ಕಾರುಗಳಿಗಿಂತ ಎಸ್‌ಯುವಿಗಳೇ ಹೆಚ್ಚು ಅಪಾಯಕಾರಿ

ಅಮೆರಿಕಾದ ವಿಮಾ ಉದ್ಯಮದ ಇತ್ತೀಚಿನ ಸಂಶೋಧನೆಯ ಪ್ರಕಾರ ಜನರು ಕಾರುಗಳಿಗಿಂತ ಎಸ್‌ಯುವಿಗಳಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಾರೆ. ಕಾರುಗಳಿಗಿಂತ ಜನರು ಎಸ್‌ಯುವಿಗಳಿಂದ ಹೆಚ್ಚು ಗಾಯಗೊಂಡು, ಸಾವನ್ನಪ್ಪುತ್ತಿದ್ದಾರೆ ಎಂದು ಸಂಶೋಧನೆಯಲ್ಲಿ ಕಂಡು ಬಂದಿದೆ.

ಕಾರುಗಳಿಗಿಂತ ಎಸ್‌ಯುವಿಗಳೇ ಹೆಚ್ಚು ಅಪಾಯಕಾರಿ

ಈ ಸಂಶೋಧನೆಯ ಆಧಾರದ ಮೇಲೆ ವಿಮಾ ಉದ್ಯಮವು ಎಸ್‌ಯುವಿಗಳ ವಿನ್ಯಾಸವನ್ನು ಬದಲಾಯಿಸಲು ತಿಳಿಸಿದೆ. ಈ ಸಂಶೋಧನೆ ನಡೆಸಿದ ಸ್ಯಾಮ್ ಮೊನ್‌ಫೋರ್ಟ್ ವಿಮಾ ಸಂಸ್ಥೆಯು ಕಾರುಗಳಿಗಿಂತ ಎಸ್‌ಯುವಿಗಳು ಪಾದಚಾರಿಗಳಿಗೆ ಹೆಚ್ಚು ಮಾರಕವಾಗಿವೆ ಎಂದು ಹೇಳಿದೆ. ಅಪಘಾತ ಸಂಭವಿಸಿದಾಗ ಎಸ್‌ಯುವಿಗಳು ಪಾದಚಾರಿಗಳ ಎದೆ ಹಾಗೂ ಸೊಂಟದ ಭಾಗಕ್ಕೆ ಡಿಕ್ಕಿ ಹೊಡೆಯುವುದರಿಂದ ಅಪಘಾತದಲ್ಲಿ ಹೆಚ್ಚಿನ ಪ್ರಮಾಣದ ಹಾನಿ ಹಾಗೂ ಕೆಲವೊಮ್ಮೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿರುತ್ತವೆ.

ಕಾರುಗಳಿಗಿಂತ ಎಸ್‌ಯುವಿಗಳೇ ಹೆಚ್ಚು ಅಪಾಯಕಾರಿ

ಮಿಚಿಗನ್ ನಗರದಲ್ಲಿ ಎಸ್‌ಯುವಿ ಹಾಗೂ ಪಾದಚಾರಿಗಳ ನಡುವೆ 79 ಅಪಘಾತಗಳು ದಾಖಲಿಸಿದೆ. ಈ ಎಲ್ಲಾ ಪ್ರಕರಣಗಳಲ್ಲಿ, ಎಸ್‌ಯುವಿಯ ವೇಗ 30 ಕಿ.ಮೀಗಳಾಗಿತ್ತು. ಇವುಗಳು ಡಿಕ್ಕಿ ಹೊಡೆದ ರಭಸಕ್ಕೆ ಅವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕಾರುಗಳಿಗಿಂತ ಎಸ್‌ಯುವಿಗಳೇ ಹೆಚ್ಚು ಅಪಾಯಕಾರಿ

ಇದೇ ವೇಗದಲ್ಲಿ ಸಾಮಾನ್ಯ ಕಾರುಗಳು ವ್ಯಕ್ತಿಯೊಬ್ಬನಿಗೆ ಗುದ್ದಿದರೆ, ಕಡಿಮೆ ಹಾನಿಯುಂಟಾಗುತ್ತದೆ. ಈ ವಿಷಯದ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಸ್ಯಾಮ್ ಮೊನ್‌ಫೋರ್ಟ್ ಹೇಳಿದೆ.

ಕಾರುಗಳಿಗಿಂತ ಎಸ್‌ಯುವಿಗಳೇ ಹೆಚ್ಚು ಅಪಾಯಕಾರಿ

ಎಸ್‌ಯುವಿಗಳನ್ನು ಟ್ರಕ್ ಹಾಗೂ ಕ್ರಾಸ್ ಓವರ್ ಯುಟಿಲಿಟಿ ವೆಹಿಕಲ್ (ಸಿಯುವಿ)ಗಳ ರಚನೆಯ ಆಧಾರದ ಮೇಲೆ ತಯಾರಿಸಲಾಗುತ್ತದೆ. ಇವುಗಳು ಸಾಮಾನ್ಯ ಕಾರುಗಳಿಗಿಂತ ಭಾರವಾಗಿರುತ್ತವೆ.ಎಸ್‌ಯುವಿಗಳ ಮುಂಭಾಗವು ಅಗಲವಾಗಿರುತ್ತದೆ. ಇದರಿಂದ ಅವು ಡಿಕ್ಕಿ ಹೊಡೆಯುವ ವ್ಯಕ್ತಿಗಳ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕಾರುಗಳಿಗಿಂತ ಎಸ್‌ಯುವಿಗಳೇ ಹೆಚ್ಚು ಅಪಾಯಕಾರಿ

ಉತ್ತರ ಅಮೆರಿಕಾದಲ್ಲಿ ಎಸ್‌ಯುವಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಅಪಘಾತಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಎಸ್‌ಯುವಿಯ ವೇಗವು ಗಂಟೆಗೆ 30 ಕಿ.ಮೀಗಿಂತ ಹೆಚ್ಚಿದ್ದರೆ, ಅದು ಹೆಚ್ಚಿನ ಹಾನಿ ಉಂಟುಮಾಡುತ್ತದೆ.

ಕಾರುಗಳಿಗಿಂತ ಎಸ್‌ಯುವಿಗಳೇ ಹೆಚ್ಚು ಅಪಾಯಕಾರಿ

ವರದಿಗಳ ಪ್ರಕಾರ, ಅಮೇರಿಕಾದಲ್ಲಿ ಪ್ರತಿವರ್ಷ 1 ದಶಲಕ್ಷ ಎಸ್‌ಯುವಿಗಳನ್ನು ತಯಾರಿಸಲಾಗುತ್ತಿದೆ. ಕ್ರಾಸ್ ಓವರ್ ಕಾರುಗಳ ತಯಾರಿಕೆ ಇತ್ತೀಚಿನ ವರ್ಷಗಳಲ್ಲಿ

ಮೂರು ಪಟ್ಟು ಹೆಚ್ಚಾಗಿದೆ. ಹೆಚ್ಚಿನ ಎತ್ತರದಿಂದಾಗಿ ಎಸ್‌ಯುವಿಗಳ ಮೆಂಟೆನೆನ್ಸ್ ಸರಿಯಾಗಿಲ್ಲ ಎಂದು ಹೇಳಲಾಗಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

Article Published On: Wednesday, June 17, 2020, 17:55 [IST]
English summary
Research claims SUVs causes more damage in road accidents than cars. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+