ಸೀಟ್ ಬೆಲ್ಟ್ ಹಾಕಿಲ್ಲವೆಂದು ಬೈಕ್ ಸವಾರನಿಗೆ ದಂಡ ಹಾಕಿದ ಪೊಲೀಸರು..!!
ಸೀಟ್ ಬೆಲ್ಟ್ ಹಾಕಿಲ್ಲವೆಂದು ರಾಯಲ್ ಎನ್‌ಫೀಲ್ಡ್ ಸವಾರನಿಗೆ ದಂಡ ಹಾಕಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸೀಟ್ ಬೆಲ್ಟ್ ಹಾಕಿಲ್ಲವೆಂದು ರಾಯಲ್ ಎನ್‌ಫೀಲ್ಡ್ ಸವಾರನಿಗೆ ದಂಡ ಹಾಕಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕಾರಣಾಂತರಗಳಿಂದ ಆ ವ್ಯಕ್ತಿ ಹೆಲ್ಮೆಟ್ ಹಾಕದೇ ಬೈಕ್ ಚಾಲನೆ ಮಾಡ್ತಾ ಇದ್ದ. ಇದನ್ನು ನೋಡಿದ ಟ್ರಾಫಿಕ್ ಪೊಲೀಸರು ಬೈಕ್ ಸವಾರನನ್ನು ತಡೆದು ದಂಡ ಹಾಕಿಯೇ ಬಿಟ್ರು.

ಇನ್ನು ಕಾನೂನು ಪ್ರಕಾರ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುವುದು ಅಪರಾಧವೇ ಸರಿ. ಹೀಗಾಗಿ ಬೈಕ್ ಸವಾರನ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದರು.

ಆದ್ರೆ ದಂಡ ವಸೂಲಿ ಮಾಡಿದ ನಂತರ ಪೊಲೀಸ್ ನೀಡಿದ ರಶೀದಿ ನೋಡಿ ಬೈಕ್ ಸವಾರ ಕಂಗಾಲಾಗಿದ್ದ. ರಶೀದಿಯಲ್ಲಿ ನಮೂದಿಸಲಾಗಿದ್ದ ವಿವರಣೆಗಳು ಬೈಕ್ ಸವಾರನಿಗೆ ನಗೆ ತರಿಸಿದ್ದು ಮಾತ್ರ ಸುಳ್ಳಲ್ಲ.

ಯಾಕೇಂದ್ರೆ ಪೊಲೀಸರು ಹೆಲ್ಮೆಟ್ ಹಾಕದ ಹಿನ್ನೆಲೆ ದಂಡ ವಸೂಲಿ ಮಾಡಿದ್ದಾರು ರಶೀದಿಯಲ್ಲಿ ಮಾತ್ರ ಸೀಟ್ ಬೆಲ್ಟ್ ಧರಿಸಿಲ್ಲವೆಂದೂ ನಮೂದಿಸಿ ಜಾಣ ಕುರುಡತನ ಪ್ರದರ್ಶನ ಮಾಡಿದ್ದರು.

ಅಂದಹಾಗೆ ಇದೆಲ್ಲಾ ನಡೆದಿದ್ದು ಗೋವಾದಲ್ಲಿ. ಅಘನಾಶಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತದೊಂದು ಹಾಸ್ಯಭರಿತ ಪ್ರಸಂಗ ನಡೆದಿದ್ದು, ಪೊಲೀಸರು ನೀಡಿದ ರಶೀದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂತೋಷ್ ನಾಯಕ್ ಎಂಬಾತನಿಗೆ ಈ ರೀತಿ ದಂಡ ವಿಧಿಸಿದ್ದ ಪೊಲೀಸರು, ಹೆಲ್ಮೆಟ್ ಬದಲಿಗೆ ಸೀಟ್ ಬೆಲ್ಟ್ ಧರಿಸಿಲ್ಲವೆಂದು ದಂಡವಸೂಲಿ ಮಾಡಿ ನಗೆಪಾಟಲಿಗೆ ಈಡಾಗಿದ್ದಾರೆ.


Click it and Unblock the Notifications








