ಅನಾಥವಾಗಿ ಬಿದ್ದಿದೆ 5 ಕೋಟಿಯ ರೋಲ್ಸ್ ರಾಯ್ಸ್: ಕಾರಣ ಕೇಳಿದೆ ಕರುಳು ಚುರುಕ್ ಎನ್ನುತ್ತದೆ!
ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳನ್ನು ಅನಾಥವಾಗಿ ಬಿದ್ದಿದೆ ಎಂಬ ಮಾತುಗಳು ಅಲ್ಲೊಮ್ಮೆ ಇಲ್ಲೊಮ್ಮೆ ಕೇಳುತ್ತಾ ಇರುತ್ತದೆ. ನಾನಾ ಕಾರಣಗಳಿಂದ ಈ ರೀತಿ ದುಬಾರಿ ಕಾರುಗಳನ್ನು ಬಿಟ್ಟಿ ಬಿಡುವ ಘಟನೆಗಳು ನಡೆಯುತ್ತಿರುತ್ತದೆ. ಇದೀಗ ಇಲ್ಲೊಂದು ಕಡೆ ಬಹುಕೋಟಿ ಬೆಲೆಬಾಳುವ ಅನಾಥ ಕಾರೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಕೊಲ್ಕತ್ತಾದ ಹೋಟೆಲ್ ಒಂದರ ಹೊರಭಾಗದಲ್ಲಿ ಈ ಕಪ್ಪು ಬಣ್ಣದ ರೋಲ್ಸ್ ರೋಯ್ಸ್ ಫ್ಯಾಂಟಂ VIII ಕಾರೊಂದು ಅನಾಥವಾಗಿ ಬಿದ್ದಿದೆ. ಕೊಲ್ಕತ್ತಾದ ಪ್ರಸಿದ್ದ ಹೋಟೆಲ್ ಒಂದರ ಹೊರಗಡೆ ಈ ಲಕ್ಷುರಿ ಸೆಡಾನ್ ಅನ್ನು ಬಿಟ್ಟು ಹೋಗಿದ್ದು, ಕಾರು ಬಹುತೇಕ ಪಾಳು ಬಿದ್ದಂತಾಗಿದೆ ಎಂದು ತಿಳಿದು ಬಂದಿದೆ.

ಬರೋಬ್ಬರಿ ಐದು ಕೋಟಿ ಬೆಲೆ ಬಾಳುವ ಈ ರೋಲ್ಸ್ ರೋಯ್ಸ್ ಫ್ಯಾಂಟಂ VIII (Rolls Royce Phantom) ಕಾರಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅತ್ಯಾಕರ್ಷಕ ಬಣ್ಣ ಮತ್ತು ಡಿಸೈನ್‌ನಿಂದ ಕೂಡಿರುವ ಈ ಕಾರಿನ ರೋಲ್ಸ್ ರಾಯ್ಸ್ ಲೋಗೊ ಬ್ರಶ್ಡ್ ಅಲ್ಯುಮಿನಿಯಂ ಫಿನಿಶಿಂಗ್ ಅನ್ನು ಪಡೆದುಕೊಂಡಿದೆ.
ಇನ್ನು ಈ ಕಾರನ್ನು ಬಿಟ್ಟು ಹೋಗಲು ಕಾರಣವೇನೆಂದು ಪರೀಕ್ಷಿಸಿದಾಗ ತಿಳಿದು ಬಂದ ವಿಚಾರಗಳು ಶಾಕಿಂಗ್ ಆಗಿದೆ. ಈ ಕಾರು ರೋಸ್ ವ್ಯಾಲಿ ಗ್ರೂಪ್‌ನ ಮಾಲೀಕರಾದ ಗೌತಮ್ ಖುಂಡು ಎಂಬವರದ್ದಾಗಿದೆ. ೨೦೧೫ ರಲ್ಲಿ ರೋಸ್ ವ್ಯಾಲಿ ಗ್ರೂಪ್ ಹಣದ ಅವ್ಯವಹಾರದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿತ್ತು. ಅಂದಿನಿಂದ ಈ ಕಾರನ್ನು ಅನಾಥವಾಗಿ ಬಿಟ್ಟು ಹೋಗಲಾಗಿದೆ.

ರೋಲ್ಸ್ ರಾಯ್ಸ್ ಕಾರುಗಳೆಂದರೆ ಭಾರತೀಯ ಶ್ರೀಮಂತರಿಗೂ ಅಚ್ಚು ಮೆಚ್ಚು. ನಮ್ಮ ಕರ್ನಾಟಕದ ಶ್ರೀಮಂತ ಶಾಸಕರೆಂದು ಎನಿಸಿಕೊಂಡಿರುವ ಎಂಟಿಬಿ ನಾಗರಾಜ್ ಅವರ ಬಳಿಯೂ ಈ ಕಂಪನಿಯ ಕಾರುಗಳಿದೆ. ಮೊದಲಿಗೆ ಎಂಟಿಬಿ ನಾಗರಾಜ್ ಬಳಿಯಿರುವ ಬಿಳಿ ಬಣ್ಣದ ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಇರುವುದು ಬಹುತೇಕರಿಗೆ ತಿಳಿದಿದೆ.
ಈ ಕಾರು, ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ರೂ.8.99 ಕೋಟಿಯಿಂದ ರೂ.10.48ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಪೆಟ್ರೋಲ್ ಎಂಜಿನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನಲ್ಲಿ ಪ್ರಯಾಣದ ಅನುಭವವಂತೂ ಸಾಮಾನ್ಯರಿಗೆ ಮರೆಯುವ ಹಾಗಿಲ್ಲ.
ಇನ್ನು ನೂತನ ರೋಲ್ಸ್ ರಾಯ್ಸ್ ಸ್ಪೆಕ್ಟರ್ (Rolls Royce Spectre) ಕಾರನ್ನು ಭಾಷ್ಯಂ ಕನ್ಸ್ಟ್ರಕ್ಷನ್ಸ್ (Baashyaam Constructions) ಮಾಲೀಕರಾದ ಭಾಷಾಂ ಯುವರಾಜ್ (Baashyaam Yuvaraj) ಡೆಲಿವರಿ ಪಡೆಯುತ್ತಿರುವ ಚಿತ್ರಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿವೆ. ಇದು, ಬ್ರಿಟಿಷ್ ವಾಹನ ತಯಾರಕ ಮೊದಲ ಎಲೆಕ್ಟ್ರಿಕ್ ಕಾರು ಆಗಿದ್ದು, ಕೆಲವೊಂದು ದೇಶಗಳಲ್ಲಿ ಮಾತ್ರ ಬಿಡುಗಡೆಯಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಅಧಿಕೃತವಾಗಿ ಈ ಕಾರನ್ನು ಲಾಂಚ್ ಮಾಡಿಲ್ಲ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ರೂ.9 ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಸುಮಾರು ರೂ.10.5 ಕೋಟಿ ಆನ್ - ರೋಡ್ ಬೆಲೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಬೆಲೆಗೆ ಸರಿಹೊಂದುವಂತೆ ಈ ಕಾರು, ಹೆಚ್ಚು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








