ರೋಲ್ಸ್ ರಾಯ್ಸ್ ಕಾರು - ಟ್ರಕ್ ಅಪಘಾತ, ಲಾರಿಯಲ್ಲಿದ್ದರೂ ಸಜೀವ ದಹನ, ಕಾರಿನಲ್ಲಿದ್ದವರೂ ಸೇಫ್
ವಿಶ್ವದಲ್ಲಿ ರೋಲ್ಸ್ ರಾಯ್ಸ್ (Rolls Royce) ಕಾರುಗಳು, ದುಬಾರಿ ಬೆಲೆ ಹಾಗೂ ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿವೆ. ಹೆಚ್ಚುಕಮ್ಮಿ ಪ್ರತಿಯೊಂದು ಕಾರುಗಳನ್ನು ಸುರಕ್ಷತಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ, ಸಾಕಷ್ಟು ಸೇಫ್ಟಿ ಫೀಚರ್ಸ್ ಹೊಂದಿರುವುದರಿಂದ ರೋಲ್ಸ್ ರಾಯ್ಸ್ ಇದರಿಂದ ದೂರವೇ ಉಳಿಯುತ್ತದೆ. ಸದ್ಯ, ಇದೇ ಅಪಘಾತಕ್ಕೆ ತುತ್ತಾಗಿದೆ.
ಹರಿಯಾಣದ ನಗೀನಾ ಪೊಲೀಸ್ ಠಾಣಾ ವ್ಯಾಪ್ತಿಯ ಉಮ್ರಿ ಗ್ರಾಮದ (ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ - Delhi - Mumbai Expressway) ಸಮೀಪ ನಿನ್ನೆ (ಮಂಗಳವಾರ) ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ಚಲಿಸುತ್ತಿತ್ತು ಎನ್ನಲಾದ ಆಯಿಲ್ ಟ್ಯಾಂಕರ್ ಹಾಗೂ ರೋಲ್ಸ್ ರಾಯ್ಸ್ ಫ್ಯಾಂಟಮ್ ನಡುವೆ ಡಿಕ್ಕಿ ಸಂಭವಿಸಿದೆ. ಭಾರೀ ವೇಗದಲ್ಲಿದ್ದ ಕಾರಣ, ಮುಖಾಮುಖಿಯಾದ ರಭಸಕ್ಕೆ ಎರಡು ವಾಹನಗಳು ಪಲ್ಟಿಯಾಗಿವೆ.

ಕೆಲ ಹೊತ್ತಿನಲ್ಲಿಯೇ ಬೆಂಕಿಯು ಹೊತ್ತಿಕೊಂಡಿದೆ. ಟ್ಯಾಂಕರ್ ನಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಹೊರಬರಲಾಗದೇ ಸಿಲುಕಿಕೊಂಡು ದುರದೃಷ್ಟವಶಾತ್ ಸಜೀವವಾಗಿ ದಹನವಾಗಿದ್ದಾರೆ. ಟ್ರಕ್‌ನಲ್ಲಿದ್ದ ಮತ್ತೊಬ್ಬ, ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ, ರೋಲ್ಸ್ ರಾಯ್ಸ್ ಕಾರಿನಲ್ಲಿದ್ದ ಎಲ್ಲರನ್ನು ಮತ್ತೊಂದು ಕಾರಿನಲ್ಲಿ ಹಿಂದೆ ಬರುತ್ತಿದ್ದ ಅವರ ಸಂಬಂಧಿಕರು, ರಕ್ಷಣೆ ಮಾಡಿದ್ದಾರೆ.
ಅವರನ್ನು ಚಿಕಿತ್ಸೆಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸೇರಿಸಲಾಗಿದೆ. ರೋಲ್ಸ್ ರಾಯ್ಸ್ ಕಾರಿನಲ್ಲಿದ್ದವರನ್ನು ಚಂಡೀಗಢ ನಿವಾಸಿಗಳಾದ ದಿವ್ಯಾ ಹಾಗೂ ತಸ್ಬೀರ್, ದೆಹಲಿಯ ವಿಕಾಸ್ ಎಂದು ಗುರುತಿಸಲಾಗಿದೆ. ಇಬ್ಬರು, ಮೃತ ದುರ್ದೈವಿಗಳನ್ನು ಟ್ರಕ್ ಚಾಲಕ ರಾಮಪ್ರೀತ್ ಹಾಗೂ ಕ್ಲೀನರ್ ಕುಲದೀಪ್ ಎಂದು ಹೇಳಲಾಗಿದೆ. ಇಬ್ಬರು ಉತ್ತರ ಪ್ರದೇಶ ನಿವಾಸಿಗಳೆಂದು ತಿಳಿದುಬಂದಿದೆ.

ಬೆಂಕಿ ಹೊತ್ತಿಕೊಂಡ ಬಳಿಕ, ಅದನ್ನು ನಂದಿಸಲು ಸ್ಥಳೀಯರು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಘಟನೆ ಸಂಬಂಧ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ಹೇಳಿಕೆ ದಾಖಲಿಸಿಕೊಂಡ ನಂತರ, ಎಫ್‌ಐಆರ್ ದಾಖಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಘಟನೆಗೆ ಸ್ಪಷ್ಟ ಕಾರಣವೇನೆಂಬುದು ಪೋಲೀಸರ ತನಿಖೆಯಿಂದ ಗೊತ್ತಾಗಬೇಕಾಗಿದೆ.
ಇಲ್ಲಿ ಅಪಘಾತಕ್ಕೆ ಒಳಗಾಗಿರುವುದು ರೋಲ್ಸ್ ರಾಯ್ಸ್ ಫ್ಯಾಂಟಮ್‌ನ ಯಾವ ರೂಪಾಂತರವೆಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕಾರು, ಸಾಮಾನ್ಯವಾಗಿ ಶಕ್ತಿಯುತ 6.7-ಲೀಟರ್ ವಿ12 ಎಂಜಿನ್ ಹೊಂದಿರಲಿದೆ. ರೋಲ್ಸ್ ರಾಯ್ಸ್ ಕಂಪನಿಯು ತನ್ನ ಕಾರುಗಳನ್ನು ಬಹುತೇಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿ, ಮಾರಾಟ ಮಾಡುತ್ತದೆ. ಈ ಕಾರು, ರೂ. 9 ರಿಂದ ರೂ.10.5 ಕೋಟಿ ದರದಲ್ಲಿ ಖರೀದಿಗೆ ಸಿಗಬಹುದು.
ರೋಲ್ಸ್ ರಾಯ್ಸ್ ಫ್ಯಾಂಟಮ್ ತೀವ್ರ ಅಪಘಾತಕ್ಕೆ ಒಳಗಾದರೂ ಅದರ ಪ್ರಯಾಣಿಕರು ಬದುಕುಳಿಯಲು ಕಾರಣ, ಅದರಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳು. ಇದು, 8 ಏರ್‌ಬ್ಯಾಗ್ಸ್, ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಹೈ ಬೀಮ್ ಅಸಿಸ್ಟ್, ಸೀಟ್‌ಬೆಲ್ಟ್ ವಾರ್ನಿಂಗ್ , ಚೈಲ್ಡ್ ಲಾಕ್, ಒವರ್ ಸ್ವೀಡ್ ವಾರ್ನಿಂಗ್, ಸ್ವೀಡ್ ಸೇನಾರ್ಸ್ ಡೋರ್ ಲಾಕ್, ಆಂಟಿ ಥೆಫ್ಟ್ ಎಂಜಿನ್ ಇಮೊಬಿಲೈಸರ್, ಮಿಡಲ್ ರೇರ್ ಥ್ರೀ ಪಾಯಿಂಟ್ ಸೀಟ್‌ಬೆಲ್ಟ್, ಎಮರ್ಜೆನ್ಸಿ ಬ್ರೇಕಿಂಗ್ ಲೈಟ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಪಡೆದಿದೆ.
ಈ ಕಾರಣಕ್ಕೆ ಏನೋ ಶ್ರೀಮಂತರು, ರೋಲ್ಸ್ ರಾಯ್ಸ್ ಕಾರನ್ನು ತಮ್ಮ ಆಯ್ಕೆಯ ವಾಹನವಾಗಿ ಪರಿಗಣಿಸುವುದು. ಎಂತಹ ಅಪಘಾತವಾದರೂ ಇದರಲ್ಲಿ ಪ್ರಯಾಣಿಸುವುದರಿಂದ ಜೀವ ಉಳಿಯುತ್ತದೆ ಎಂದು. ಇನ್ನು, ಈ ಘಟನೆಯಲ್ಲಿ ಚಾಲಕ ಹಾಗೂ ಕ್ಲೀನರ್ ಇಬ್ಬರು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟ ಸಂಗತಿಯಾಗಿದೆ. ಟ್ರಕ್ ವಿರುದ್ಧ ದಿಕ್ಕಿನಿಂದ ಬಂದು ಅಪಘಾತವಾಗಿದೆ ಎಂದು ಹೇಳಲಾಗಿದೆ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications