ವಿಶ್ವದ ಅತಿ ದುಬಾರಿ ಬೆಲೆಯ ವಾಚ್ ಬಿಡುಗಡೆಗೊಳಿಸಿದ ರೋಜರ್ ಡ್ಯೂಬಿಸ್
ವಿಶ್ವದ ಅತಿ ದುಬಾರಿ ಬೆಲೆಯ ವಾಚ್ ಅನ್ನು ಪರಿಚಯಿಸಲಾಗಿದೆ. ಈ ಗಡಿಯಾರದ ವಿಶೇಷತೆಯೆಂದರೆ ಇತ್ತೀಚೆಗೆ ಬಿಡುಗಡೆಯಾದ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಡಿಒ ಆರ್‌ಡಬ್ಲ್ಯೂಟಿ ಸೂಪರ್‌ಕಾರಿನ ಆಧಾರದ ಮೇಲೆ ಈ ವಾಚ್ ಅನ್ನು ತಯಾರಿಸಲಾಗಿದೆ.

ಈ ವಾಚ್ ನಲ್ಲಿ ಹುರಾಕನ್ ಕಾರಿನಲ್ಲಿರುವಂತಹ ಹಲವಾರು ಫೀಚರ್ ಗಳನ್ನು ಅಳವಡಿಸಲಾಗಿದೆ. ಈ ಕಾರಣಕ್ಕೆ ಈ ವಾಚ್ ದುಬಾರಿ ಬೆಲೆಯನ್ನು ಹೊಂದಿದೆ. ಹೊಸ ಲ್ಯಾಂಬೊ ಆವೃತ್ತಿಯ ಪ್ರತಿ ವಾಚ್‌ನ ಬೆಲೆ 56,500 ಡಾಲರ್ ಗಳಾಗಿದೆ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ. 42 ಲಕ್ಷಗಳಾಗಿದೆ.

ಸ್ವಿಟ್ಜರ್ಲೆಂಡ್ ಮೂಲದ ವಾಚ್ ತಯಾರಕ ಕಂಪನಿಯಾದ ರೋಜರ್ ಡ್ಯೂಬಿಸ್ ಈ ವಾಚ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಸುಮಾರು 88 ಯುನಿಟ್ ವಾಚ್ ಗಳನ್ನು ಬಿಡುಗಡೆಗೊಳಿಸಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ವಾಚ್ ಗಳನ್ನು ವಿಶ್ವದ ವಿವಿಧ ದೇಶಗಳಲ್ಲಿ ಮಾರಾಟ ಮಾಡಲು ಕಂಪನಿಯು ಯೋಜಿಸಿದೆ. ಈ ವಾಚ್ ಹುರಾಕನ್ ಕಾರಿನಂತೆಯೇ ಇರಲಿದೆ. ಅಂದರೆ ಬ್ಲೂ ಲುಫ್ಫಿ ಹಾಗೂ ಕ್ಯಾಲಿಫೋರ್ನಿಯಾ ಆರೆಂಜ್ ಅನ್ನು ಬಳಸಲಾಗಿದೆ.

ಕಾರಿನಲ್ಲಿರುವ ಗ್ರಿಲ್ ಅನ್ನು ಸೂಚಿಸಲು ಹನಿಕೂಂಬ್ ಮೌಂಟೆಡ್ ಅಂಶಗಳನ್ನು ಈ ವಾಚ್ ನ ಒಳಭಾಗದಲ್ಲಿ ಜೋಡಿಸಲಾಗಿದೆ. ಇದರ ಜೊತೆಗೆ ವಾಚ್ ತಯಾರಕ ಕಂಪನಿಯು ವಾಚ್‌ನ ಒಳ ಭಾಗದಲ್ಲಿ ಹಾಗೂ ಬದಿಯಲ್ಲಿ ಕಾರಿನ ಕೆಲವು ಅಂಶಗಳನ್ನು ಪ್ರತಿಬಿಂಬಿಸುವಂತಹ ಅಂಶಗಳನ್ನು ಅಳವಡಿಸಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇವೆಲ್ಲವೂ ಲ್ಯಾಂಬೊರ್ಗಿನಿ ಹುರಾಕನ್ ಕಾರನ್ನು ನೆನಪಿಸುತ್ತವೆ. ಲ್ಯಾಂಬೊರ್ಗಿನಿ ಕಂಪನಿಯು ಇತ್ತೀಚೆಗಷ್ಟೇ ತನ್ನ ಎಸ್‌ಡಿಒ ಆರ್‌ಡಬ್ಲ್ಯೂಟಿ ಹುರಾಕನ್ ಸೂಪರ್‌ಕಾರ್ ಅನ್ನು ಬಿಡುಗಡೆಗೊಳಿಸಿದೆ.

ಈ ಕಾರಿನ ಬೆಲೆ ರೂ.2.43 ಕೋಟಿಗಳಾಗಿದೆ. ಈ ಕಾರಿನಲ್ಲಿ 5.2 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ ವಿ 10 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 63 ಬಿಹೆಚ್‌ಪಿ ಪವರ್ ಹಾಗೂ 565 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 310 ಕಿ.ಮೀಗಳಾಗಿದೆ. ಈ ಕಾರು ಕೇವಲ 3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಇದರ ಜೊತೆಗೆ ಈ ಕಾರು 9 ಸೆಕೆಂಡುಗಳಲ್ಲಿ 0 - 200 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.


Click it and Unblock the Notifications