ಉರಿ ಚಿತ್ರದ ಬಾಲನಟಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 10 ಮಿಲಿಯನ್ ಫಾಲವರ್ಸ್ ಸಂಭ್ರಮ: ಕಾರು ಗಿಫ್ಟ್ ಕೊಟ್ಟ ತಾಯಿ

ಉಡುಗೊರೆ ಸ್ವೀಕರಿಸಲು ಇಷ್ಟಪಡದವರು ಬಹುಶಃ ಯಾರೂ ಇರಲ್ಲ ಎಂದೇ ಹೇಳಬಹುದು. ಪೋಷಕರು, ಮಕ್ಕಳು ಅಥವಾ ಒಡಹುಟ್ಟಿದವರಿಗೆ ಕಾರುಗಳು ಮತ್ತು ಬೈಕುಗಳನ್ನು ಉಡುಗೊರೆಯಾಗಿ ನೀಡುತ್ತಿರುವ ಹಲವಾರು ವೀಡಿಯೊಗಳನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ನೋಡುತ್ತೇವೆ. ಇದೇ ರೀತಿ Uri ಚಿತ್ರದ ಬಾಲನಟಿಗೆ ತಮ್ಮ ತಾಯಿ ದುಬಾರಿ ಕಾರು ಗಿಫ್ಟ್ ಕೊಟ್ಟಿದ್ದಾರೆ.

Uri ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರದಲ್ಲಿನ ಅಭಿನಯದ ಮೂಲಕ ಖ್ಯಾತಿ ಗಳಿಸಿದ ಬಾಲನಟಿ ರಿವಾ ಅರೋರಾ (Riva Arora) ಬಾರಿ ಬೆಲೆಯ ಲಕ್ಷುರಿಯಸ್‌ ಕಾರು ಖರೀದಿಸಿದ್ದಾರೆ. ಹೊಸ ಕಾರಿನ ಜೊತೆ ಫೋಟೋ ಹಂಚಿಕೊಂಡಿದ್ದಾರೆ ರಿವಾ. ಬಾಲನಟಿ ರಿವಾ ಅರೋರಾ ಈಗ ಹೊಸ ಐಷಾರಾಮಿ ಕಾರಿನ ಒಡತಿ. ಸೋಮವಾರ ಬೆಳಗ್ಗೆ ನಟಿಯರು ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಆಡಿ ಕ್ಯೂ 3 ನೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಉರಿ ಚಿತ್ರದ ಬಾಲನಟಿಗೆ ದುಬಾರಿ ಕಾರು ಗಿಫ್ಟ್ ನೀಡಿದ ತಾಯಿ

ಸೂಪರ್ ಹಿಟ್ Uri ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರದಲ್ಲಿನ ಅಭಿನಯದ ಮೂಲಕ ಖ್ಯಾತಿ ಗಳಿಸಿದ ಬಾಲನಟಿ ರಿವಾ ಅರೋರಾ (Riva Arora) ಅವರಿಗೆ ಇನ್‌ಸ್ಟಾಗ್ರಾಮ್ ನಲ್ಲಿ 10 ಮಿಲಿಯನ್‌ಗೂ ಹೆಚ್ಚು ಫಾಲೋರ್ಸ್ ದಾಟಿದೆ. ನಟಿ ರಿವಾ ಅರೋರಾಗೆ 10 ಮಿಲಿಯನ್ ಫಾಲೋರ್ಸ್ ದಾಟಿರುವುದರಿಂದ ತಾಯಿ ನಿಶಾ ಅರೋರಾ ಅವರು ದುಬಾರಿ ಬೆಲೆಯ ಕಾರನ್ನು ಗಿಫ್ಟ್ ನೀಡಿದ್ದಾರೆ.

ನಟಿಗೆ ನೀಡಿದ ದುಬಾರಿ ಕಾರು ಹೊಚ್ಚಹೊಸ Audi Q3 ಆಗಿದ್ದು, ಈ ಕಾರಿನ ಆರಂಬಿಕ ಬೆಲೆಯು ರೂ.44 ಲಕ್ಷವಾಗಿದೆ. ನಟಿ ರಿವಾ ಅರೋರಾ ಸೋಷಿಯಲ್ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಹೊಸ ಬ್ಲ್ಯಾಕ್ ಬಣ್ಣದ ಆಡಿ ಕಾರಿನ ಚಿತ್ರಗಳನ್ನು ಗಿಫ್ಟ್ ನೀಡಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಕೆಂಪು ಬಟ್ಟೆಯನ್ನು ಧರಿಸಿ ತನ್ನ ಹೊಸ ಕಾರಿನೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು, 'ಮನೆಯಲ್ಲಿ ಹೊಸ ಮಗು' ಎಂದು ರಿವಾ ಬರೆದುಕೊಂಡಿದ್ದಾರೆ.

