Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೋಡುಗರಿಗೆ ಭೀತಿಯನ್ನುಂಟು ಮಾಡುತ್ತದೆ ಹೈವೇಯಲ್ಲಿ ನಡೆದ ಈ ಘಟನೆ
ಭಾರತದಲ್ಲಿರುವ ಸುಸಜ್ಜಿತವಾದ ರಸ್ತೆಗಳು ಸಹ ಅಸುರಕ್ಷಿತವೆಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅಂತಹ ರಸ್ತೆಗಳಲ್ಲಿ ರಾತ್ರಿ ವೇಳೆಯಲ್ಲಿ ಸಂಚರಿಸುವುದರಿಂದ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಟ್ರಕ್, ಕಾರು ಹಾಗೂ ಇನ್ನಿತರ ವಾಹನಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡಲು ದರೋಡೆಕೋರರು ಹೈವೇಗಳಲ್ಲಿ ಕಾಯುತ್ತಿರುತ್ತಾರೆ. ಇದಕ್ಕೆ ಪುಷ್ಟಿ ನೀಡುವ ಘಟನೆಯೊಂದು ಇತ್ತೀಚಿಗೆ ಒಡಿಶಾದ ಜಾಜ್‌ಪುರದಲ್ಲಿ ನಡೆದಿದೆ. ಈ ಘಟನೆಯು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯ ಬಗ್ಗೆ ಬೇರೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಆದರೆ ಈ ಘಟನೆಯನ್ನು ನೋಡಿದವರಿಗೆ ಆತಂಕವುಂಟಾಗುವುದು ನಿಜ. ಕಾರು ಚಾಲಕನು ಸಮಯಪ್ರಜ್ಞೆಯಿಂದ ವರ್ತಿಸದಿದ್ದರೆ ದರೋಡೆಕೋರರು ಕಾರನ್ನು ಅಥವಾ ಕಾರಿನಲ್ಲಿದ್ದ ವಸ್ತುಗಳನ್ನು ಕದಿಯುವ ಸಾಧ್ಯತೆಗಳಿದ್ದವು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಯಾವುದೇ ಬೆಳಕು ಇಲ್ಲದ ಕತ್ತಲು ರಸ್ತೆಯಲ್ಲಿ ಸಾಗುವ ಕಾರನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಘಟನೆ ಬೆಳಗಿನ ಜಾವ 1.30ರ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದೆ. ಕೆಲವು ಜನರು ಗುಂಪುಗೂಡಿ ರಸ್ತೆಯಲ್ಲಿ ನಿಂತು ಕಾರು ಚಾಲಕನ ಮೇಲೆ ಟಾರ್ಚ್ ಬೆಳಕನ್ನು ಬಿಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಕಾರು ಚಾಲಕನು ಮೊದಲಿಗೆ ಅವರನ್ನು ಪೊಲೀಸರು ಎಂದು ಭಾವಿಸಿ ಕಾರನ್ನು ನಿಲ್ಲಿಸಿದ್ದಾನೆ. ಆದರೆ ಅವರು ಪೊಲೀಸರಲ್ಲ ಬದಲಿಗೆ ದರೋಡೆಕೋರರು ಎಂದು ತಿಳಿದ ತಕ್ಷಣ ಕಾರು ಚಾಲಕ ರಿವರ್ಸ್ ಗೇರ್ ಹಾಕಿ ಕಾರನ್ನು ಹಿಂದಕ್ಕೆ ಚಲಿಸಿದ್ದಾನೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆದರೆ ಆ ಗುಂಪು ಕಾರನ್ನು ನಿಲ್ಲಿಸುವ ಉದ್ದೇಶದಿಂದ ಬೆನ್ನಟ್ಟಿದೆ. ಜೊತೆಗೆ ಕೈಯಲ್ಲಿದ್ದ ವಸ್ತುಗಳನ್ನು ಎಸೆದು ಕಾರಿಗೆ ಹಾನಿ ಮಾಡಲು ಪ್ರಯತ್ನಿಸಿದೆ. ಈ ಮೂಲಕ ಕಾರು ಚಾಲಕ ತಪ್ಪಿಸಿಕೊಳ್ಳದಂತೆ ತಡೆಯಲು ಪ್ರಯತ್ನಿಸಿದೆ. ಆದರೆ ಕಾರು ಚಾಲಕ ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡಿದ್ದಾನೆ.

