ತಂಬಾಕು ಮಾರಿ ಖರೀದಿಸಿದ ರಾಶಿ ಸೂಪರ್ ಕಾರುಗಳು: ಫೆರಾರಿ, ಲ್ಯಾಂಬೋರ್ಗಿನಿ, ರೋಲ್ಸ್‌ರಾಯ್ಸ್ ಐಟಿ ವಶಕ್ಕೆ!
ಭಾರತದಲ್ಲಿ ಉದ್ಯಮಿಗಳು ತಮ್ಮ ವ್ಯಾಪಾರ ವಹಿವಾಟು ಬೆಳೆಯುತ್ತಾ ಹೋದಂತೆ ಒಂದೊಂದೇ ಶೋಕಿಗಳು ಆರಂಭವಾಗುತ್ತಾ ಹೋಗುತ್ತದೆ. ದೊಡ್ಡ ದೊಡ್ಡ ಬಂಗಲೆಗಳು, ದುಬಾರಿ ಐಷಾರಾಮಿ ಕಾರು ಬೈಕ್‌ಗಳು, ಬಂಗಾರದ ಒಡವೆಗಳು ಇವುಗಳಲ್ಲಿ ಪ್ರಮುಖವಾದವು. ಆದರೆ ಇದೆಲ್ಲಾ ಶಾಶ್ವತವಲ್ಲಾ ಎಂಬುದಕ್ಕೆ ಇಲ್ಲಿನ ಒಂದು ಘಟನೆ ಸಾಕ್ಷಿಯಾಗಿದೆ. ಇಂದಿನ ಲೇಖನದಲ್ಲಿ ಈ ಘಟನೆ ಕುರಿತಾಗಿ ನೋಡೋಣ.
ಇಲ್ಲೊಬ್ಬ ವ್ಯಕ್ತಿ ತನ್ನ ಬಳಿ ಸಾಕಷ್ಟು ದುಬಾರಿ ಬೆಲೆಯ ಕಾರು ಬೈಕ್‌ಗಳನ್ನು ಹೊಂದಿದ್ದ. ಅದರಲ್ಲಿ ಪೋರ್ಶೆ, ಫೆರಾರಿ, ರೋಲ್ಸ್‌ರಾಯ್ಸ್, ಮೆಕ್‌ಲಾರೆನ್, ಲ್ಯಾಂಬೋರ್ಗಿನಿ ಉರುಸ್ ಹೀಗೆ ವಿಶ್ವದಲ್ಲಿನ ಜನಪ್ರಿಯ ಸೂಪರ್ ಕಾರುಗಳನ್ನು ಹೊಂದಿದ್ದ. ಆದರೆ ಇದೀಗ ಆತನ ಮನೆಗೆ ಇನ್‌ಕಂ ಟ್ಯಾಕ್ಸ್ ಅಧಿಕಾರಿಗಳು ದಾಳಿ ಮಾಡಿ ಈತನ ದುಬಾರಿ ಕಾರುಗಳು ಮತ್ತು ಸುಮಾರು ನಾಲಕೂವರೆ ಕೊಟಿ ರೂಪಾಯಿಗಳ ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾಹಿತಿಗಳ ಪ್ರಕಾರ ಬಂಶಿಧರ್ ಟೋಬ್ಯಾಕೋ (Banshidhar Tobacco Company) ಎಂಬ ಕಂಪನಿಯ ಮಾಲೀಕನಾದ ಶಿವಂ ಮಿಶ್ರಾ ಎಂಬಾತ ಈ ಇನ್‌ಕಂ ಟ್ಯಾಕ್ಸ್ ದಾಳಿಗೆ ಒಳಗಾಗಿ ತನ್ನ ಬಳಿ ಇದ್ದ ದುಬಾರಿ ಸೂಪರ್ ಕಾರುಗಳನ್ನು ಕಳೆದುಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಕಂಪನಿಯಲ್ಲಿ ಅವ್ಯವಹಾರ ನಡೆಸಿ ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎಂಬ ದೂರಿನ ಮೇಲೆ ಐಟಿ ಅಧಿಕಾರಿಗಳು ಈತನ ಮನೆಯ ಮತ್ತು ಇತರ ಸ್ಥಾವರ ಜಂಗಮ ವಸ್ತುಗಳ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈತನ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಹಲವು ಕಡೆ ಐಟಿ ರೈಡ್ ನಡೆದಿದೆ ಎನ್ನಲಾಗುತ್ತಿದೆ. ಇದರಲ್ಲಿ ದೆಹಲಿ, ಮುಂಬೈ, ಕಾನ್ಪುರ ಮತ್ತು ಗುಜರಾತ್‌ನ ಕೆಲವು ಸ್ಥಳಗಳು ಸಹ ಸೇರಿದೆ. ಎಲ್ಲವೂ ಸೇರಿ ಸುಮಾರು 50 ಕೋಟಿ ರೂ ಮೊತ್ತದ ಕಾರುಗಳು ಮತ್ತು ನಾಲ್ಕೂವರೆ ಕೋಟಿ ನಗದನ್ನು ವಶಪಡಿಸಲಾಗಿದೆ. ದಾಖಲೆಗಳಲ್ಲಿ ವರ್ಷಕ್ಕೆ 20 ರಿಂದ 25 ಕೋಟಿ ವಹಿವಾಟುಗಳನ್ನು ತೋರಿಸುತ್ತಿದ್ದ ಆದರೆ ಇದು 100 ರಿಂದ 150 ಕೋಟಿಗೂ ಅಧಿಕವಾಗಿತ್ತೆಂದು ತಿಳಿದು ಬಂದಿದೆ.

