ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ ರೋಲ್ಸ್ ರಾಯ್ಸ್

ಭಾರತದಲ್ಲಿ ರೋಲ್ಸ್ ರಾಯ್ಸ್ ಪಿಎಲ್‍‍ಸಿ ಕಂಪನಿಯ ವಿರುದ್ಧ ಲಂಚ ನೀಡಿದ ಕಾರಣಕ್ಕೆ ಸಿಬಿ‍ಐ ಭ್ರಷ್ಟಾಚಾರದ ಪ್ರಕರಣ ದಾಖಲಿಸಿದೆ. ಎಚ್‌ಎಎಲ್, ಗೇಲ್ ಹಾಗೂ ಒಎನ್‌ಜಿಸಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ರೋಲ್ಸ್ ರಾಯ್ಸ್ ಏಜೆಂಟರಿಗೆ ಸುಮಾರು ರೂ.77 ಕೋಟಿ ಲಂಚ ನೀಡಿದೆ ಎಂದು ಸಿಬಿಐ ಆರೋಪಿಸಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ರೋಲ್ಸ್ ರಾಯ್ಸ್ ಮೋಟಾರ್ ಕಾರ್ ವಿರುದ್ದ ಯಾವುದೇ ಪ್ರಕರಣ ದಾಖಲಿಸಿಲ್ಲ. ಪ್ರಕರಣ ದಾಖಲಾಗಿರುವುದು ರೋಲ್ಸ್ ರಾಯ್ಸ್ ಪಿ‍ಎಲ್‍‍ಸಿ ವಿರುದ್ದ. ರೋಲ್ಸ್ ರಾಯ್ಸ್ ಪಿ‍ಎಲ್‍‍ಸಿ ಏರ್‍‍ಕ್ರಾಫ್ಟ್ ಹಾಗೂ ರಕ್ಷಣಾ ಬಿಡಿಭಾಗಗಳನ್ನು ತಯಾರಿಸುತ್ತದೆ. ರೋಲ್ಸ್ ರಾಯ್ಸ್ ಕಂಪನಿಯು ತನ್ನ ಐ‍‍ಷಾರಾಮಿ ಕಾರುಗಳಿಗಾಗಿ ಹೆಸರುವಾಸಿಯಾಗಿದೆ.

ಆದರೆ ಭಾರತದಲ್ಲಿರುವ ಬಹುತೇಕ ಜನರಿಗೆ ರೋಲ್ಸ್ ರಾಯ್ಸ್ ಕಂಪನಿಯು ದೇಶದ ಎರಡನೇ ಅತಿ ದೊಡ್ಡ ಏರ್‍‍ಕ್ರಾಫ್ಟ್ ಎಂಜಿನ್‍‍ಗಳ ತಯಾರಕ ಕಂಪನಿ ಎಂಬುದು ತಿಳಿದಿಲ್ಲ. ಇದರ ಜೊತೆಗೆ ಕಂಪನಿಯು ರಕ್ಷಣಾ ಬಿಡಿಭಾಗಗಳನ್ನು, ನೌಕಾ ಬಿಡಿಭಾಗಗಳನ್ನು ಹಾಗೂ ಇಂಧನವನ್ನು ಸಹ ತಯಾರಿಸುತ್ತದೆ.

ಅಂದ ಹಾಗೆ, ಈ ಭ್ರಷ್ಟಾಚಾರ ಪ್ರಕರಣ ದಾಖಲಾಗಿರುವುದು ಹೆ‍ಚ್‍ಎ‍ಎಲ್, ಗೇಲ್ ಹಾಗೂ ಒ‍ಎನ್‍‍ಜಿ‍‍ಸಿ ಕಂಪನಿಗಳನ್ನು ಒಳಗೊಂಡ ವಿಮಾನಯಾನ ಹಾಗೂ ಇಂಧನ ಕ್ಷೇತ್ರದಲ್ಲಿ. ಹೆಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್), ಗೇಲ್ (ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್) ಹಾಗೂ ಒಎನ್‌ಜಿಸಿ (ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್) ಸಾರ್ವಜನಿಕ ವಲಯದ ಉದ್ಯಮಗಳಾಗಿವೆ. ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವಾಗ ಅವುಗಳು ತಮ್ಮದೇ ಆದ ನಿಯಮ ಹಾಗೂ ಮಾರ್ಗಸೂಚಿಗಳನ್ನು ಪಾಲಿಸುತ್ತವೆ.

