ಕೋಟಿ ಕೋಟಿ ಬೆಲೆಬಾಳುವ ಕಾರುಗಳ ಒಡೆಯ ಯಶ್: ಇಲ್ಲಿದೆ ನೋಡಿ ಕಂಪ್ಲೀಟ್ ಲಿಸ್ಟ್
ಕೆಜಿಎಫ್ ಚಾಪ್ಟರ್ 1& 2 ಬಂದ ಬಳಿಕ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಪ್ಯಾನ್ ಇಂಡಿಯಾ ನಟನಾಗಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಈಗ ಯಶ್ ಗೊತ್ತಿರದ ಚಿತ್ರ ಪ್ರೇಮಿಗಳು ಕಡಿಮೆಯೇ. ಸದಾ ಸುದ್ದಿಯಲ್ಲಿರುವ ನಟ ರಾಕಿಂಗ್ ಸ್ಟಾರ್ ಯಶ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಯಶ್ ಸುದ್ದಿಯಲ್ಲಿದ್ದು ಅದು ಅವರು ಹೊಸ ದುಬಾರಿ ರೇಂಜ್ ರೋವರ್ ಕಾರಿನಿಂದ. ಇತ್ತೀಚೆಗಷ್ಟೇ ಯಶ್ ಐಷಾರಾಮಿ ಎಸ್‌ಯುವಿ ಕಾರು ತಯಾರಿಕಾ ಕಂಪನಿಯಾದಂತಹ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಈ ಕುರಿತಾಗಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂದು ಅವರ ಇತರ ಕಾರುಗಳು ಯಾವುದೆಂದು ನೋಡೋಣ.

ಆಡಿ ಕ್ಯೂ 7: ರಾಕಿಂಗ್ ಸ್ಟಾರ್ ಯಶ್ ಬಳಿ ಇರುವ ಆಡಂಬರ ಕಾರುಗಳಲ್ಲಿ ಈ ಆಡಿ ಕ್ಯೂ 7 ಮುಂಭಾಗದಲ್ಲಿ ನಿಲ್ಲುತ್ತದೆ. ಬಹುತೇಕ ಎಲ್ಲಾ ಸೆಲೆಬ್ರಿಟಿಗಳ ಬಳಿಯೂ ಅವರ ಕಾರು ಕಲೆಕ್ಷನ್‌ಗಳಲ್ಲಿ ಆಡಿ ಕಂಪನಿಯ ಈ ಕಾರನ್ನು ಕಾಣಬಹುದಾಗಿದೆ. ಆಡಿ ಕ್ಯೂ 7 ಕಾರು ಇದರ ಆಕರ್ಷಕ ಡಿಸೈನ್ ಮತ್ತು ಇದರ ಪವರ್ ಫುಲ್ ಪರ್ಫಾಮೆನ್ಸ್‌ಗೆ ಹೆಸರುವಾಸಿ.
ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 350D: ಯಾರದೇ ಕಾರು ಕಲೆಕ್ಷನ್ ಆದರೂ ಅದರಲ್ಲಿ ಮರ್ಸಿಡಿಸ್ ನ ಒಂದು ಕಾರು ಇಲ್ಲವೆಂದರೆ ಅದು ಅಪೂರ್ಣವೇ ಸರಿ. ಯಶ್ ಅವರ ಬಳಿ ಇರುವ ದುಬಾರಿ ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 350D ಕಾರು ಸಹ ಇದೆ. 255 bhp ಮತ್ತು 620 nm ಟಾರ್ಕ್ ಪವರನ್ನು ಉತ್ಪಾದಿಸುವ ಈ ಕಾರು ಯಶ್ ಅವರ ಫೇವರಿಟ್.

ಬಿಎಂಡಬ್ಲ್ಯೂ 520D: ರಾಕಿಂಗ್ ಸ್ಟಾರ್ ಯಶ್ ಬಳಿ ಪ್ರಖ್ಯಾತ ಕಾರು ತಯಾರಿಕಾ ಕಂಪನಿಯಾದ ಬಿಎಂಡಬ್ಲ್ಯೂ ನ 520D ಕಾರು ಸಹ ಇದೆ. ಬಿಎಂಡಬ್ಲ್ಯೂ ಕಾರುಗಳಲ್ಲಿ ಎಲ್ಲರ ಅಚ್ಚುಮೆಚ್ಚಿನ ಕ್ಲಾಸೀ ಕಾರಿದು. ಡೀಸೆಲ್ ಎಂಜಿನ್ ಜೊತೆ ಬರುವ ಈ ಕಾರು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಹೊಂದಿದೆ.
ಮರ್ಸಿಡಿಸ್ ಜಿಎಲ್‌ಸಿ 250D ಕೂಪೆ: ಬಹುತೇಕ ಎಲ್ಲರಿಗೂ ಹಿಡಿಸುವ ಡಿಸೈನ್ ಈ ಕೂಪೆ. ದುಬಾರಿ ಕಾರುಗಳ ಕೂಪೆ ಡಿಸೈನ್ ತುಂಬಾನೇ ಪ್ರಸಿದ್ದಿ. ಯಶ್ ಅವರಿಗೂ ಇದು ಹಿಡಿಸಿದ್ದರಿಂದಲೇ ಅನಿಸುತ್ತದೆ ಅವರೂ ಸಹ ಮರ್ಸಿಡಿಸ್ ಜಿಎಲ್‌ಸಿ 250D ಕೂಪೆ ಕಾರನ್ನು ಖರೀದಿಸಿರುವುದು. ಇದು ಯಶ್ ಬಳಿ ಇರುವ ಮರ್ಸಿಡಿಸ್‌ನ ಕಾರುಗಳಲ್ಲಿ ಎರಡನೇಯದು.
ಪಜೇರೋ ಸ್ಪೋರ್ಟ್ಸ್: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್‌ನಲ್ಲಿ ಮಾಡಿರುವ ಪಾತ್ರ ರಾಕಿ ಭಾಯ್ ಅಂತೆ ಅವರ ಬಳಿ ಇರುವ ಈ ಪಜೇರೋ ಸ್ಪೋರ್ಟ್ಸ್ ಅನ್ನು ಕಾರುಗಳ ರಾಕಿ ಭಾಯ್ ಎನ್ನಬಹುದು. ಇದಕ್ಕೆ ಕಾರಣ ಈ ಕಾರಿನ ಸಾಮರ್ಥ್ಯ. ಆಫ್‌ರೋಡ್‌ಗಳಲ್ಲಿ ನಿರಾಯಾಸವಾಗಿ ಈ ಪಜೇರೋ ಸ್ಪೋರ್ಟ್ಸ್ ಕಾರು ಚಲಿಸುತ್ತದೆ. 2.5 ಲೀಟರ್ ಎಂಜಿನ್ ಇರುವ ಈ ಕಾರಿನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ವ್ಯವಸ್ಥೆಯಿದೆ.
ರೇಂಜ್ ರೋವರ್: ನಮ್ಮ ರಾಕಿಂಗ್ ಸ್ಟಾರ್ ಯಶ್ ಬಳಿ ಇರುವ ಮತ್ತೊಂದು ದುಬಾರಿ ಬೆಲೆಯ ಕಾರು ಎಂದರೆ ಅದು ಇತ್ತೀಚೆಗಷ್ಟೇ ಖರೀದಿಸಿದ ರೇಂಜ್ ರೋವರ್. ವರದಿಗಳ ಪ್ರಕಾರ ಯಶ್ ಅವರ ಈ ಹೊಸ ರೇಂಜ್ ರೋವರ್ ಎಸ್‌ಯುವಿ ಯ ಬೆಲೆಯು ಸುಮಾರು 4 ಕೋಟಿಯಂತೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications