ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ವಿಶ್ವದ ಪ್ರಮುಖ ಐಷಾರಾಮಿ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಕಳೆದ ಕೆಲವು ತಿಂಗಳುಗಳಿಂದ ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ವಿಮಾನಗಳನ್ನು ಉತ್ಪಾದಿಸುತ್ತಿದೆ.

ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ವಿಮಾನಕ್ಕಿಂತ ಹೆಚ್ಚಾಗಿ ಅದರ ಕೈನೆಟಿಕ್ ಎನರ್ಜಿಯನ್ನು ಪರೀಕ್ಷಿಸಲಾಗುತ್ತಿರುವ ತಂತ್ರಜ್ಞಾನವಿದು. ಈ ಟೆಕ್ನಾಲಜಿಯನ್ನು ಐರನ್ ಬರ್ಡ್ ಎಂದು ಕರೆಯಲಾಗುತ್ತದೆ. ಈ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ವಿಮಾನವು ಈ ಟೆಕ್ನಾಲಜಿಯನ್ನು ಮಾತ್ರವಲ್ಲದೆ 500 ಬಿಹೆಚ್‌ಪಿ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್ ಅನ್ನು ಸಹ ಹೊಂದಿದೆ. ಇದರಲ್ಲಿರುವ ಬ್ಯಾಟರಿಯನ್ನು ಸುಮಾರು 250 ಮನೆಗಳಿಗೆ ವಿದ್ಯುತ್ ಪೂರೈಸಲು ಬಳಸಬಹುದು.

ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ಇವೆಲ್ಲವೂ ಒಟ್ಟಾಗಿ ಸೇರಿ ಈ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಿಮಾನವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ವಿಮಾನವನ್ನಾಗಿ ಮಾಡಲಿವೆ. ಈ ಎಲೆಕ್ಟ್ರಿಕ್ ವಿಮಾನವನ್ನು ರೋಲ್ಸ್ ರಾಯ್ಸ್ ಕಂಪನಿಯ ಆಕ್ಸಲರೇಟ್ ಏರ್ ಕ್ರಾಫ್ಟ್ ಎಲೆಕ್ಟ್ರಿಫಿಕೇಶನ್ ಯೋಜನೆಯ (ಎಸಿಸಿಇಎಲ್) ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ರೋಲ್ಸ್ ರಾಯ್ಸ್‌ನ ಎಸಿಸಿಎಲ್ ಯೋಜನೆಯು ಕಂಪನಿಯ ಪಾಲುದಾರ ಯಾಸಾ ಸೇರಿದಂತೆ ಎಲೆಕ್ಟ್ರಿಕ್ ಮೋಟಾರ್ ಹಾಗೂ ಕಂಟ್ರೋಲರ್ ತಯಾರಕರನ್ನು ಒಳಗೊಂಡಿದೆ. ಈ ತಂಡವು ಈ ಎಲೆಕ್ಟ್ರಿಕ್ ವಿಮಾನದಲ್ಲಿ ಅಳವಡಿಸಲು ಐರನ್ ಬರ್ಡ್ ಟೆಕ್ನಾಲಜಿಯನ್ನು ವಿನ್ಯಾಸಗೊಳಿಸುತ್ತಿದೆ.

ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ಈ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ಬ್ರಿಟಿಷ್ ಸರ್ಕಾರದ ಸಾಮಾಜಿಕ ಸ್ಥಳ ಹಾಗೂ ಇತರ ಆರೋಗ್ಯ ನಿಯಮಗಳಿಗೆ ಅನುಸಾರವಾಗಿ ನಡೆಸಲಾಗುತ್ತಿದೆ ಎಂದು ಉತ್ಪಾದನಾ ಕಂಪನಿಯು ದೃಢಪಡಿಸಿದೆ. ವಿಮಾನದ ಹಾರಾಟಕ್ಕೆ ಅನುಮತಿ ನೀಡುವ ಮೊದಲು ಪ್ರೊಪಲ್ಷನ್ ಸಿಸ್ಟಂಗಳನ್ನು ಹಲವಾರು ಬಾರಿ ಪರೀಕ್ಷಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ಯಾವುದೇ ಮಾಲಿನ್ಯಕಾರಕ ಅಂಶಗಳು ಹೊರಬರುವುದಿಲ್ಲ ಎಂದು ಖಚಿತವಾದ ನಂತರ ವಿಮಾನಕ್ಕೆ ಐರನ್ ಬರ್ಡ್ ಎಂಬ ಹೆಸರಿಡಲಾಗಿದೆ. ಈ ಬಗ್ಗೆ ಮಾತನಾಡಿರುವ ರೋಲ್ಸ್ ರಾಯ್ಸ್‌ನ ಎಲೆಕ್ಟ್ರಿಕ್ ವಿಭಾಗದ ನಿರ್ದೇಶಕರಾದ ರಾಬ್ ವ್ಯಾಟ್ಸನ್, 2050ರ ವೇಳೆಗೆ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ರೋಲ್ಸ್ ರಾಯ್ಸ್ ಪ್ರಮುಖ ಪಾತ್ರ ವಹಿಸಲು ಬದ್ಧವಾಗಿದೆ ಎಂದು ಹೇಳಿದರು.

ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ಎಸಿಸಿಎಲ್ ಯೋಜನೆಗಾಗಿ ಗ್ರೌಂಡ್ ಟೆಸ್ಟ್ ಪೂರ್ಣಗೊಳಿಸುವುದು ಈ ತಂಡದ ಪ್ರಮುಖ ಸಾಧನೆಯಾಗಿದೆ. ಹಾಗೂ ಇದು ವಿಶ್ವ ದಾಖಲೆಯ ಪ್ರಯತ್ನದ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆಯು ರೋಲ್ಸ್ ರಾಯ್ಸ್‌ನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ನಮ್ಮ ಸುಸ್ಥಿರತೆಯ ಕಾರ್ಯತಂತ್ರದ ಪ್ರಮುಖ ಅಂಶವಾಗಿ ವಿಮಾನ ವಿದ್ಯುದೀಕರಣವನ್ನು ಒದಗಿಸುವಲ್ಲಿ ನಾವು ಮುಂದಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ವಿಶ್ವಪ್ರಸಿದ್ಧ ಬ್ರಿಟಿಷ್ ವಾಚ್‌ ತಯಾರಕ ಕಂಪನಿಯಾದ ಬ್ರೆಮಂಡ್ ಈ ಎಲೆಕ್ಟ್ರಿಕ್ ವಿಮಾನದ ವೇಗವನ್ನು ದಾಖಲಿಸುವ ಅಧಿಕೃತ ಸಮಯ ಪಾಲುದಾರನಾಗಿರಲಿದೆ. ವಿಮಾನದ ಕಾಕ್‌ಪಿಟ್ ವಿನ್ಯಾಸದಲ್ಲಿ ಫ್ರೀಮಾಂಟ್ ಕಂಪನಿಯು ಪ್ರಮುಖ ಪಾತ್ರವನ್ನು ವಹಿಸಿದೆ.

ಅತಿ ವೇಗದ ಎಲೆಕ್ಟ್ರಿಕ್ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ ಈ ಐಷಾರಾಮಿ ಕಾರು ತಯಾರಕ ಕಂಪನಿ

ಕಾಕ್‌ಪಿಟ್‌ನಲ್ಲಿಯೂ ಸಹ ಸ್ಟಾಪ್‌ವಾಚ್ ಅಳವಡಿಸಲಾಗುವುದು. ರೋಲ್ಸ್ ರಾಯ್ಸ್ ಕಂಪನಿಯು ತನ್ನ ಹೆನ್ಲಿ-ಆನ್-ಥೇಮ್ಸ್ ಉತ್ಪಾದನಾ ಕೇಂದ್ರದಲ್ಲಿ ಕ್ಯಾನೊಪಿ ಪಬ್ಲಿಷಿಂಗ್ ಕಾಂಪೋನೆಂಟ್ ಗಳನ್ನು ಅಭಿವೃದ್ಧಿಪಡಿಸಿದೆ. ಇದು ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆಗೊಳಿಸಲು ರೋಲ್ಸ್ ರಾಯ್ಸ್ ಕಂಪನಿಯು ಕೈಗೊಂಡಿರುವ ಮೊದಲ ಯೋಜನೆಯಾಗಿದೆ.

Most Read Articles
 
Kannada
English summary
Rolls Royce company completes testing of fastest electric plane. Read in Kannada.
Story first published: Monday, October 5, 2020, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X