ಉರಿ ಚಿತ್ರದ ಬಾಲನಟಿಗೆ ದುಬಾರಿ ಕಾರು ಗಿಫ್ಟ್ ನೀಡಿದ ತಾಯಿ

ರಿವಾ ಅರೋರಾ ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಚಿತ್ರಗಳೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ, "ನಾನು ತಡವಾಗಿ ಬಂದಿದ್ದೇನೆ ಎಂದು ನನಗೆ ತಿಳಿದಿದೆ, ಆದರೆ ನಾನು ಅಂತಿಮವಾಗಿ @nishriv_ ಮತ್ತು @jyotiwadhwa._ ಅವರ ಹೊಸ ಉಡುಗೊರೆ @audiin ನೊಂದಿಗೆ ನನ್ನ 10 ಮಿಲಿಯನ್ ಇನ್‌ಸ್ಟಾ ಕುಟುಂಬವನ್ನು ಆಚರಿಸಿದೆ. ತುಂಬಾ ಧನ್ಯವಾದಗಳು.

'ನಾನು ತಡವಾಗಿ ಬಂದಿದ್ದೇನೆ ಎಂದು ನನಗೆ ತಿಳಿದಿದೆ ಆದರೆ ಅಂತಿಮವಾಗಿ ನನ್ನ ಹೊಸ ಉಡುಗೊರೆ @audiin @nishriv_ ಮತ್ತು @jyotiwadhwa._ ಧನ್ಯವಾದಗಳು ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನನ್ನ ಸಂತೋಷವನ್ನು ನನ್ನ ಮಾತಿನಲ್ಲಿ ಸಾಧ್ಯವಿಲ್ಲ. ನಿಮ್ಮ ಬೇಷರತ್ತಾದ ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ 10.6 ಮಿಲಿಯನ್ ಇನ್‌ಸ್ಟಾ ಕುಟುಂಬಕ್ಕೆ ಧನ್ಯವಾದಗಳು. ಇದು ನಿಜವಾಗಿಯೂ ನನಗೆ ಮರೆಯಲಾಗದ ಕ್ಷಣ ಎಂದು ರಿವಾ ಬರೆದು ಕೊಂಡಿದ್ದಾರೆ.

ನಟಿ ರಿವಾ ಅರೋರಾಗೆ ಉಡುಗೊರೆಯಾಗಿ ನೀಡಿದ, ಆಡಿ ಕ್ಯೂ3 ಐಷಾರಾಮಿ ಎಸ್‌ಯುವಿಯ ನಿಖರವಾದ ರೂಪಾಂತರದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಈ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದರ ವಿನ್ಯಾಸವು ದೊಡ್ಡ Q7 ಎಸ್‍ಯುವಿಯಿಂದ ಸ್ಫೂರ್ತಿ ಪಡೆದಿದೆ ಮತ್ತು ಎಲ್ಲಾ-LED ಹೆಡ್‌ಲ್ಯಾಂಪ್‌ಗಳು, ದೊಡ್ಡ ಮುಂಭಾಗದ ಗ್ರಿಲ್, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಮತ್ತು ಹೆಚ್ಚಿನದನ್ನು ಒಳಗೊಂಡಿದೆ.

ಇನ್ನು ಎಸ್‍ಯುವಿಯಲ್ಲಿ ದೊಡ್ಡದಾದ 10.1-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫ್ರೀ-ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಬ್ರಷ್ಡ್ ಅಲ್ಯೂಮಿನಿಯಂ ಇನ್‌ಸರ್ಟ್‌ಗಳು, ಸನ್ ರೂಫ್, ಆಂಬಿಯೆಂಟ್ ಲೈಟ್‌ಗಳು, ಪಾರ್ಕ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಮುಂತಾದ ಫೀಚರ್ಸ್ ಗಳನ್ನು ಸಹ ಒಳಗೊಂಡಿದೆ. ಈ ಎಸ್‍ಯುವಿಯು ಪಲ್ಸ್ ಆರೆಂಜ್, ಗ್ಲೇಸಿಯರ್ ವೈಟ್, ಕ್ರೋನೋಸ್ ಗ್ರೇ, ಮೈಥೋಸ್ ಬ್ಲಾಕ್ ಮತ್ತು ನವರ್ರಾ ಬ್ಲೂ ಎಂಬ ಬಣ್ಣಗಳಲ್ಲಿ ಲಭ್ಯವಿದೆ.

Article Published On: Thursday, March 23, 2023, 11:46 [IST]
English summary
Riva arora got audi q3 luxury suv as gift from her mom details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+