ಇನ್ನು ಈತನ ಬಳಿಯಿಂದ ವಶಪಡಿಸಲಾದ ಪ್ರಮುಖ ಕಾರುಗಳೆಂದರೆ, ಮೊದಲನೆಯದು ರೋಲ್ಸ್ ರಾಯ್ಸ್ (Rolls Royce) ಫ್ಯಾಂಟಂ. ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನಲ್ಲಿ 6.75-ಲೀಟರ್ V12 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 460 Ps ಮತ್ತು 720 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿದೆ ಮತ್ತು ಎಲ್ಲಾ ಶಕ್ತಿಯನ್ನು ಹಿಂದಿನ ಚಕ್ರಗಳಿಗೆ ಕಳುಹಿಸಲಾಗುತ್ತದೆ.
ನಂತರ ಈತನ ಕೈಯಿಂದ ವಶಪಡಿಸಲಾದ ಮತ್ತೊಂದು ಪ್ರಮುಖ ಕಾರೆಂದರೆ 5 ಕೊಟಿಗೂ ಹೆಚ್ಚು ಬೆಲೆಬಾಳುವ ಫೆರಾರಿ 812 ಸೂಪರ್ ಫಾಸ್ಟ್. ಕಾರಿನಲ್ಲಿ ವಿ12 ಯೂನಿಟ್ 234 ಸಿಸಿ ಎಂಜಿನ್ ಇರಿಸಲಾಗಿದ್ದು, 790ಬಿಹೆಚ್‍ಪಿ ಮತ್ತು 719 ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ. 7 ಸ್ಪೀಡ್ ಗೇರ್‍ಬಾಕ್ಸ್ ಗೆ ಜೋಡಿಸಲಾಗಿದೆ. ಇದಲ್ಲದೆ 2.9 ಸೆಕೆಂಡಿಗೆ ಗಂಟೆಗೆ 100 ಕಿಲೋಮೀಟರ್ ಚಲಾಯಿಸಬಲ್ಲ ಸಾಮರ್ಥ್ಯ ಹಾಗು ಗಂಟೆಗೆ 340ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಸಾಮರ್ಥ್ಯವನ್ನು ಹೊಂದಿದೆ.
ಶಿವಂ ಮಿಶ್ರಾ ಬಳಿಯಿಂದ ಐಟಿ ಅಧಿಕಾರಿಗಳು ವಶಪಡಿಸಿದ ಮತ್ತೊಂದು ಪ್ರಮುಖ ದುಬಾರಿ ಕಾರೆಂದರೆ ಅದು, ಮೆಕ್ಲಾರೆನ್ 720ಎಸ್ (McLaren). ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು 4.0-ಲೀಟರ್ V8 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 720 ಬಿಹೆಚ್‍ಪಿ ಪವರ್ ಮತ್ತು 770 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಕಾರ್ಬನ್ ಫೈಬರ್ ಪ್ಯಾನಲ್ಗಳ ಬಳಕೆಗಳಿಂದ ಗಮನಾರ್ಹವಾಗಿ ಹಗುರವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications