ಶರ್ಟ್ ಬಿಚ್ಚಿಕೊಂಡು ಅರೆ ನಗ್ನವಾಗಿ ಬುಲೆಟ್ ಓಡಿಸಿದ ಫಟಿಂಗರು: ಪೊಲೀಸರು ಮಾಡಿದ್ದೇನು ಗೊತ್ತಾ!
ಭಾರತದಲ್ಲಿ ನಾನಾ ರೀತಿಯ ಬೈಕ್ ರೈಡರ್‌ಗಳಿದ್ದಾರೆ. ಪಕ್ಕಾ ರೈಡಿಂಗ್ ಗಿಯರ್‌ಗಳನ್ನು ಬಳಸಿಕೊಂಡು ಶಿಸ್ತಾಗಿ ಬೈಕ್ ರೈಡ್ ಮಾಡುವವರು ಒಂದು ಕಡೆಯಾದರೆ, ಬೇಕಾಬಿಟ್ಟಿ ಯಾವುದೇ ನಿಯಮಗಳನ್ನು ಪಾಲಿಸದೇ ಬೈಕ್ ಓಡಿಸುವವರು ಒಂದು ಕಡೆ. ಇಂತಹವರನ್ನು ನಾವು ರೈಡರ್ಸ್ ಎಂದು ಕರೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕು ಎಂಬ ಕಾರಣಕ್ಕೆ ನಾನಾ ರೀತಿಯ ಕಸರತ್ತುಗಳನ್ನು ಮಾಡಿ ಪೊಲೀಸರ ಅತಿಥಿಯಾದ ಘಟನೆಯೊಂದು ಇದೀಗ ಹೊರಬಿದ್ದಿದೆ. ಈ ಕುರಿತಾಗಿ ನಾವಿಂದು ಈ ಲೇಖನದಲ್ಲಿ ನೋಡಲಿದ್ದು ಇದರ ಕುರಿತಾಗಿನ ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೂ ಓದಿ.
ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ವ್ಯಕ್ತಿಗಳು ವೈರಲ್ ಆಗಬೇಕು ಎಂಬ ಕಾರಣಕ್ಕೆ ಶರ್ಟ್ ತೆಗೆದು (Riding Shirtless) ತನ್ನ ಜಿಮ್ ಬಾಡಿಯನ್ನು ಶೋ ಮಾಡುತ್ತಾ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ರೈಡ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರ ಪರಿಣಾಮವಾಗಿ ಪೊಲೀಸರಿಗೆ ಅತಿಥಿಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಹವದು, ಕ್ರಾಂತಿ ಸಮಯ ನ್ಯೂಸ್ ಅಫೀಶಿಯಲ್ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವಿಡಿಯೋವನ್ನು ಬಿಡಲಾಗಿದ್ದು, ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಕಾಣುವ ಪ್ರಕಾರ ಬೈಕ್ ಸವಾರ ಶರ್ಟ್ ಇಲ್ಲದೆ ಹೆದ್ದಾರಿಯಲ್ಲಿ ಬೈಕ್ ಅನ್ನು ರೈಡ್ ಮಾಡುತ್ತಿದ್ದಾನೆ. ಬೈಕ್ ಓಡುತ್ತಿರುವಂತೆಯೇ ಹಿಂಬದಿಯಲ್ಲಿದ್ದ ಯುವಕ ಸಹ ತನ್ನ ಟೀ ಶರ್ಟ್ ಬಿಚ್ಚಿ ಶೋ ಮಾಡುವುದನ್ನು ನಾವು ಕಾಣಬಹುದಾಗಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಬೈಕ್ ನಂಬರ್ ಅನ್ನು ಬಳಸಿಕೊಂಡು ಅಪರಾಧಿಗಳನ್ನು ಟ್ರ್ಯಾಕ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಹಿತಿಗಳ ಪ್ರಕಾರ ಈ ವಿಡಿಯೋವನ್ನು ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-9 ಕೊಟ್ವಾಲಿ ಪಿಲ್‌ಖುವಾ ಎಂಬಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಭಂಧಿಸಿದಂತೆ ಒಬ್ಬನನ್ನು ಬಂಧಿಸಿರುವ ಪೊಲೀಸರು, ಇನ್ನೊಬ್ಬನಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ. ವಿಡಿಯೋ ಚಿತ್ರೀಕರಣಕ್ಕಾಗಿ ಬಳಸಿದ ಬೈಕ್ ಅನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ತಲೆಮರೆಸಿಕೊಂಡಿರುವ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ರೀತಿ ಉಡಾಫೆಯ ವರ್ತನೆಗಳನ್ನು ತೋರುವವರಿಗೆ ಇದೊಂದು ಪಾಠವಾಗಿರಲಿದೆ.
ಇದೇ ಮೊದಲೇನಲ್ಲ: ಸಾಮಾಜಿಕ ಜಾಲತಾಣಗಳಲ್ಲಿ ಬಟ್ಟೆ ಬಿಚ್ಚಿಕೊಂಡು ವಾಹನ ಚಲಾಯಿಸುವ ಅಥವಾ ಪ್ರಯಾಣಿಸುವ ಘಟನೆ ಇದೇ ಮೊದಲೇನಲ್ಲ. ಕಳೆದ ಕೆಲವು ವರ್ಷಗಳಿಂದ, ಸಾಮಾಜಿಕ ಮಾಧ್ಯಮದ ಜನಪ್ರಿಯತೆಯ ಹೆಚ್ಚಳದೊಂದಿಗೆ, ಹಲವಾರು ಜನರು ಇದೇ ರೀತಿಯ ವೀಡಿಯೊಗಳನ್ನು ಮಾಡುವುದನ್ನು ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದನ್ನು ನಾವು ನೋಡಿದ್ದೇವೆ. ಕೆಲವು ತಿಂಗಳ ಹಿಂದೆ, ಚಲಿಸುತ್ತಿರುವ ಕಾರಿನ ಹೊರಗೆ ಇರುವಾಗ ಇನ್ನೊಬ್ಬ ದೇಹದಾರ್ಢ್ಯಗಾರ ತನ್ನ ಟೀ ಶರ್ಟ್ ಅನ್ನು ತೆಗೆಯುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದ.

ಈ ವೀಡಿಯೊದಲ್ಲಿ, ವ್ಯಕ್ತಿ ತನ್ನ ಹ್ಯುಂಡೈ ವೆರ್ನಾದ ಸನ್‌ರೂಫ್‌ನಿಂದ ಹೊರಗೆ ನಿಂತು ತನ್ನ ಸ್ನಾಯುಗಳನ್ನು ಶೋ ಮಾಡಿದ್ದಾನೆ . ಈ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ತಕ್ಷಣವೇ ಈ ಹ್ಯುಂಡೈ ವೆರ್ನಾ ಮಾಲೀಕರ ಹೆಸರಿಗೆ ಚಲನ್ ನೀಡಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








