ಕೋಟಿಗಟ್ಟಲೆ ಬೆಲೆಬಾಳುವ ರೋಲ್ಸ್ ರಾಯ್ಸ್ ಕಾರುಗಳನ್ನು ಯಾಕೆ ಕ್ರ್ಯಾಶ್ ಟೆಸ್ಟ್ ಮಾಡುವುದಿಲ್ಲ? ಕಾರಣ
ಕಳೆದ ಕೆಲವು ವರ್ಷಗಳಿಂದ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಂದಾಗಿ, ಇತ್ತೀಚಿನ ದಿನಗಳಲ್ಲಿ ಸುರಕ್ಷಿತ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಮುಂಚೆ ಕಾರು ಖರೀದಿಸುವಾಗ ಮೈಲೇಜ್ ಹಾಗೂ ಫೀಚರ್ಸ್ ಗಳಿಗೆ ಹೆಚ್ಚಿನ ಪ್ರಮುಖ್ಯತೆಗಳನ್ನು ನೀಡುತಿದ್ದರು, ಆದರೆ ಇದೀಗ ಸುರಕ್ಷತೆಯ ರೇಟಿಂಗ್‌ಗೆ ಆದ್ಯತೆ ನೀಡುತ್ತಿದ್ದಾರೆ
ಕಾರುಗಳ ಕ್ರ್ಯಾಶ್ ಟೆಸ್ಟ್ ನಡೆಸಲು ಪ್ರಪಂಚದಾದ್ಯಂತ ಅನೇಕ ಸಂಸ್ಥೆಗಳು ಇವೆ, ಇವುಗಳು ಕಾರುಗಳನ್ನು ಕ್ರ್ಯಾಶ್ ಟೆಸ್ಟಿಂಗ್ ನಡೆಸಿ ರಿಂದ 5 ಸ್ಟಾರ್ ರೇಟಿಂಗ್ ಅನ್ನು ನೀಡುತ್ತದೆ. ಇವುಗಳಲ್ಲಿ, ಗ್ಲೋಬಲ್ NCAP ಸುರಕ್ಷತಾ ರೇಟಿಂಗ್ ವಿಶ್ವಾದ್ಯಂತ ಗುರುತಿಸಲ್ಪಟ್ಟಿದೆ. ಈ ಸಂಸ್ಥೆಯು ಅನೇಕ ಕಾರು ಕಂಪನಿಗಳ ಕ್ರ್ಯಾಶ್ ಟೆಸ್ಟ್ ಅನ್ನು ನಡೆಸುತ್ತದೆ. ಆದರೆ ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಕಾರು ತಯಾರಕ ರೋಲ್ಸ್ ರಾಯ್ಸ್ ತನ್ನ ಕಾರುಗಳ ಕ್ರ್ಯಾಶ್ ಟೆಸ್ಟ್ ಅನ್ನು ಮಾಡುವುದಿಲ್ಲ.

ರೋಲ್ಸ್ ರಾಯ್ಸ್ ಕಾರಿನ ಬೆಲೆಯು ಬರೊಬ್ಬರಿ ರೂ.5 ಕೋಟಿಯಿಂದ ಆರಂಭವಾಗುತ್ತದೆ. ಜಗತ್ತಿನಲ್ಲಿ ಹಣವಿರುವ ಯಾರಾದರೂ ಕೂಡ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಬಹುದು. ಪ್ರಪಂಚದಾದ್ಯಂತ ಎಲ್ಲಾ ಕಾರು ಕಂಪನಿಗಳು ತನ್ನ ಕಾರುಗಳನ್ನು ಕ್ರ್ಯಾಶ್ ಟೆಸ್ಟ್‌ನಲ್ಲಿ ಒಳಪಡಿಸುತ್ತದೆ. ಆದರೆ ರೋಲ್ಸ್ ರಾಯ್ಸ್ ಮಾತ್ರ ತಮ್ಮ ಕಾರುಗಳನ್ನು ಕ್ರ್ಯಾಶ್ ಟೆಸ್ಟ್ ನಡೆಸುವುದಿಲ್ಲ. ರೋಲ್ಸ್ ರಾಯ್ಸ್ ಕಾರು ಯಾಕೆ ಕ್ರ್ಯಾಶ್ ಟೆಸ್ಟ್ ನಡೆಸುವುದಿಲ್ಲ ಎಂಬ ಕಾರಣ ಆಸಕ್ತಿದಾಯಕವಾಗಿದೆ
ಕ್ರ್ಯಾಶ್ ಟೆಸ್ಟ್
ಪ್ರಪಂಚದಾದ್ಯಂತ ಯಾವುದೇ ಕಾರು ಕಂಪನಿಯು ಹೊಸ ಕಾರನ್ನು ತಯಾರಿಸಿದಾಗ, ಅದು ಮೊದಲು ಅದರ ಸುರಕ್ಷತೆಯನ್ನು ತಿಳಿಸಲು ಕ್ರ್ಯಾಶ್ ಟೆಸ್ಟ್ ಅನ್ನು ಮಾಡುತ್ತದೆ. ಗ್ಲೋಬಲ್ NCAP ನಂತಹ ಜನಪ್ರಿಯ ಕೆಲವು ಕಂಪನಿಗಳು ಕಾರುಗಳನ್ನು ಪ್ರತ್ಯೇಕವಾಗಿ ಕ್ರ್ಯಾಶ್ ಟೆಸ್ಟ್ ಮಾಡುತ್ತದೆ. ಟೆಸ್ಟ್ ಸಮಯದಲ್ಲಿ, ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕಾರು ಕ್ರ್ಯಾಶ್ ಟೆಸ್ಟ್ ಅನ್ನು ನಡೆಸುತ್ತದೆ. ಇದರ ನಂತರ, ಈ ಕಾರುಗಳಿಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ.
