'ಕ್ರಿಕೆಟ್ ಫಾರ್ ಗುಡ್'; ದ್ರಾವಿಡ್‌ಗೆ ಡಸ್ಟರ್ ಉಡುಗೊರೆ

By Nagaraja

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಫ್ರಾನ್ಸ್ ಮೂಲದ ವಾಹನ ತಯಾರಕ ಸಂಸ್ಧೆಯಾಗಿರುವ ರೆನೊ ಇಂಡಿಯಾವು, ತನ್ನ ಜನಪ್ರಿಯ ಡಸ್ಟರ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ನೀಡಿ ಸನ್ಮಾನಿಸಿದೆ.

ಕಳೆದೆರಡು ವರ್ಷಗಳಲ್ಲಿ ಡಸ್ಟರ್ ಭಾರತದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಕಾಂಪಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಗುರುತಿಸಿಕೊಂಡಿದೆ. ಇದೀಗ ಈ ಅತ್ಯಂತ ಯಶಸ್ವಿ ಕಾರನ್ನು 'ದಿ ಗ್ರೇಟ್ ವಾಲ್' ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ.

'ಕ್ರಿಕೆಟ್ ಫಾರ್ ಗುಡ್'; ದ್ರಾವಿಡ್‌ಗೆ ಡಸ್ಟರ್ ಉಡುಗೊರೆ

ನಿಮ್ಮ ಮಾಹಿತಿಗಾಗಿ, ಇತ್ತೀಚೆಗಷ್ಟೇ ರೆನೊ ಸಂಸ್ಥೆಯು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಅವಾರ್ಡ್ಸ್ ಜತೆ ಪಾಲುದಾರಿಕೆಗೆ ಸಹಿ ಹಾಕಿತ್ತು. ಇದರಂತೆ ಕ್ರಿಕೆಟ್ ರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

'ಕ್ರಿಕೆಟ್ ಫಾರ್ ಗುಡ್'; ದ್ರಾವಿಡ್‌ಗೆ ಡಸ್ಟರ್ ಉಡುಗೊರೆ

ತಜ್ಞ ಮಾಜಿ ಕ್ರಿಕೆಟಿಗರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಇದರಂತೆ ತೀರ್ಪುಗಾರರ ಸಮಿತಿಯ ಓರ್ವ ಸದಸ್ಯರೂ ಆಗಿರುವ ದ್ರಾವಿಡ್ ಆವರಿಗೆ 'ಕ್ರಿಕೆಟ್ ಫಾರ್ ಗುಡ್' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

'ಕ್ರಿಕೆಟ್ ಫಾರ್ ಗುಡ್'; ದ್ರಾವಿಡ್‌ಗೆ ಡಸ್ಟರ್ ಉಡುಗೊರೆ

ಇದೀಗ ಎರಡನೇ ಬಾರಿಗೆ ರೆನೊ ಇಂತಹದೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೂ ಮೊದಲು ಬಾಲಿವುಡ್ ಪ್ರಶಸ್ತಿ ಜತೆಯೂ ಕೈಜೋಡಿಸಿಕೊಂಡಿತ್ತು.

'ಕ್ರಿಕೆಟ್ ಫಾರ್ ಗುಡ್'; ದ್ರಾವಿಡ್‌ಗೆ ಡಸ್ಟರ್ ಉಡುಗೊರೆ

ಈ ಹಿಂದೆ 2007ನೇ ಸಾಲಿನಲ್ಲಿ ಮಹೀಂದ್ರ ನೆರವಿನೊಂದಿಗೆ ಲೋಗನ್ ಕಾರು ಪರಿಚಯಿಸಿದ್ದ ರೆನೊ, 2010ರಲ್ಲಿ ಸ್ವತಂತ್ರವಾಗಿ ಪಲ್ಸ್ ಹ್ಯಾಚ್‌ಬ್ಯಾಕ್, ಸ್ಕಾಲಾ ಮತ್ತು ಫ್ಯೂಯನ್ಸ್ ಸೆಡಾನ್ ಕಾರುಗಳನ್ನು ಪರಿಚಯಿಸಿತ್ತು. ಬಳಿಕ ಇದನ್ನು ಡಸ್ಟರ್ ಹಾಗೂ ಕೋಲಿಯೋಸ್ ಎಸ್‌ಯುವಿ ಕಾರುಗಳು ಹಿಂಬಾಲಿಸಿತ್ತು.

'ಕ್ರಿಕೆಟ್ ಫಾರ್ ಗುಡ್'; ದ್ರಾವಿಡ್‌ಗೆ ಡಸ್ಟರ್ ಉಡುಗೊರೆ

ಭಾರತದಲ್ಲಿ ಕ್ರಿಕೆಟ್‌ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದಿರುವ ಕ್ರೀಡೆ. ಹಾಗಿರುವಾಗ ಇಎಸ್‌ಪಿಎನ್ ಕ್ರಿಕ್ಇನ್ಫೋ ಜತೆ ಕೈಜೋಡಿಸಿಕೊಂಡಿರುವುದು ಫ್ರಾನ್ಸ್ ಮೂಲದ ಈ ವಾಹನ ತಯಾರಕ ಸಂಸ್ಥೆಗೆ ಇನ್ನಷ್ಟು ಪ್ರಚಾರ ಲಭಿಸುವಲ್ಲಿ ನೆರವಾಗಲಿದೆ.

'ಕ್ರಿಕೆಟ್ ಫಾರ್ ಗುಡ್'; ದ್ರಾವಿಡ್‌ಗೆ ಡಸ್ಟರ್ ಉಡುಗೊರೆ

ಒಟ್ಟಿನಲ್ಲಿ ಕ್ರಿಕೆಟ್‌ನ ಜೀವಂತ ದಿಗ್ಗಜ ಕರ್ನಾಟಕದ ಕಣ್ಮಣಿ ರಾಹುಲ್ ದ್ರಾವಿಡ್ ಅವರಿಗೆ ಡಸ್ಟರ್ ಎಸ್‌ಯುವಿ ಉಡುಗೊರೆಯಾಗಿ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ಗೆಲ್ಲುವಲ್ಲಿ ರೆನೊ ಯಶಸ್ವಿಯಾಗಿದೆ.

More from DriveSpark

Article Published On: Wednesday, March 19, 2014, 16:08 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+