೋರಿಸುತ್ತದೆ. ಇದರಿಂದ ಪೈಲಟ್‌ಗಳಿಗೆ ವಿಮಾನವನ್ನು ಸರಿಯಾದ ಪಥದಲ್ಲಿ ಸಾಗಿಸಲು ಸಾಧ್ಯವಾಗುತ್ತದೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಈ ಕಾರುಗಳನ್ನು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಬಳಸುವುದಿಲ್ಲ ಎಂಬುದು ಗಮನಾರ್ಹ. ದೊಡ್ಡದಾದ ಹಾಗೂ ಹೆಚ್ಚು ದಟ್ಟಣೆಯನ್ನು ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಫಾಲೋ ಮೀ ಕಾರುಗಳನ್ನು ಬಳಸಲಾಗುತ್ತದೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಸಾಮಾನ್ಯ ಕಾರುಗಳು ಹಾಗೂ ಫಾಲೋ ಮೀ ಕಾರುಗಳ ನಡುವಿನ ವ್ಯತ್ಯಾಸ

ಸಾಮಾನ್ಯ ಕಾರುಗಳು ಹಾಗೂ ಫಾಲೋ ಮೀ ಕಾರುಗಳ ನಡುವೆ ಹಲವು ವ್ಯತ್ಯಾಸಗಳಿವೆ. ಪೈಲಟ್‌ಗಳಿಗೆ ಮಾರ್ಗದರ್ಶನ ಮಾಡಲು ಸಹಾಯ ಮಾಡಲು ಹೆಚ್ಚಿನ ತೀವ್ರತೆಯ ಬೆಳಕಿನ ಬಲ್ಬ್‌ಗಳನ್ನು ಫಾಲೋ ಮೀ ಕಾರುಗಳ ರೂಫ್ ಮೇಲೆ ಅಳವಡಿಸಲಾಗಿರುತ್ತದೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಫಾಲೋ ಮೀ ಕಾರುಗಳಲ್ಲಿ ವಿಶೇಷ ಲೈಟ್ ಹಾಗೂ ವಿಭಿನ್ನ ಬಣ್ಣಗಳನ್ನು ಕಾಣಬಹುದು. ಇದರ ಜೊತೆಗೆ ಫಾಲೋ ಮೀ ಕಾರುಗಳಲ್ಲಿ ವಿಮಾನಗಳಿಗೆ ಮಾರ್ಗದರ್ಶನ ನೀಡಲು ಅನುಕೂಲವಾಗುವಂತಹ ವಿವಿಧ ಸಾಧನಗಳನ್ನು ಅಳವಡಿಸಲಾಗುತ್ತದೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಕೆಲವು ಕಾರು ತಯಾರಕ ಕಂಪನಿಗಳು ಫಾಲೋ ಮೀ ಕಾರುಗಳಲ್ಲಿ ಕೆಲವು ವಿಶಿಷ್ಟ ಫೀಚರ್'ಗಳನ್ನು ಸಹ ನೀಡುತ್ತಿವೆ. ವಿಶಿಷ್ಟ ವಾಹನಗಳನ್ನು ಅಭಿವೃದ್ಧಿಪಡಿಸಲುಜನಪ್ರಿಯ ಕಾರು ತಯಾರಕ ಕಂಪನಿಯಾದ ಡೈಮ್ಲರ್ ಇಂಟಾಕ್ಸ್ ಕಾರ್ಯ ನಿರ್ವಹಿಸುತ್ತಿದೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಡೈಮ್ಲರ್ ಇಂಟಾಕ್ಸ್ ಕಂಪನಿಯು ವಿಶ್ವದಾದ್ಯಂತವಿರುವ ವಿಮಾನ ನಿಲ್ದಾಣಗಳಿಗಾಗಿ ಇದುವರೆಗೂ 5,000ಕ್ಕೂ ಹೆಚ್ಚು ವಾಹನಗಳನ್ನು ಉತ್ಪಾದಿಸಿರುವ ಹೆಗ್ಗಳಿಕೆಯನ್ನು ಹೊಂದಿದೆ.

ವಿಮಾನ ನಿಲ್ದಾಣಗಳಲ್ಲಿ ಫಾಲೋ ಮೀ ಕಾರುಗಳ ಬಳಕೆಗೆ ಕಾರಣಗಳಿವು

ಸಾಮಾನ್ಯ ಕಾರುಗಳಿಗೆ ಅವಕಾಶವಿಲ್ಲ

ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ಆಗುವ ವಿಮಾನಗಳಿಗೆ ಮಾರ್ಗದರ್ಶನ ನೀಡಲು ವಿಶಿಷ್ಟ ಫೀಚರ್'ಗಳನ್ನು ಹೊಂದಿರುವ ಫಾಲೋ ಮೀ ಕಾರುಗಳು ಬೇಕಾಗುತ್ತವೆ. ಈ ಕಾರಣಕ್ಕಾಗಿಯೇ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯ ಕಾರುಗಳ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ. ಇದೇ ವೇಳೆ ಫಾಲೋ ಮೀ ಕಾರುಗಳಾಗಿ ಬಳಸುವ ಹೆಚ್ಚಿನ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

Most Read Articles

Kannada
English summary
Reasons for using follow me cars in air ports. Read in Kannada.
Story first published: Wednesday, June 30, 2021, 20:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X