ಇನ್ನು ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳನ್ನು ಗ್ಲೋಬಲ್ ಎನ್‌ಸಿಎಪಿಯ ಕ್ರ್ಯಾಶ್ ಟೆಸ್ಟ್‌ಗೆ ಒಳಪಡಿಸಿದೆ. ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ಎರಡು ಎಸ್‍ಯುವಿಗಳು ಗರಿಷ್ಠ ಅಂಕಗಳನ್ನು ಪಡೆದುಕೊಂಡಿದೆ. ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ಒಂದೇ MQB AO IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ. ಇನ್ನು ಗ್ಲೋಬಲ್ NCAP ಮತ್ತೊಮ್ಮೆ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಟೆಸ್ಟ್ ಮಾಡಿದೆ. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಸಿಂಗಲ್-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಕ್ರ್ಯಾಶ್ ಟೆಸ್ಟ್‌ನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 34 ರಲ್ಲಿ 19.19 ಅಂಕಗಳನ್ನು ಗಳಿಸಿದೆ.
ರೋಲ್ಸ್ ರಾಯ್ಸ್ ತನ್ನ ಕಾರನ್ನು ಕಸ್ಟಮೈಸ್ ಮಾಡಿದ ರೀತಿಯಲ್ಲಿ ತಯಾರಿಸುತ್ತದೆ. ಇದರ ನಂತರ, ಕಂಪನಿಯು ಖರೀದಿದಾರನ ಸಂಪೂರ್ಣ ಡೇಟಾವನ್ನು ತನ್ನೊಂದಿಗೆ ಇರಿಸುತ್ತದೆ. ಮತ್ತು ಯಾವುದೇ ಟೆಸ್ಟ್ ಏಜೆನ್ಸಿಗೆ ಕ್ರ್ಯಾಶ್ ಪರೀಕ್ಷೆಗೆ 4 ರಿಂದ 5 ಕಾರುಗಳು ಬೇಕಾಗುತ್ತವೆ. ಈಗ ಕಂಪನಿಯು ಈ ಸಂಸ್ಥೆಗಳಿಗೆ ಕಾರುಗಳನ್ನು ಒದಗಿಸುವುದಿಲ್ಲ. ಅವನು ಹೊಸ ಕಾರುಗಳನ್ನು ಖರೀದಿಸಬೇಕು ಮತ್ತು ಪರೀಕ್ಷಿಸಬೇಕು. ಆದರೆ ರೋಲ್ಸ್ ರಾಯ್ಸ್ ಕಾರುಗಳನ್ನು ಟೆಸ್ಟ್ ಮಾಡುವುದಿಲ್ಲ.
ರೋಲ್ಸ್ ರಾಯ್ಸ್ ಕಾರುಗಳ ಬೆಲೆ ತುಂಬಾ ದುಬಾರಿಯಾಗಿರುತ್ತದೆ. ಅವುಗಳನ್ನು ಖರೀದಿಸಿದ ನಂತರ ಕ್ರ್ಯಾಶ್ ಟೆಸ್ಟ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಕ್ರ್ಯಾಶ್ ಟೆಸ್ಟ್ ನಂತರ ಕಾರು ಯಾವುದೇ ಪ್ರಯೋಜನವಿಲ್ಲರೋಲ್ಸ್ ರಾಯ್ಸ್ ಕಾರುಗಳು ಕ್ರ್ಯಾಶ್ ಟೆಸ್ಟಿಂಗ್‌ಗೆ ಒಳಗಾಗದಿರಲು ಇದೇ ಕಾರಣ. ದುಬಾರಿ ಬೆಲೆ ಹಾಗೂ ಇದು ಗ್ರಾಹಕರಿಗಾಗಿ ಕಸ್ಟಮೈಸ್ ಮಾಡಿ ನೀಡುವುದರಿಂದ ಕ್ರ್ಯಾಶ್ ಟೆಸ್ಟ್ ಅನ್ನು ಮಾಡಲಾಗುವುದಿಲ್ಲ. ಹಲವು ದಶಕಗಳಿಂದ ರೋಲ್ಸ್ ರಾಯ್ಸ್ ಕಂಪನಿ ಐಷಾರಾಮಿ ಕಾರುಗಳ ತಯಾರಿಕೆಯಿಂದ ಸಾಕಷ್ಟು ಖ್ಯಾತಿಗಳಿಸಿದೆ.
ರೋಲ್ಸ್ ರಾಯ್ಸ್ ವಿಶ್ವದ ಅತ್ಯಂತ ಐಷಾರಾಮಿ ಕಾರು ತಯಾರಕ ಕಂಪನಿಯಾಗಿದೆ. ಇದರಿಂದ ಹೊರಬರುವ ಪ್ರತಿ ಕಾರು ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ಈ ಕಾರುಗಳನ್ನು ಹೆಚ್ಚಾಗಿ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಖರೀದಿಸುತ್ತಾರೆ. ಇತ್ತೀಚೆಗೆ ವಿಶ್ವ ಮಾರುಕಟ್ಟೆಯಲ್ಲಿ ಕುಬೇರರು ಕೂಡ ಖರೀದಿಸಲು ಯೋಚಿಸುವಂತಹ ಐಷಾರಾಮಿ ಕಾರನ್ನು ರೋಲ್ಸ್ ರಾಯ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದೆ. ರೋಲ್ಸ್ ರಾಯ್ಸ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಅತ್ಯಂತ ದುಬಾರಿ ಕಾರು 'ಬೋಟ್ ಟೈಲ್'.


Click it and Unblock the Notifications