ಹೆಚ್‌ಎಎಲ್ ಕಂಪನಿಯು ಒಪ್ಪಂದದಲ್ಲಿ ಪಾಲ್ಗೊಳ್ಳಲು ಯಾವುದೇ ಏಜೆಂಟರಿಗೆ ಅನುಮತಿಯನ್ನು ನೀಡುವುದಿಲ್ಲ. ಆದರೆ ಗೇಲ್ ಹಾಗೂ ಒಎನ್‌ಜಿಸಿ ಕಂಪನಿಗಳು ಏಜೆಂಟರನ್ನು ಹೆಸರಿಸಬೇಕು ಎಂಬ ಷರತ್ತಿನಡಿ ಏಜೆಂಟರು ಪಾಲ್ಗೊಳ್ಳಲು ಅನುಮತಿ ನೀಡುತ್ತವೆ. ಲಂಚ ಪಡೆಯುವುದು, ಕೊಡುವುದು ಸಾರ್ವಜನಿಕ ವಲಯದಲ್ಲಿ ಕಾನೂನುಬಾಹಿರವಾಗಿರುವುದರಿಂದ ಅದನ್ನು ನಿಷೇಧಿಸಲಾಗಿದೆ.

ರೋಲ್ಸ್ ರಾಯ್ಸ್ ತಪ್ಪು ಮಾಡಿರುವುದು ಇಲ್ಲಿಯೇ ಎಂದು ಹೇಳಲಾಗಿದೆ. ಇಟಿಆಟೊ ವರದಿಗಳ ಪ್ರಕಾರ, ರೋಲ್ಸ್ ರಾಯ್ಸ್ ಸಿಂಗಾಪುರ ಮೂಲದ ಅಶೋಕ್ ಪತ್ನಿ ಹಾಗೂ ಅವರ ಕಂಪನಿಗಳನ್ನು ಬಿಡಿಭಾಗಗಳ ಪೂರೈಕೆ ಒಪ್ಪಂದಗಳನ್ನು ಪಡೆಯಲು ಏಜೆಂಟರನ್ನಾಗಿ ನೇಮಿಸಿದೆ. ವರದಿಗಳ ಪ್ರಕಾರ ಎಚ್‌ಎಎಲ್ ಹಾಗೂ ರೋಲ್ಸ್ ರಾಯ್ಸ್ ನಡುವೆ ರೂ. 4,700 ಕೋಟಿಗಳ ವ್ಯವಹಾರ ನಡೆದಿದೆ.

ಈ ವ್ಯವಹಾರವು ಏವನ್ ಹಾಗೂ ಆಲಿಸನ್ ಎಂಜಿನ್‌ಗಳ ಭಾಗಗಳ ಪೂರೈಕೆಗೆ ಸಂಬಂಧ ಪಟ್ಟಿದೆ. ಏವನ್ ಎಂಜಿನ್ ಗಳನ್ನು ರೋಲ್ಸ್ ರಾಯ್ಸ್ ಕಂಪನಿಯೇ ತಯಾರಿಸುತ್ತದೆ. ಆಲಿಸನ್ ಕಂಪನಿಯನ್ನು ರೋಲ್ಸ್ ರಾಯ್ಸ್ 1995ರಲ್ಲಿ ಖರೀದಿಸಿತ್ತು. ಜೆಟ್ ಎಂಜಿನ್‍‍ಗಳನ್ನು ಸದ್ಯಕ್ಕೆ ಗೇಲ್ ಹಾಗೂ ಒಎನ್‌ಜಿಸಿ ಕಂಪನಿಗಳು, ಸ್ಥಾಯಿ ವಿದ್ಯುತ್ ಮೂಲಗಳಾಗಿ ಅನೇಕ ಉದ್ದೇಶಗಳಿಗೆ ಬಳಸುತ್ತಿವೆ.

ರೋಲ್ಸ್ ರಾಯ್ಸ್ ಈ ಎಂಜಿನ್ ಚಾಲನೆಯಲ್ಲಿರಲು ಬಿಡಿಭಾಗಗಳನ್ನು ಪೂರೈಸಲು ಬಯಸಿತ್ತು. ಈ ಉದ್ದೇಶಕ್ಕಾಗಿ ರೋಲ್ಸ್ ರಾಯ್ಸ್ ಒಪ್ಪಂದವನ್ನು ಪಡೆಯಲು ಲಂಚ ನೀಡಿ ಒಪ್ಪಂದವನ್ನು ಪಡೆದುಕೊಂಡಿದೆ. ಬಿಡಿಭಾಗಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಿಬಿಐ ನಡೆಸಿದ ಐದು ವರ್ಷಗಳ ಸುದೀರ್ಘ ತನಿಖೆಯ ನಂತರ ಈಗ ರೋಲ್ಸ್ ರಾಯ್ಸ್ ಕಂಪನಿಗೆ ಸಂಕಷ್ಟ ಎದುರಾಗಿದೆ.

ರೋಲ್ಸ್ ರಾಯ್ಸ್ ಕಂಪನಿಯ ಭ್ರಷ್ಟಾಚಾರದ ಆರೋಪದ ಬಗ್ಗೆ ರಕ್ಷಣಾ ಸಚಿವಾಲಯಕ್ಕೆ ಪತ್ರ ಬಂದ ನಂತರ, ನಂತರ ರಕ್ಷಣಾ ಸಚಿವಾಲಯವು ಈ ಪತ್ರವನ್ನು ಸಿಬಿಐಗೆ ರವಾನಿಸಿ ತನಿಖೆ ನಡೆಸಲು ತಿಳಿಸಿದೆ. ಸಿಬಿಐ ಈಗ ರೋಲ್ಸ್ ರಾಯ್ಸ್ ಪಿಎಲ್‍‍ಸಿ, ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಶೋಕ್ ಪತ್ನಿ, ಅವರ ಕಂಪನಿಗಳು ಹಾಗೂ ಎಚ್‌ಎಎಲ್, ಒಎನ್‌ಜಿಸಿ ಮತ್ತು ಗೇಲ್‌ನ ಕೆಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವಿಮಾನಯಾನ ಉದ್ಯಮ, ರಕ್ಷಣಾ ಹಾಗೂ ಇಂಧನ ಕ್ಷೇತ್ರಗಳು ಶತಕೋಟಿ ಡಾಲರ್ ಬೆಲೆಯನ್ನು ಹೊಂದಿವೆ. ಈ ಉದ್ಯಮಗಳಲ್ಲಿ ಸಾಕಷ್ಟು ಹಣ ಹಾಗೂ ಅಪಾಯವನ್ನು ಒಳಗೊಂಡ ವಹಿವಾಟುಗಳು ನಡೆಯುತ್ತವೆ. ರೋಲ್ಸ್ ರಾಯ್ಸ್ ಪಿಎಲ್‌ಸಿಯ ಈ ಪ್ರಕರಣವು ಮುಂದೆ ಯಾವ ರೀತಿಯ ತಿರುವುದು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರೋಲ್ ರಾಯ್ಸ್ ಒಂದು ಪ್ರತಿಷ್ಠಿತ ಕಂಪನಿಯಾಗಿದ್ದು, ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಅತ್ಯುತ್ತಮ ಕಾರುಗಳ ತಯಾರಿಕೆಯಲ್ಲಿ, ಇಂಧನ ಕ್ಷೇತ್ರದಲ್ಲಿ ಹಾಗೂ ವಿಮಾನದ ಎಂಜಿನ್‌ಗಳನ್ನು ಉತ್ಪಾದಿಸಲು ಖ್ಯಾತಿ ಹೊಂದಿದೆ. ಬಿಡಿಭಾಗಗಳ ಒಪ್ಪಂದದಲ್ಲಿ ನಡೆದಿರುವ ಈ ಅವ್ಯವಹಾರಗಳಿಂದಾಗಿ ಅದು ತನ್ನ ಖ್ಯಾತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Rolls-Royce In Corruption Case? CBI Accuses Rolls-Royce Of Bribery Worth Rs 77 Crore - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more