ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಎಸ್‌ಎಲ್‌ಆರ್ ಮೆಕ್ಲಾರೆನ್, ಮರ್ಸಿಡಿಸ್ ಬೆಂಝ್ ಹಾಗೂ ಮೆಕ್ಲಾರೆನ್ ಕಂಪನಿಗಳು ಜಂಟಿಯಾಗಿ ವಿನ್ಯಾಸಗೊಳಿಸಿದ ಮಾದರಿಯಾಗಿದೆ. ಈ ಕಾರ್ ಅನ್ನು ಬ್ರಿಟಿಷ್ ಆಟೋಮೊಬೈಲ್ ಕಂಪನಿಯಾದ ಮೆಕ್ಲಾರೆನ್ 2003ರಿಂದ 2009ರವರೆಗೆ ಮಾರಾಟ ಮಾಡುತ್ತಿತ್ತು.

ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಇದು ವಿಶ್ವದ ಅಪರೂಪದ ಸೂಪರ್‌ಕಾರ್‌ಗಳಲ್ಲಿ ಒಂದಾಗಿದೆ. ಈ ಕಾರಿನ ಕೇವಲ 2,100 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಅಮೆರಿಕಾದ ಮಾಧ್ಯಮ ಸೆಲೆಬ್ರಿಟಿ ಪ್ಯಾರಿಸ್ ಹಿಲ್ಟನ್ ಈ ಸೂಪರ್ ಕಾರನ್ನು 463,000 ಅಮೆರಿಕನ್ ಡಾಲರ್ ಅಂದರೆ ಸುಮಾರು ರೂ.3.3 ಕೋಟಿ ನೀಡಿ ಖರೀದಿಸಿದ್ದರು.

ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಅವರ ಬಳಿಯಿದ್ದ ಎಸ್ಎಲ್ಆರ್ ಮೆಕ್ಲಾರೆನ್ ಕಾರನ್ನು ಇತ್ತೀಚೆಗೆ ಇಂಟರ್ನೆಟ್ ಮೂಲಕ ಹರಾಜಿಗೆ ಇಡಲಾಗಿತ್ತು. ಇದನ್ನು ಖರೀದಿಸಿದವರು ಈ ಕಾರಿನ ರಿಪೇರಿಗೆ ಖರ್ಚು ಮಾಡಿದ ಹಣದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಈ ಕಾರನ್ನು ಮತ್ತೊಬ್ಬ ಸೆಲೆಬ್ರಿಟಿ ಖರೀದಿಸಿದ್ದರು. ಈ ಕಾರನ್ನು ರಿಪೇರಿ ಮಾಡಿಸಲು ಇತ್ತೀಚೆಗೆ ಮೆಕ್ಯಾನಿಕ್ ಬಳಿ ಕಾರ್ ಅನ್ನು ಕೊಂಡೊಯ್ಯಲಾಗಿತ್ತು. ಈ ಕಾರು ಖರೀದಿಸಿರುವವರು ಕಾರಿನ ರಿಪೇರಿಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಹೋವಿಸ್ ಗ್ಯಾರೇಜ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಅಪ್ ಲೋಡ್ ಮಾಡಲಾಗಿದೆ. ಪ್ಯಾರಿಸ್ ಹಿಲ್ಟನ್ ಅವರ ಮೆಕ್ಲಾರೆನ್ ಎಸ್‌ಎಲ್‌ಆರ್ ಕಾರನ್ನು ಆನ್‌ಲೈನ್ ಹರಾಜಿನಲ್ಲಿ ರೂ.1.3 ಕೋಟಿಗಳಿಗೆ ಮಾರಾಟ ಮಾಡಲಾಗಿತ್ತು ಎಂದು ಮೋಟಾರ್ 1 ತಿಳಿಸಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಹೊಸ ಮಾಲೀಕರು ಈ ಸೂಪರ್ ಕಾರ್ ಅನ್ನು ಆಯಿಲ್ ಬದಲಾವಣೆಗಾಗಿ ಮೆಕ್ಯಾನಿಕ್ ಬಳಿ ಕೊಂಡೊಯ್ದಿದ್ದಾರೆ. ಆದರೆ ಈ ಕಾರಿನಲ್ಲಿ ಪ್ರಮುಖ ರಿಪೇರಿಗಳಿರುವ ಬಗ್ಗೆ ಅವರಿಗೆ ಮೆಕ್ಯಾನಿಕ್ ಹೇಳಿದ್ದಾನೆ.

ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಕಾರನ್ನು ಪರಿಶೀಲಿಸಿದ ಮೆಕ್ಯಾನಿಕ್ ರಿಪೇರಿಗಳ ದೀರ್ಘ ಪಟ್ಟಿಯನ್ನು ನೀಡಿದ್ದಾನೆ. ಸ್ಟೀಯರಿಂಗ್ ವ್ಹೀಲ್ ರಿಪೇರಿಗೆ 6,270 ಡಾಲರ್, ಮರ್ಸಿಡಿಸ್ ಶೈಲಿಯ ವ್ಹೀಲ್ ಹೊಂದಿದ್ದ ಕರ್ವ್ ಸರಿಪಡಿಸಲು 1,899 ಡಾಲರ್ ವೆಚ್ಚವಾಗಲಿದೆ ಎಂದು ಮೆಕ್ಯಾನಿಕ್ ಹೇಳುತ್ತಾನೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಹೊಸ ಪವರ್ ಸ್ಟೀಯರಿಂಗ್ ಪಂಪ್ ಅಳವಡಿಸಲು 2,220 ಡಾಲರ್, ಕಾರಿನ ಬ್ಯಾಟರಿ ಬದಲಿಸಲು 1,350 ಡಾಲರ್ ವೆಚ್ಚವಾಗುತ್ತದೆ ಎಂದು ಹೇಳುವ ಮೆಕ್ಯಾನಿಕ್ ಅವುಗಳಲ್ಲಿ ಒಂದನ್ನು ಮೂಲ ಉತ್ಪಾದಕರಿಂದ ಖರೀದಿಸಬೇಕು ಎಂದು ಹೇಳುತ್ತಾನೆ.

ಇದರ ಜೊತೆಗೆ ಕಾರು ಮಾಲೀಕರಿಗೆ ಬ್ರೇಕ್ ಲೈನ್‌ಗಳಿಗಾಗಿ 1,350 ಡಾಲರ್, ಟಯರ್ ಪ್ರೆಶರ್ ಸೆನ್ಸಾರ್‌ಗಳಿಗಾಗಿ 1,700 ಡಾಲರ್ ಹಾಗೂ ಹಾಟ್ ಬ್ರೇಕ್ ಕ್ಯಾಲಿಪರ್ ಕೂಲರ್ ಟ್ಯೂಬ್‌ಗಳಿಗಾಗಿ 1,250 ಡಾಲರ್ ನೀಡಬೇಕೆಂದು ಹೇಳುತ್ತಾನೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಮಾಧ್ಯಮ ಸೆಲೆಬ್ರಿಟಿ ಮಾರಾಟ ಮಾಡಿದ ಈ ಸೂಪರ್ ಕಾರಿನ ರಿಪೇರಿ ವೆಚ್ಚವೇ ರೂ.25 ಲಕ್ಷ

ಈ ಮರ್ಸಿಡಿಸ್ ಎಸ್‌ಎಲ್‌ಆರ್ ಕಾರಿನ ಸೂಪರ್ ಚಾರ್ಜ್ಡ್ ವಿ 8 ಎಂಜಿನ್ ನವೀಕರಣ ಸೇರಿದಂತೆ ಎಲ್ಲಾ ರೀತಿಯ ರಿಪೇರಿಗೆ ಸುಮಾರು 34,565 ಡಾಲರ್ ವೆಚ್ಚವಾಗಲಿದೆ ಎಂದು ಮೆಕ್ಯಾನಿಕ್ ಹೇಳುತ್ತಾನೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಇದರ ಬೆಲೆ ಸುಮಾರು ರೂ.25 ಲಕ್ಷಗಳಾಗುತ್ತದೆ. ರಿಪೇರಿಗೆ ನೀಡಲಾಗುವ ಈ ಮೊತ್ತಕ್ಕೆ ಹೊಸ ಕಾರುಗಳನ್ನು ಖರೀದಿಸಬಹುದು.

Most Read Articles

Kannada
English summary
Repair of SLR McLaren super car costs around 25 lakhs. Read in Kannada.
Story first published: Tuesday, June 8, 2021, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X