ಈ ವೀಡಿಯೊದಲ್ಲಿ ಕಾರು ಚಾಲಕ ರಿವರ್ಸ್ ಗೇರ್ ಮೂಲಕ ಬಹಳಷ್ಟು ದೂರ ಸಾಗುವುದನ್ನು ಕಾಣಬಹುದು. ವೀಡಿಯೊ ಚಿಕ್ಕ ಅವಧಿಯಾಗಿರುವುದರಿಂದ ಮುಂದೆ ಏನಾಯಿತು ಎಂಬುದು ತಿಳಿದು ಬಂದಿಲ್ಲ. ಘಟನೆ ನಡೆದ ವೇಳೆ ರಸ್ತೆಯಲ್ಲಿ ಬೇರೆ ದೊಡ್ಡ ವಾಹನಗಳು ಕಂಡು ಬಂದಿಲ್ಲ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಕಾರಣಕ್ಕಾಗಿಯೇ ದರೋಡೆಕೋರರ ಗ್ಯಾಂಗ್ ಈ ರಸ್ತೆಯನ್ನು ಆರಿಸಿ ದರೋಡೆ ಯತ್ನ ನಡೆಸಿದೆ ಎಂದು ಹೇಳಲಾಗಿದೆ. ಕಾರು ಚಾಲಕನು ವೀಡಿಯೊ ಸಾಕ್ಷ್ಯದ ಮೂಲಕ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ಹೇಳಲಾಗಿದೆ.

ಭಾರತದಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ರೀತಿಯ ಅನೇಕ ಘಟನೆಗಳು ಈ ಹಿಂದೆಯೂ ನಡೆದಿವೆ. ದರೋಡೆಕೋರರು ಒಂಟಿಯಾಗಿರುವ ಚಾಲಕರನ್ನು ಗುರಿಯಾಗಿಸಿಕೊಂಡು ಟಯರ್ ಪಂಕ್ಚರ್ ಆಗಿದೆ ಎಂದು ಇಲ್ಲವೇ ಆಯಿಲ್ ಸೋರುತ್ತಿದೆ ಎಂದು ಹೇಳಿ ಆತನನ್ನು ಹೊರಕ್ಕೆ ಬರುವಂತೆ ಮಾಡುತ್ತಾರೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ಅವನು ಹೊರಗೆ ಬಂದಾಗ ದರೋಡೆಕೋರರು ಕಾರಿನಲ್ಲಿರುವ ವಸ್ತುಗಳನ್ನು ದೋಚಿ ಅಲ್ಲಿಂದ ಪರಾರಿಯಾಗುತ್ತಾರೆ. ದರೋಡೆಕೋರರು ಕಾರು ಚಾಲಕರನ್ನು ದೋಚಲು ನಾನಾ ರೀತಿಯ ತಂತ್ರಗಳನ್ನು ಅನುಸರಿಸುತ್ತಾರೆ.

ಆದ್ದರಿಂದ ವಾಹನ ಸವಾರರು ಜಾಗರೂಕರಾಗಿರಬೇಕು. ಸಾಧ್ಯವಾದಷ್ಟು ಬೆಳಕು ಇರುವ ಸಮಯದಲ್ಲಿ ಪ್ರಯಾಣಿಸುವುದು ಉತ್ತಮ. ಜೊತೆಗೆ ರಾತ್ರಿ ವೇಳೆಯಲ್ಲಿ ಪ್ರಯಾಣಿಸುವುದಾದರೆ ಮಾರ್ಗ ಚೆನ್ನಾಗಿ ತಿಳಿದಿದ್ದರೆ ಮಾತ್ರ ಪ್ರಯಾಣಿಸುವುದು ಉತ್ತಮ.